ಅತಿಕ್ರಮಣದ ಕುರಿತು ಕ್ರಮ ಕೈಗೊಳ್ಳಲು ತಡೆ ಇಲ್ಲ, ಆದರೆ ಮೊದಲು ಪುನರ್ವಸತಿ ಅಗತ್ಯ ! – ಸರ್ವೋಚ್ಚ ನ್ಯಾಯಾಲಯ

ಹಲ್ದ್ವಾನಿ (ಉತ್ತರಾಖಂಡ) ಇಲ್ಲಿಯ ಸರಕಾರಿ ಜಾಗದಲ್ಲಿರುವ ೪ ಸಾವಿರ ಮನೆಗಳನ್ನು ನೆಲೆಸಮ ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ತಡೆ

ನವದೆಹಲಿ – ಉತ್ತರಾಖಂಡನ ಹಲ್ದ್ವಾನಿಯಲ್ಲಿ ರೈಲ್ವೇಯ ೨೯ ಎಕರೆ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ೪ ಸಾವಿರ ಕುಟುಂಬಗಳನ್ನು (ಸುಮಾರು ೫೦ ಸಾವಿರ ಜನರು) ಹೊರಹಾಕುವಂತೆ ಉತ್ತರಖಂಡ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರ್ವೋಚ್ಚ ನ್ಯಾಯಾಲಯವು, `ಇಷ್ಟು ಸಂಖ್ಯೆಯಲ್ಲಿ ಮತ್ತು ದೀರ್ಘಕಾಲದಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪುನರ್ವಸತಿ ನೀಡುವುದು ಅವಶ್ಯಕವಾಗಿದೆ. ಪುನರ್ವಸತಿ ಆಗಲೇಬೇಕು. ಕೇವಲ ೭ ದಿನದಲ್ಲಿ ಈ ಜನರು ಜಾಗ ಹೇಗೆ ಖಾಲಿ ಮಾಡುವರು ?’, ಹೀಗೆ ಹೇಳುತ್ತಾ ಈ ಸ್ಥಳದಲ್ಲಿ ಇನ್ನು ಮುಂದೆ ಯಾವುದೇ ಕಟ್ಟಡ ನಿರ್ಮಿತಿ ಮತ್ತು ವಿಕಾಸಕಾರ್ಯ ಮಾಡದಂತೆ ಆದೇಶ ನೀಡಿದೆ. ನ್ಯಾಯಾಲಯವು `ಈ ಸಂದರ್ಭದಲ್ಲಿನ ಪ್ರಕ್ರಿಯೆಗೆ ಅಲ್ಲ, ಬದಲಾಗಿ ಕೇವಲ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ’, ಎಂದು ಸ್ಪಷ್ಟಪಡಿಸಿತು.

೧. ಅರ್ಜಿದಾರರ ಪ್ರಕಾರ, ಇಲ್ಲಿಯ ಜನರ ಬಳಿ ಈ ಭೂಮಿ ಸ್ವಾತಂತ್ರ್ಯ ಪೂರ್ವದ ಕಾಲದಿಂದಲೂ ಇದೆ. ಅವರ ಬಳಿ ಸರಕಾರದ `ಲೀಸ್’ ಕೂಡ (ನಿಶ್ಚಿತ ಸಮಯದವರೆಗೆ ಬಾಡಿಗೆ ಮೇರೆಗೆ ನೀಡಲಾದ ಅನುಮತಿ) ಇದೆ. ಅದರ ನಂತರ ಕೂಡ ಸರಕಾರ ಈ ಭೂಮಿ ತನ್ನದೆಂದು ದಾವೆ ಮಾಡುತ್ತಿದೆ. ರೈಲ್ವೇಯೂ ಕೂಡ ಈ ಭೂಮಿಯ ಮೇಲೆ ದಾವೆ ಮಾಡಿದೆ.

೨. ಉತ್ತರಾಖಂಡ ಸರಕಾರ ಮತ್ತು ರೈಲ್ವೆ ಆಡಳಿತವು, ಈ ಜಾಗಯಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಪುನರ್ವಸತಿಯ ಬೇಡಿಕೆ ಮಾಡಿಲ್ಲ. ಈ ಭೂಮಿ ರೈಲ್ವೆಯ ವಿಕಾಸ ಮತ್ತು ಸೌಲಭ್ಯಕ್ಕಾಗಿ ಅವಶ್ಯಕವಾಗಿದೆ.

೩. ಉತ್ತರಾಖಂಡ ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿ ಕಟ್ಟಡ ಕಾಮಗಾರಿಯ ಮೇಲೆ ಕ್ರಮ ಕೈಗೊಳ್ಳುವ ಮೊದಲು ನಾಗರೀಕರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರದೇಶದಲ್ಲಿನ ಒಂದು ಮಸೀದಿಯಲ್ಲಿ ನೂರಾರು ನಾಗರೀಕರು ಸಾಮೂಹಿಕ ನಮಾಜ ಮಾಡಿ ಪ್ರಾರ್ಥನೆ ಮಾಡಿದರು.

ಶೇ. ೯೫ ರಷ್ಟು ಮುಸಲ್ಮಾನರ ಸಮಾವೇಶ !

ಹಲ್ದ್ವಾನಿ ಬನಭೂಲಪುರ ಇಲ್ಲಿ ರೈಲ್ವೆಯ ಜಾಗದಲ್ಲಿ ಅತಿಕ್ರಮಣ ನಡೆಸಿ ವಾಸಿಸುತ್ತಿರುವ ೪ ಸಾವಿರ ಕುಟುಂಬಗಳಲ್ಲಿ ಶೇ. ೯೫ ರಷ್ಟು ಮುಸಲ್ಮಾನ ಕುಟುಂಬಗಳಿವೆ. ಸ್ವಾತಂತ್ರ್ಯ ಪೂರ್ವ ಈ ಪ್ರದೇಶದಲ್ಲಿ ಉದ್ಯಾನವನ, ಮರದ ಭಂಡಾರ ಮತ್ತು ಕಾರ್ಖಾನೆ ಇತ್ತು. ಅದರಲ್ಲಿ ಉತ್ತರ ಪ್ರದೇಶದ ರಾಮಪುರ, ಮುರಾದಾಬಾದ ಮತ್ತು ಬರೇಲಿಯ ಮುಸಲ್ಮಾನರು ವಾಸವಾಗಿದ್ದರು. ನಿಧಾನವಾಗಿ ಅವರು ರೈಲ್ವೆಯ ೨೯ ಏಕರೆ ಭೂಮಿಯನ್ನು ಕಬಳಿಸಿದರು. ಈ ಪ್ರದೇಶ ಸುಮಾರು ೨ ಕಿ.ಮೀ ಅಂತರಕ್ಕಿಂತಲೂ ಹೆಚ್ಚಿನ ಕ್ಷೇತ್ರದಲ್ಲಿ ವಿಸ್ತರಿಸಿದೆ. ಈ ಪ್ರದೇಶದಲ್ಲಿ ಗಾಫ್ಫುರ ವಸತಿ, ಢೊಲಕ ವಸತಿ ಮತ್ತು ಇಂದಿರಾನಗರ ಈ ಹೆಸರಿನಿಂದ ಗುರುತಿಸಲಾಗುತ್ತದೆ. ಇಲ್ಲಿ ೪ ಸರಕಾರಿ ಶಾಲೆ, ೧೧ ಖಾಸಗಿ ಶಾಲೆ, ೨ ಓವರ್ ಹೆಡ್ ನೀರಿನ ಟ್ಯಾಂಕುಗಳು, ೧೦ ಮಸೀದಿ ಮತ್ತು ೪ ದೇವಸ್ಥಾನಗಳು ಇವೆ. (ಸರಕಾರಿ ಜಾಗದಲ್ಲಿ ಇಷ್ಟು ದೊಡ್ಡ ಪ್ರಮಾಣದ ಅನೇಕ ವರ್ಷಗಳಿಂದ ಅತಿಕ್ರಮಣ ಆಗುತ್ತಿರುವಾಗ ಮತ್ತು ಅಲ್ಲಿ ಸರಕಾರಿ ಶಾಲೆ ಕಟ್ಟುವವರೆಗೂ ಸರಕಾರ ನಿದ್ದೆ ಮಾಡುತ್ತಿತ್ತೆ ? ದೇಶದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಇದೇ ರೀತಿಯ ಅತಿಕ್ರಮಣಗಳು ನಡೆದಿದ್ದು ಈಗ ಅದನ್ನು ತೆರವುಗೊಳಿಸುವುದೆಂದರೆ ಯುದ್ಧ ಮಾಡುವ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ ! ಇದು ಭಾರತೀಯರಿಗೆ ನಾಚಿಕೆಗೇಡು ! – ಸಂಪಾದಕರು)