ದಕ್ಷಿಣ ಆಫ್ರಿಕಾದ ಕ್ರಿಕೇಟ್ ಕ್ರೀಡಾಪಟು ಹಾಶಿಮ ಆಮಲಾನಿಂದ ಹಿಂದೂ ಕುಟುಂಬದ ಮತಾಂತರ !

ಪಾಕಿಸ್ತಾನದ ಮಾಜಿ ಕ್ರಿಕೇಟ್ ಆಟಗಾರ ಸಯೀದ ಅನ್ವರನ ಅಪಾದನೆ !

ಇಸ್ಲಾಮಾಬಾದ (ಪಾಕಿಸ್ತಾನ) – ದಕ್ಷಿಣ ಆಫ್ರಿಕಾದ ಮುಸಲ್ಮಾನ ಕ್ರಿಕೇಟ್ ಆಟಗಾರ ಹಾಶಿಮ ಆಮಲಾನು ಒಂದು ಹಿಂದೂ ಕುಟುಂಬವನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆಂದು ಪಾಕಿಸ್ತಾನದ ಮಾಜಿ ಕ್ರಿಕೇಟ್ ಆಟಗಾರನಾದ ಸಯೀದ ಅನ್ವರ ಅಪಾದನೆ ಮಾಡಿದ್ದಾನೆ. ಹಾಶಿಮನು ಭಾರತದ ಐ.ಪಿ.ಎಲ್. ಕ್ರಿಕೇಟ್ ಸ್ಪರ್ಧೆಯಲ್ಲಿ ‘ಪಂಜಾಬ್ ಕಿಂಗ್ಸ್ ನ ತಂಡದಲ್ಲಿ ಆಡುತ್ತಾನೆ. ಇದಕ್ಕೆ ಸಂಬಂಧಿಸಿದ ಸಯೀದ ಅನ್ವರನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವನು ‘ವಿಶ್ವಕಪ್ ಕ್ರಿಕೇಟ್ ಸ್ಪರ್ಧೆಯಲ್ಲಿ ಅನೇಕರು ಮುಸಲ್ಮಾನ ಧರ್ಮ ಸ್ವೀಕರಿಸಿದ್ದಾರೆ, ಎಂದು ಹೇಳಿದ್ದಾನೆ. ಹಾಶಿಮ ಆಮಲಾನು ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಒಂದು ಹಿಂದೂ ಕುಟುಂಬವನ್ನು ಮತಾಂತರ ಮಾಡಿದ್ದಾನೆ’ ಎಂದು ಹೇಳಿದ್ದಾನೆ.

ಇದು ಕ್ರಿಕೇಟ್ ಜಿಹಾದ ! – ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ

ಸಯೀದ ಅನ್ವರನ ಈ ಹೇಳಿಕೆಯಿಂದ ಸಾಮಾಜಿಕ ತಾಣಗಳಲ್ಲಿ ‘ಭಾರತ ಹಾಶಿಮ್ ಆಮಲಾನನ್ನು ಐ.ಪಿ.ಎಲ್.ನಲ್ಲಿ ಕೋಟಿಗಟ್ಟಲೆ ರೂಪಾಯಿ ಸಂಪಾದಿಸಲು ಆಮಂತ್ರಿಸುತ್ತದೆ ಹಾಗೂ ಅವನೇ ಹಿಂದೂ ಧರ್ಮದವರನ್ನು ಮುಸಲ್ಮಾನರನ್ನಾಗಿಸಲು ಹುರಿದುಂಬಿಸುತ್ತಾನೆ’, ‘ಇದು ಕ್ರಿಕೇಟ್ ಜಿಹಾದ’, ಎಂದು ಟೀಕಿಸಲಾಗುತ್ತಿದೆ.

ಸಂಪಾದಕರ ನಿಲುವು

* ಇದರ ವಿಚಾರಣೆ ಮಾಡಿ ಭಾರತೀಯ ಕ್ರಿಕೇಟ್ ಸಂಚಾಲಕ ಮಂಡಳಿ (ಬಿಸಿಸಿಐ.)ಯು ಸತ್ಯವನ್ನು ಹಿಂದೂಗಳ ಮುಂದಿಡಬೇಕು. ಅವನು ನಿಜವಾಗಿಯೂ ಹೀಗೆ ಮಾಡಿದ್ದರೆ ಅವನನ್ನು ಐ.ಪಿ.ಎಲ್.ನಿಂದ ಹೊರದಬ್ಬಬೇಕು !