ತಮಿಳುನಾಡಿನಲ್ಲಿ ಕ್ರೈಸ್ತ ಮತಪ್ರಚಾರಕನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಚೆನ್ನೈ – ರಾಜ್ಯದಲ್ಲಿನ ಒಂದು ನಗರದಲ್ಲಿ ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಎಂಡ್ಯೂ ಎಂಬ ಹೆಸರಿನ ಕ್ರೈಸ್ತ ಮತಪ್ರಚಾರಕನನ್ನು ಬಂಧಿಸಿದ್ದಾರೆ. ಈ ಕ್ರೈಸ್ತ ಮತಪ್ರಚಾರಕನು ಹುಡುಗಿಯರಿಗಾಗಿ ವಸತಿಗೃಹ ನಡೆಸುತ್ತಾನೆ. ಈ ಹುಡುಗಿಯು ರಜೆಯ ನಂತರ ವಸತಿಗೃಹಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಆಕೆಯ ಪಾಲಕರಿಗೆ ಸಂಶಯ ಬಂದಿದ್ದರಿಂದ ಅವರು ಆಕೆಯೊಂದಿಗೆ ಚರ್ಚಿಸಿದಾಗ ಪ್ರಕರಣವು ಬಯಲಾಗಿದೆ. ಈ ಪ್ರಕರಣದಲ್ಲಿ ಪಾದ್ರಿಯನ್ನು ಪೊಸ್ಕೋ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ.

೧. ಕೆಲವು ತಿಂಗಳ ಹಿಂದೆ ಸಂತ್ರಸ್ಥೆಯ ಪಾಲಕರು ಆಕೆಯನ್ನು ಕ್ರೈಸ್ತ ಮತಪ್ರಚಾರಕನಾದ ಎಂಡ್ಯೂನೊಂದಿಗೆ ಪರಿಚಯ ಮಾಡಿಸಿದ್ದರು. ಪಾಲಕರು ಸಂತ್ರಸ್ಥೆ ಹಾಗೂ ಆಕೆಯ ಸಹೋದರನನ್ನು ಕ್ರೈಸ್ತ ಮತಪ್ರಚಾರಕನ ವಸತಿಗೃಹಕ್ಕೆ ಕಳುಹಿಸಿದ್ದರು.

೨. ಡಿಸೆಂಬರ್‌ ೧೪, ೨೦೨೨ರಂದು ಸಂತ್ರಸ್ಥೆಯ ಸಹೋದರನು ಶಾಲೆಗೆ ಹೋಗಿದ್ದನು. ಸಂತ್ರಸ್ಥ ಯುವತಿಯು ಅನಾರೋಗ್ಯದಲ್ಲಿದ್ದರಿಂದ ಆಕೆಯು ವಸತಿಗೃಹದಲ್ಲಿನ ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ಆ ಸಮಯದಲ್ಲಿ ಪಾದ್ರಿ ಎಂಡ್ಯೂ ಓಡಾಡುವಾಗ ಸಂತ್ರಸ್ಥೆಯನ್ನು ನೋಡಿದನು ಮತ್ತು ಅವನು ಕೊಣೆಗೆ ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು.

೩. ‘ಈ ಬಗ್ಗೆ ಯಾರಿಗೂ ಹೇಳಬೇಡ’ ಎಂದು ಬೆದರಿಸಿದ್ದನು.

ಸಂಪಾದಕೀಯ ನಿಲುವು

ಯಾವಾಗಲೂ ಸುಳ್ಳು ಆರೋಪಗಳನ್ನು ಮಾಡಿ ಹಿಂದೂ ಸಂತರ ಅಪಮಾನ ಮಾಡುವ ಪ್ರಸಾರ ಮಾಧ್ಯಮಗಳು ಇಂತಹ ವಾರ್ತೆಗಳಿಗೆ ಪ್ರಸಿದ್ಧಿ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಿ !