ಜಾರ್ಖಂಡ್‌ನಲ್ಲಿ ಗೋಹತ್ಯೆಗಾಗಿ ಒಯ್ಯುತ್ತಿದ್ದ ೪೮ ಗೋವುಗಳ ರಕ್ಷಣೆ !

ರಾಂಚಿ (ಜಾರ್ಖಂಡ್) – ಜನವರಿ ೩ ರಂದು ಜಾರ್ಖಂಡ್ ರಾಜ್ಯದಲ್ಲಿ ಎರಡು ಟ್ರಕ್‌ನಲ್ಲಿ ೪೮ ಗೋವುಗಳನ್ನು ಹತ್ಯೆಗಾಗಿ ಒಯ್ಯುತ್ತಿರುವಾಗ ರಕ್ಷಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಕುಮಾರ್ ಯಾದವ್ ಮತ್ತು ಮೊಹಮ್ಮದ್ ಕರೀಂ ಅವರನ್ನು ಬಂಧಿಸಲಾಗಿದ್ದು, ಇತರ ಆರು ಮಂದಿ ಪರಾರಿಯಾಗಿದ್ದಾರೆ.

ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.