ಮನಸ್ಸಿನ ಒತ್ತಡ ದೂರಗೊಳಿಸಲು ಸಂಶೋಧಕರು ಹೇಳಿದಂತೆ ಶಪಿಸುವಂತಹ ಪ್ರಯೋಗ ಮಾಡದೇ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ನಾಮಜಪಾದಿ ಉಪಾಯ ಮಾಡುವುದು ಸೂಕ್ತ

ನಿಸರ್ಗೋಪಚಾರ ತಜ್ಞ ಡಾ. ದೀಪಕ ಜೋಶಿ

‘ಒಮ್ಮೆ ನಾನೊಂದು ಲೇಖನ ಓದಿದೆ. ಆ ಲೇಖನದಲ್ಲಿ ‘ನಮ್ಮ ಮನಸ್ಸಿನ ಮೇಲಿನ ಒತ್ತಡ ಮತ್ತು ಸಿಡಿಮಿಡಿಯನ್ನು ಕಡಿಮೆ ಮಾಡಲು ಶಪಿಸುವುದು’, ಇದೊಂದು ಒಳ್ಳೆಯ ಮಾರ್ಗವಾಗಿದೆ’, ಎಂದು ಹೇಳಲಾಗಿತ್ತು. ಯಾರಾದರೊಬ್ಬ ಬಲಾಢ್ಯ ವ್ಯಕ್ತಿಯು (ಆರ್ಥಿಕ ಅಥವಾ ಶಾರೀರಿಕ ದೃಷ್ಟಿಯಲ್ಲಿ) ಯಾರಾದರೊಬ್ಬ ದುರ್ಬಲ ವ್ಯಕ್ತಿಯ ಮೇಲೆ ಅನ್ಯಾಯ ಮಾಡಿದ್ದರೆ ಮತ್ತು ಆ ದುರ್ಬಲ ವ್ಯಕ್ತಿಯು ಆ ಬಲಾಢ್ಯ ವ್ಯಕ್ತಿಯ ವಿರುದ್ಧ ಏನು ಮಾಡಲು ಸಾಧ್ಯವಾಗದಿದ್ದರೆ ಅವನ ಮನಸ್ಸಿನಲ್ಲಿಯೇ ಸಿಡಿಮಿಡಿಯಾಗುತ್ತದೆ ಮತ್ತು ಅವನಿಗೆ ಒತ್ತಡ ಬರುತ್ತದೆ. ಕೆಲವು ಸಮಯದ ನಂತರ ದುರ್ಬಲ ವ್ಯಕ್ತಿಯ ಮನಸ್ಸಿನಲ್ಲಿ ‘ಆ ವ್ಯಕ್ತಿಗೆ ಹೊಡೆಯಲೋ ಕೊಲೆ ಮಾಡಲೋ ?’, ಈ ರೀತಿಯ ಏನಾದರೂ ವಿಚಾರಗಳು ಬರುತ್ತವೆ; ಆದರೆ ಅವನಿಗೆ ಹೀಗೆ ಏನೂ ಮಾಡಲು ಬರುವುದಿಲ್ಲ. ಆದುದರಿಂದ ಅವನ ಮನಸ್ಸಿನ ಮತ್ತು ಶರೀರದ ಮೇಲಿನ ಒತ್ತಡವು ಹೆಚ್ಚುತ್ತ ಹೋಗುತ್ತದೆ.

ಒಮ್ಮೆ ಸಂಶೋಧಕರು ಒಂದು ಪ್ರಯೋಗವನ್ನು ಮಾಡಿದರು. ಸಂಶೋಧಕರು ದುರ್ಬಲ ವ್ಯಕ್ತಿಗೆ ಅನ್ಯಾಯ ಮಾಡುವ ವ್ಯಕ್ತಿಯ ಬಗ್ಗೆ ಜೋರಾಗಿ ಶಪಿಸಲು ಹೇಳಿದರು. ಅನಂತರ ದುರ್ಬಲ ವ್ಯಕ್ತಿಯನ್ನು ಪರೀಕ್ಷಿಸಿದರು. ಆಗ ದುರ್ಬಲ ವ್ಯಕ್ತಿಯು ಶಪಿಸಿದ ನಂತರ ‘ಅವನ ಮನಸ್ಸಿನಲ್ಲಿನ ಒತ್ತಡವು ಕಡಿಮೆಯಾಯಿತು ಮತ್ತು ಅವನ ರಕ್ತದೊತ್ತಡವೂ ಕಡಿಮೆಯಾಯಿತು’, ಎಂದು ಆ ಸಂಶೋಧನೆಯಿಂದ ಕಂಡುಬಂದಿತು.

ನಾನು ಈ ಕುರಿತು ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದಾಗ, “ತಾಮಸಿಕ ವೃತ್ತಿಯ ಸಂಶೋಧಕರು ಈ ತಾಮಸಿಕ ಪ್ರಯೋಗವನ್ನು ಮಾಡಿದ್ದಾರೆ. ಆದುದರಿಂದ ಇದು ಸರಿಯಿಲ್ಲ. ಮನಸ್ಸಿನ ಮೇಲಿನ ಒತ್ತಡವನ್ನು ದೂರಗೊಳಿಸಲು ವ್ಯಕ್ತಿಯು ನಾಮಜಪ ಮುಂತಾದ ಉಪಾಯಗಳನ್ನು ಮಾಡಬೇಕು” ಎಂದರು.

– ಡಾ. ದೀಪಕ ಜೋಶಿ, ನಿಸರ್ಗೋಪಚಾರ ತಜ್ಞರು, ಪನವೇಲ.