ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸಪೋರ್ಟ್ ಗಳಲ್ಲಿ ಜಪಾನ ಮೊದಲ ಸ್ಥಾನದಲ್ಲಿದ್ದರೆ, ಭಾರತ 85 ನೇ ಸ್ಥಾನ !

ನವದೆಹಲಿ – `ಹೆನ್ಲೀ ಪಾಸಪೋರ್ಟ ಇಂಡೆಕ್ಸ’ ಅನುಸಾರ ನಿರ್ಧರಿಸಲಾಗಿರುವ ಅನುಕ್ರಮಣಿಕೆಯಲ್ಲಿ ಅತ್ಯಧಿಕ ಪ್ರಭಾವಶಾಲಿ ಪಾಸಪೋರ್ಟನಲ್ಲಿ ಜಪಾನಿನ ಹೆಸರು ಮೊದಲ ಸ್ಥಾನದಲ್ಲಿದೆ. ಜಪಾನಿನ ಪಾಸಪೋರ್ಟ ಹೊಂದಿರುವ ವ್ಯಕ್ತಿಗೆ 193 ದೇಶಗಳಲ್ಲಿ ವೀಸಾ ಇಲ್ಲದೇ ಪ್ರವೇಶ ಸಿಗುತ್ತದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಜಪಾನ ಪಡೆದಿರುವುದು ಇದು 5 ನೇ ವರ್ಷವಾಗಿದೆ. ಈ ಅನುಕ್ರಮಣಿಕೆಯಲ್ಲಿ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾಗಳಿಗೆ ಎರಡನೇ ಸ್ಥಾನ ನೀಡಲಾಗಿದೆ. ತದನಂತರ ಜರ್ಮನಿ, ಸ್ಪೇನ, ಫಿನಲ್ಯಾಂಡ, ಇಟಲಿ, ಲಕ್ಸಂಬರ್ಗಗಳ ಹೆಸರಿದೆ. ಎಲ್ಲಕ್ಕಿಂತ ಕೊನೆಯಲ್ಲಿ ಅಫಘಾನಿಸ್ತಾನದ ಹೆಸರಿದೆ. ಅಮೇರಿಕಾ 22ನೇ ಸ್ಥಾನದಲ್ಲಿದೆ.

ಪಾಸಪೋರ್ಟ ಅನ್ನು ವಿಸಾ ಇಲ್ಲದೇ ಪ್ರವೇಶಿಸುವ ದೇಶದ ಸಂಖ್ಯೆಯನುಸಾರ ಈ ಅನುಕ್ರಮಣಿಕೆಯನ್ನು ನಿರ್ಧರಿಸಲಾಗುತ್ತದೆ. `ಇಂಟರನ್ಯಾಶನಲ್ ಏಯರ ಟ್ರಾನ್ಸಪೋರ್ಟ ಅಸೋಸಿಯೇಶನ್’ ನಿಂದ ದೊರೆತ ಮಾಹಿತಿಯಿಂದ `ಹೆನ್ಲೀ ಪಾಸಪೋರ್ಟ ಇಂಡೆಕ್ಸ’ ಇದು ಅನುಕ್ರಮಣಿಕೆಯನ್ನು ನಿರ್ಧರಿಸುತ್ತದೆ. ಈ 109 ದೇಶಗಳ ಪಟ್ಟಿಯಲ್ಲಿ ಭಾರತವು 85ನೇ ಸ್ಥಾನದಲ್ಲಿದೆ. ಭಾರತದ ಪಾಸಪೋರ್ಟ ಹೊಂದಿರುವ ವ್ಯಕ್ತಿ 59 ದೇಶಗಳಿಗೆ ವೀಸಾ ಇಲ್ಲದೇ ಪ್ರವೇಶಿಸಬಹುದು. ವಿಶೇಷವೆಂದರೆ ಕಳೆದ ವರ್ಷ ಭಾರತ 87ನೇ ಸ್ಥಾನದಲ್ಲಿತ್ತು. ಈ ಅನುಕ್ರಮಣಿಕೆಯಲ್ಲಿ ನೇಪಾಳ 103 ರಲ್ಲಿ ಇದ್ದರೆ, ಪಾಕಿಸ್ತಾನ 106ನೇ ಸ್ಥಾನದಲ್ಲಿದೆ.