`2029 ತನಕ ಅರ್ಧ ಹಾಗೂ 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ನಿಯಂತ್ರಣ ಹೊಂದುತ್ತೇವೆ’ ! (ಅಂತೆ)

ಜಿಹಾದಿ ತಾಲಿಬಾನಿಗಳ ದಾವೆ !

ಕಾಬುಲ (ಅಫಘಾನಿಸ್ತಾನ) – ತಾಲಿಬಾನಿನ ಒಬ್ಬ ಭಯೋತ್ಪಾದಕನ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ತಾಲಿಬಾನಿ ಭಯೋತ್ಪಾದಕರು 2029 r ವರೆಗೆ ಅರ್ಧ, ಮತ್ತು 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ತಾಲಿಬಾನ ನಿಯಂತ್ರಣ ಹೊಂದಲಿದೆಯೆಂದು ದಾವೆ ಮಾಡಿದ್ದಾನೆ. `ಈ ವಿಡಿಯೋ ಪಾಕಿಸ್ತಾನಿ ತಾಲಿಬಾನಿಗಳದ್ದಾಗಿದೆಯೋ ಅಥವಾ ಅಫಘಾನಿಸ್ತಾನಿನಲ್ಲಿರುವ ತಾಲಿಬಾನಿಗಳದ್ದಾಗಿದೆಯೋ’ ಎನ್ನುವುದು ಸ್ಪಷ್ಟವಾಗಿಲ್ಲ.

(ಸೌಜನ್ಯ : News Nation)

ಗುಪ್ತಚರ ದಳದ ಸೂತ್ರಗಳನುಸಾರ ಈ ವಿಡಿಯೊ ಒಂದು ನಿಮಷದ್ದಾಗಿದೆ. ಅದರಲ್ಲಿ ತಾಲಿಬಾನ ಸರಕಾರದ ಸೈನಿಕ ತಮ್ಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ಹಾಗೆಯೇ ಈ ವಿಡಿಯೋದಲ್ಲಿ `ಜಗತ್ತಿನ ಯಾವ ದೇಶದ ಮೇಲೆ ಯಾವಾಗ ನಿಯಂತ್ರಣವನ್ನು ಹೊಂದಲಾಗುವುದು?’, ಎಂದು ಕ್ರಮವಾಗಿ ಪದ್ಧತಿಯಲ್ಲಿ ಹೇಳಲಾಗಿದೆ. ಹಾಗೆಯೇ ಒಂದು ನಕಾಶೆಯನ್ನು ತೋರಿಸಲಾಗಿದೆ. ಅದರಲ್ಲಿ ಬೇರೆ ಬೇರೆ ದೇಶಗಳ ಹೆಸರನ್ನು ಬರೆಯಲಾಗಿದೆ. ಪಕ್ಕದಲ್ಲಿ ವರ್ಷಗಳು ಕಾಣಿಸುತ್ತಿದೆ. ಅದಕ್ಕನುಸಾರವಾಗಿ 2029 ರ ವರೆಗೆ ಅರ್ಧ ಭಾರತದ ಮತ್ತು 2032 ರ ವರೆಗೆ ಅರ್ಧ ಇರಾನಿನ ಮೇಲೆ, 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ, 2037 ರ ವರೆಗೆ ತುರ್ಕಮೆನಿಸ್ತಾನದ ಮೇಲೆ, 2040 ರ ವರೆಗೆ ಸಂಪೂರ್ಣ ಇರಾನಿನ ಮೇಲೆ ಹಾಗೂ 2070 ರ ವರೆಗೆ ತಾಲಿಬಾನ ರಶಿಯಾ ಮೇಲೆ ನಿಯಂತ್ರಣವನ್ನು ಹೊಂದಲಿದೆಯೆಂದು ಅದರಲ್ಲಿ ಹೇಳಲಾಗಿದೆ. ಇದರಲ್ಲಿ ಎಲ್ಲಿಯೂ ಪಾಕಿಸ್ತಾನದ ಹೆಸರನ್ನು ಹೇಳಲಾಗಿಲ್ಲ.

ಸಂಪಾದಕೀಯ ನಿಲುವು

ತಾಲಿಬಾನಿಗಳು ಅಫಘಾನಿಸ್ತಾನ ವಶಕ್ಕೆ ಪಡೆದ ಬಳಿಕ ಅವರಿಗೆ ದೊಡ್ಡ ದೊಡ್ಡ ಹಗಲುಗನಸು ಬೀಳಲು ಪ್ರಾರಂಭವಾಗಿದೆ’ ಎನ್ನುವುದು ಇದರಿಂದ ಕಂಡು ಬರುತ್ತದೆ !