ಬಲವಂತವಾಗಿ ಮತಾಂತರಕ್ಕೆ ರಾಜಕೀಯ ಬಣ್ಣ ನೀಡಬಾರದು !

ಸರ್ವೋಚ್ಚ ನ್ಯಾಯಾಲಯದಿಂದ ತಮಿಳುನಾಡು ಸರಕಾರಕ್ಕೆ ಛೀಮಾರಿ !

ನವದೆಹಲಿ – ಬಲವಂತ ಮತಾಂತರ ಒಂದು ರಾಜ್ಯದ ಪ್ರಶ್ನೆಯಲ್ಲ. ಆದ್ದರಿಂದ ಅದಕ್ಕೆ ರಾಜಕೀಯ ಬಣ್ಣವನ್ನು ನೀಡಬಾರದು ಎನ್ನುವ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಛೀಮಾರಿ ಹಾಕಿದೆ. ಬಲವಂತವಾಗಿ ಮತ್ತು ಆಮಿಷ ತೋರಿಸಿ ಮಾಡಿರುವ ಮತಾಂತರದ ವಿರುದ್ಧ ಭಾಜಪ ಮುಖಂಡ ಮತ್ತು ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು ದಾಖಲಿಸಿರುವ ದೂರಿನ ಬಗ್ಗೆ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಛೀಮಾರಿ ಹಾಕಿದೆ. ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯರು ದೂರು ದಾಖಲಿಸುವಾಗ ಮತಾಂತರದ ವಿರುದ್ಧ ಕಾನೂನು ರಚಿಸುವಂತೆ ಕೋರಿದ್ದರು. ಸರ್ವೋಚ್ಚ ನ್ಯಾಯಾಲಯವು `ಅಟಾರ್ನಿ ಜನರಲ್’ ಆರ್. ವೆಂಕಟರಮಾಣಿ ಇವರು ಈ ಪ್ರಕರಣದಲ್ಲಿ ಸಹಾಯ ಮಾಡುವಂತೆ ಹೇಳಿದ್ದಾರೆ. ಮುಂದಿನ ಆಲಿಕೆ ಫೆಬ್ರುವರಿ 7 ರಂದು ನಡೆಯಲಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಈ ಹಿಂದೆಯೇ ಕೇಂದ್ರ ಸರಕಾರಕ್ಕೆ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಹೇಳಿತ್ತು. ಆದರೆ ಕೇಂದ್ರ ಸರಕಾರವು ಇದುವರೆಗೂ ಅದನ್ನು ಸಲ್ಲಿಸಿಲ್ಲ.

1. ಆಲಿಕೆಯ ಸಮಯದಲ್ಲಿ ತಮಿಳುನಾಡು ಸರಕಾರದಿಂದ ಹಿರಿಯ ನ್ಯಾಯವಾದಿ ಪಿ. ವಿಲ್ಸನ ಇವರು ನ್ಯಾಯಾಲಯದಲ್ಲಿ ವಾದ ಮಾಡುವಾಗ ಈ ದೂರು ರಾಜಕೀಯ ಪ್ರೇರಿತವಾಗಿದೆ. ನಮ್ಮ ರಾಜ್ಯದಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

2. ಇದಕ್ಕೆ ನ್ಯಾಯಾಲಯವು ನೀವು ಆಲಿಕೆಯ ಸಮಯದಲ್ಲಿ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಬೇಡಿರಿ. ಸಂಪೂರ್ಣ ದೇಶದ ವಿಚಾರ ಮಾಡಿದ ಬಳಿಕ ನಾವು ಚಿಂತೆಗೊಳಗಾಗಿದ್ದೇವೆ. ಒಂದು ವೇಳೆ ನಿಮ್ಮ ರಾಜ್ಯದಲ್ಲಿ ಮತಾಂತರವಾಗುತ್ತಿದ್ದರೆ, ಅದು ಕೆಟ್ಟದ್ದು ಮತ್ತು ಆಗದೇ ಇದ್ದರೆ ಅದು ಒಳ್ಳೆಯ ವಿಷಯವಾಗಿದೆ. ಒಂದು ರಾಜ್ಯವನ್ನು ಗುರಿ ಮಾಡುವ ದೃಷ್ಟಿಯಿಂದ ಇದನ್ನು ನೋಡಬಾರದು. ಇದಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂದು ಹೇಳಿತು.

3. ನ್ಯಾಯಾಲಯವು `ಅಟಾರ್ನಿ ಜನರಲ್’ ಆರ್. ವೆಂಕಟರಮಾಣಿಯವರು ಬಲವಂತವಾಗಿ ಅಥವಾ ಆಮಿಷ ತೋರಿಸಿ ಮಾಡುವ ಮತಾಂತರದ ಪ್ರಕರಣಗಳನ್ನು ಶೋಧಿಸಬೇಕು. ಕೇಂದ್ರ ಸರಕಾರವೂ ಈ ಸಮಸ್ಯೆಯನ್ನು ದೂರಗೊಳಿಸಲು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

4. ಈ ದೂರಿನ ಮೇಲೆ ನಡೆದ ಆಲಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯವು `ಬಲವಂತದ ಮತಾಂತರ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ’, ಎಂದು ಹೇಳುತ್ತಾ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಕಠಿಣವಾದ ಕ್ರಮವನ್ನು ಕೈಕೊಳ್ಳುವಂತೆ ಹೇಳಿದ್ದಾರೆ.

ಮತಾಂತರವು ಸಂಪೂರ್ಣ ದೇಶದ ಸಮಸ್ಯೆ- ಸರ್ವೋಚ್ಚ ನ್ಯಾಯಾಲಯ

ಗುಜರಾತ ಸರಕಾರವು ವಿವಾಹಕ್ಕಾಗಿ ಮತಾಂತರಗೊಳಿಸುವ ಮೊದಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವ ಕಾನೂನು ರಚಿಸಿತ್ತು. ಅದಕ್ಕೆ ಗುಜರಾತ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ. ಈ ತಡೆಯಾಜ್ಞೆಯ ವಿರುದ್ಧ ಗುಜರಾತ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ. ಸರಕಾರ, ಧರ್ಮ ಸ್ವಾತಂತ್ರ್ಯದಲ್ಲಿ ಮತಾಂತರದ ಅಧಿಕಾರವಿಲ್ಲ. ಮತಾಂತರವು ಸಂಪೂರ್ಣ ದೇಶದ ಸಮಸ್ಯೆಯಾಗಿದ್ದು ಅದಕ್ಕೆ ಗಮನ ಹರಿಸುವ ಆವಶ್ಯಕತೆಯಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯಕ್ಕೆ ಈ ರೀತಿ ಹೇಳಬೇಕಾದ ಸಮಯ ಬಂದಿರುವುದು ತಮಿಳುನಾಡು ಸರಕಾರಕ್ಕೆ ನಾಚಿಕೆಗೇಡು !