ಇರಾನಿನ ಪ್ರಸಿದ್ಧ ಲೇಖಕ ಮೆಹದಿ ಬಹಮನಗೆ ಗಲ್ಲು ಶಿಕ್ಷೆ

ಇಸ್ರೈಲ್ ನ ವಾರ್ತಾ ವಾಹಿನಿಯ ಮೂಲಕ ಇರಾನ್ ಸರಕಾರದ ಬಗ್ಗೆ ಟೀಕಿಸಿದ್ದರು !

ಇರಾನಿನ ಪ್ರಸಿದ್ಧ ಲೇಖಕ ಮೆಹದಿ ಬಹಮನ

ತೆಹರಾನ್ (ಇರಾನ್) – ಇರಾನ್ ನ ಪ್ರಸಿದ್ಧ ಲೇಖಕ ಮೆಹದಿ ಬಹಮನ ಇವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಮೆಹದಿ ಬಹಮನ ಇವರು ಇಸ್ರೈಲ್ ನ ಒಂದು ವಾರ್ತಾ ವಾಹಿನಿಯಲ್ಲಿ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ಇರಾನ್ ಸರಕಾರದ ಬಗ್ಗೆ ಟೀಕಿಸಿದ್ದರು. ಅವರು ಇರಾನಿನಲ್ಲಿ ಇಸ್ಲಾಮಿ ಕಾನೂನು ಜಾರಿ ಮಾಡಿರುವುದನ್ನು ನಿಷೇಧಿಸಿದ್ದರು. ಹಾಗೂ ಇಸ್ರೈಲ್ ಮತ್ತು ಇರಾನ್ ಇವರಲ್ಲಿ ದ್ವಿಪಕ್ಷೀಯ ಸಂಬಂಧ ಸುಧಾರಿಸುವುದರ ಬಗ್ಗೆ ವತ್ತು ನೀಡಿದ್ದರು. ಈ ಸಂದರ್ಶನದ ನಂತರ ಬಹಮನ ಇವರನ್ನು ಕೂಡಲೇ ಬಂದಿಸಲಾಗಿತ್ತು. ಇರಾನಿನಿಂದ ಅವರ ಮೇಲೆ ಬೇಹುಗಾರಿಕೆಯ ಆರೋಪ ಮಾಡಲಾಗಿತ್ತು.

ಮೆಹದಿ ಬಹಮನ ಇವರಿಗೆ ಯಾವ ಸಂದರ್ಶನಕ್ಕಾಗಿ ಗಲ್ಲು ಶಿಕ್ಷೆ ವಿಧಿಸಲಾಗಿದೆ, ಆ ಸಂದರ್ಶನ ಅವರು ಹಿಜಾಬ್ ವಿರೋಧಿ ಪ್ರತಿಭಟನೆಗಳು ನಡೆಯುವ ಮೊದಲು ಅಂದರೆ ಏಪ್ರಿಲ್ ೨೦೨೨ ರಲ್ಲಿ ನೀಡಿದ್ದರು.