ಜನತಾದಳ (ಸಂಯುಕ್ತ) ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ ಯಾದವ ನಿಧನ

ಮಾಜಿ ಕೇಂದ್ರ ಸಚಿವ ಶರದ ಯಾದವ

ಪಾಟಲಿಪುತ್ರ (ಬಿಹಾರ) – ಜನತಾದಳ (ಸಂಯುಕ್ತ) ಪಕ್ಷದ ಮಾಜಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಶರದ ಯಾದವ ಇವರು ಜನವರಿ ೧೩ ರಂದು ದೆಹಲಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸು ಆಗಿತ್ತು. ಶರದ ಯಾದವ ಇವರ ಪಾರ್ಥಿವ ಶರೀರ ದೆಹಲಿಯಲ್ಲಿನ ಅವರ ನಿವಾಸದಲ್ಲಿ ಅಂತಿಮದರ್ಶನಕ್ಕಾಗಿ ಇಡಲಾಗಿದೆ. ಜನವರಿ ೧೪ ರಂದು ಮಧ್ಯಪ್ರದೇಶದ ಬಬಯಿ ತಾಲೂಕಿನ ಅಂಕಮಾವು ಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಗೃಹ ಸಚಿವ ಅಮಿತ ಶಹಾ, ರಾಹುಲ ಗಾಂಧಿ, ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ ಇವರು ಶ್ರದ್ಧಾಂಜಲಿ ನೀಡಿದರು.