ಅಫಘಾನಿಸ್ತಾನದ ಮೇಲೆ ದಾಳಿ ಮಾಡಿದರೆ, 1971 ರ ಯುದ್ಧದ ಸ್ಥಿತಿಯಂತೆ ಮಾಡುವೆವು !

ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ತಾಲಿಬಾನನಿಂದ ಎಚ್ಚರಿಕೆ !

ಕಾಬುಲ (ಅಪಘಾನಿಸ್ತಾನ) – ಪಾಕಿಸ್ತಾನ್ ಮತ್ತು ತಾಲಿಬಾನ ನಡುವೆ ವಾದ ವಿವಾದ ಈಗ ವಿಕೋಪಕ್ಕೆ ತಿರುಗಿದೆ. ತಹರಿಕ-ಏ-ತಾಲಿಬಾನ ಪಾಕಿಸ್ತಾನ (ಟಿಟಿಪಿ) ಈ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದಲ್ಲಿ ಸಮಾಂತರ ಸರಕಾರ ಸ್ಥಾಪಿಸಿದ ನಂತರ ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾಉಲ್ಲಾಹ ಇವರು ತಾಲಿಬಾನನನ್ನು ಉದ್ದೇಶಿಸಿ, `ತಾಲಿಬಾನ್ ಈ ಸಂಘಟನೆಯಿಂದ ನಮ್ಮ ದೇಶದ ಮೇಲಿನ ದಾಳಿಗಳನ್ನು ನಿಲ್ಲಿಸದಿದ್ದರೆ, ನಾವು ಅಪಘಾನಿಸ್ತಾನದಲ್ಲಿ ನುಗ್ಗಿ ಈ ಸಂಘಟನೆಯ ನೆಲೆಗಳ ಮೇಲೆ ದಾಳಿ ಮಾಡುವೆವು’, ಎಂದು ಬೆದರಿಕೆ ನೀಡಿತ್ತು. ಈ ಬಗ್ಗೆ ಈಗ ತಾಲಿಬಾನ್ ಸರಕಾರದ ಉಪಪ್ರಧಾನಿ ಅಹಮದ್ ಯಾಸಿರ್ ಇವನು ೧೯೭೧ ರಲ್ಲಿ ಭಾರತದಿಂದ ಪಾಕಿಸ್ತಾನಿ ಸೈನ್ಯ ಸೋಲು ಮತ್ತು ಸೈನ್ಯವು ಭಾರತದ ಸೈನ್ಯದ ಮುಂದೆ ಸ್ವೀಕರಿಸಿದ ಶರಣಾಗಿರುವ ಛಾಯಾಚಿತ್ರ ಪ್ರಸಾರ ಮಾಡುತ್ತಾ, `ಈ ರೀತಿಯ ಪರಿಣಾಮ ನೆನಪಿನಲ್ಲಿಟ್ಟುಕೊಳ್ಳಿ.’ ಈ ಛಾಯಾಚಿತ್ರ ೧೯೭೧ ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಆಗಿದೆ. ಇದರಲ್ಲಿ ಪಾಕಿಸ್ತಾನಿ ಸೈನ್ಯವು ಹೀನಾಯ ಸೋಲು ಕಂಡು ೯೦ ಸಾವಿರ ಸೈನಿಕರು ಶರಣಾಗಿದ್ದರು. ಈ ಛಾಯಾಚಿತ್ರದಲ್ಲಿ ಶರಣಾಗತಿಯ ದಾಖಲೆಗಳ ಮೇಲೆ ಪಾಕಿಸ್ತಾನದ ಲೆಫ್ಟನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝ್ ಇವರು ಸಹಿ ಮಾಡಿದ್ದರು. ಭಾರತೀಯ ಸೈನ್ಯದ ಲೆಫ್ಟನಂಟ್ ಜನರಲ್ ಜಗಜೀತ ಸಿಂಹ ಅರೋರ ಇವರ ಪಕ್ಕದಲ್ಲಿಯೇ ಇದ್ದರು. ಈ ಶರಣಾಗತಿಯ ನಂತರ ಬಾಂಗ್ಲಾದೇಶ ಬೇರೆ ದೇಶವಾಯಿತು ಮತ್ತು ಪಾಕಿಸ್ತಾನದ ೨ ಭಾಗವಾಯಿತು.

೧. ಉಪಪ್ರಧಾನಿ ಯಾಸೀನ್ ತಮ್ಮ ಮಾತನ್ನು ಮುಂದುವರೆಸುತ್ತಾ, `ರಾಣಾ ಸನಾಉಲ್ಲಾಹ ಇವರು, ಇದು ಅಪಘಾನಿಸ್ತಾನ ಇರುವುದು ಮರೆಯಬಾರದು. ಇದು ಎಲ್ಲಿ ಮಹಾನ ಶಕ್ತಿಯ ಕಬ್ರ ಕಟ್ಟಲಾಗಿದೆ ಆ ಅಫಗಾನಿಸ್ತಾನವಿದೆ. ನಮ್ಮ ಮೇಲೆ ಸೈನ್ಯ ಕಾರ್ಯಾಚರಣೆಯ ಕನಸು ಕಾಣದಿರಿ, ಇಲ್ಲದಿದ್ದರೆ ಭಾರತದ ಜೊತೆ ಯುದ್ಧ ಮಾಡಿದ ನಂತರ ನಿಮ್ಮದು ಯಾವ ಪರಿಸ್ಥಿತಿಯಾಯಿತು ಅದಕ್ಕಿಂತಲೂ ಭಯಾನಕ ಪರಿಣಾಮ ಆಗುವುದು ಎಂದು ಹೇಳಿದ.

೨. ಈ ಹೇಳಿಕೆ ನೀಡಿ ಕೆಲವೇ ಗಂಟೆಗಳಲ್ಲಿ ಅಪಘಾನಿಸ್ತಾನದ ರಕ್ಷಣಾ ಸಚಿವಾಲಯದಿಂದ ಸ್ವತಂತ್ರ ಮನವಿ ಜಾರಿ ಮಾಡಲಾಯಿತು. ಅದರಲ್ಲಿ, ಪಾಕಿಸ್ತಾನವು ಹುರುಳಿಲ್ಲದ ಆರೋಪ ಮಾಡುತ್ತಿದೆ. ನಾವು ಟಿಟಿಪಿಗೆ ಆಶ್ರಯ ನೀಡಿಲ್ಲ. `ಅಪಘಾನಿಸ್ತಾನ ದುರ್ಬಲವಾಗಿದೆ ಅಥವಾ ಅದಕ್ಕೆ ಯಾರು ಮಾಲೀಕರಿಲ್ಲ’ ಎಂಬ ಭ್ರಮೆಯಲ್ಲಿ ಇರಬೇಡಿರಿ. `ನಮಗೆ ನಮ್ಮ ದೇಶದ ರಕ್ಷಣೆ ಹೇಗೆ ಮಾಡಬೇಕು ?’, ಇದು ನಮಗೆ ಚೆನ್ನಾಗಿಯೇ ತಿಳಿದಿದೆ. ದಾಳಿ ಮಾಡಿದರೆ ಅದಕ್ಕೆ ಪ್ರತ್ಯುತ್ತರ ನೀಡುವೆವು ಎಂದು ಹೇಳಿದರು.