ಅಪ್ರಾಪ್ತ ದಲಿತ ಹುಡುಗಿಯ ಮೇಲೆ ಬಲತ್ಕಾರ ಮಾಡಿದ ೨ ಮುಸಲ್ಮಾನ ಸಹೋದರರ ಬಂಧನ

ವಾರಂಗಲ್ (ತೆಲಂಗಾಣ) – ಇಲ್ಲಿಯ ಓರ್ವ ದಲಿತ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಮತ್ ಅಲಿ ಮತ್ತು ಅಬು ಅಲಿ ಎಂಬ ೨ ಮುಸಲ್ಮಾನ ಸಹೋದರರನ್ನು ಬಂಧಿಸಲಾಗಿದೆ. ಇಬ್ಬರು ಸಹೋದರರು ಸುಮಾರು ೬ ತಿಂಗಳಿಂದ ಹುಡುಗಿಯ ಮೇಲೆ ಬಲಾತ್ಕಾರ ಮಾಡುತ್ತಿದ್ದರು.

೧. ಸಂತ್ರಸ್ತೇಯು ಈ ಮುಸಲ್ಮಾನರ ಪಕ್ಕದ ಮನೆಯಲ್ಲಿ ವಾಸವಾಗಿದ್ದಳು. ೬ ತಿಂಗಳ ಹಿಂದೆ ಇದರಲ್ಲಿನ ಒಬ್ಬ ಸಹೋದರನು ಸಂತ್ರಸ್ತೆಯನ್ನು ಬಲವಂತವಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು. ಅದರ ನಂತರ ಆಕೆಗೆ ಬೆದರಿಸಿ ಲೈಂಗಿಕ ಕಿರುಕುಳ ನೀಡುವುದು ಮುಂದುವರೆಸಿದನು.

೨. ಇದರ ನಂತರ ಅವನ ಸಹೋದರನೂ ಕೂಡ ಆಕೆಯ ಮೇಲೆ ಬಲತ್ಕಾರ ಮಾಡಲಾರಂಭಿಸಿದನು. ಸಂತ್ರಸ್ತೆಯು ಜನವರಿ ೪, ೨೦೨೩ ರಂದು ಕುಟುಂಬದವರಿಗೆ ಈ ವಿಷಯ ಹೇಳಿದಳು. ಕುಟುಂಬದವರು ಇಬ್ಬರು ಮುಸಲ್ಮಾನರ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು.

೩. ಪ್ರಸಾರ ಮಾಧ್ಯಮಗಳು ನೀಡಿದ ವಾರ್ತೆಯ ಪ್ರಕಾರ ಈ ಪ್ರಕರಣ ಬೆಳಕಿಗೆ ಬಂದ ನಂತರ ಭಾಜಪ ಮತ್ತು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಅಜಮತ ಅಲಿ ಮತ್ತು ಅಬು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅವರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ದಲಿತ-ಮುಸಲ್ಮಾನ್ ಭಾಯಿ ಭಾಯಿ’, ಎಂದು ಘೋಷಣೆ ನೀಡುವವರು ಈ ಘಟನೆಯ ಸಮಯದಲ್ಲಿ ಎಲ್ಲಿ ಅಡಗಿ ಕುಳಿತಿದ್ದಾರೆ ?