ನೋಟು ಅಮಾನ್ಯೀಕರಣ ಮಾಡಿದ್ದು ಯೋಗ್ಯ – ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ನವ ದೆಹಲಿ – 2016 ರಲ್ಲಿ ಕೇಂದ್ರ ಸರಕಾರವು ಮಾಡಿದ ನೋಟು ಅಮಾನ್ಯೀಕರಣ ಸರಿಯಾಗಿತ್ತು ಎಂದು ಸರ್ವೋಚ್ಚ ನ್ಯಾಯಾಲಯದ 5 ನ್ಯಾಯಮೂರ್ತಿಗಳ ಸಂವಿಧಾನಪೀಠವು ತೀರ್ಪು ನೀಡಿದೆ. ನೋಟು ಅಮಾನ್ಯೀಕರಣದ ವಿರೋಧದಲ್ಲಿ ದೇಶದಿಂದ ಒಟ್ಟು 58 ದೂರಗಳನ್ನು ದಾಖಲಿಸಲಾಗಿತ್ತು. ಅದರ ಮೇಲೆ ಸಂವಿಧಾನ ಪೀಠವು ಒಟ್ಟಾಗಿ ತೀರ್ಪು ನೀಡಿದೆ. `ನೋಟು ಅಮಾನ್ಯೀಕರಣದ ನಿರ್ಣಯದಲ್ಲಿ ಯಾವುದೇ ತಪ್ಪು ಇರಲಿಲ್ಲ. ಈ ಆರ್ಥಿಕ ನಿರ್ಣಯವನ್ನು ಈಗ ಬದಲಾಯಿಸಲು ಸಾಧ್ಯವಿಲ್ಲ’, ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸಂವಿಧಾನಪೀಠವು 4 ವಿರೋಧದಲ್ಲಿ 1 ಈ ರೀತಿ ಬಹುಮತದಿಂದ ಈ ತೀರ್ಪನ್ನು ನೀಡಿತು. ಈ 5 ಸದಸ್ಯರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಎಸ್. ಅಬ್ದುಲ ನಜೀರ, ನ್ಯಾಯಮೂರ್ತಿ ಬಿ.ಆರ್. ಗವಯಿ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣಾ, ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯಂ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಇವರಿದ್ದರು. ಇವರಲ್ಲಿ ನ್ಯಾಯಮೂರ್ತಿ ನಾಗರತ್ನಾ ಇವರು ಇತರೆ 4 ನ್ಯಾಯಮೂರ್ತಿಗಳಿಗಿಂತ ಬೇರೆಯೇ ನಿರ್ಣಯವನ್ನು ನೀಡಿದರು. ಅವರು, `ನೋಟು ಅಮಾನ್ಯೀಕರಣದ ನಿರ್ಣಯ ಸೂಕ್ತವಾಗಿರಲಿಲ್ಲ. ಅದನ್ನು ಸುಗ್ರೀವಾಜ್ಞೆ ಬದಲಾಗಿ ಕಾನೂನಿನ ಮುಖಾಂತರ ಕೈಕೊಳ್ಳುವ ಆವಶ್ಯಕತೆಯಿತ್ತು; ಆದರೆ ಈಗ ಅಂದರೆ ಈ ಹಳೆಯ ನಿರ್ಣಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.’ ಎಂದು ಹೇಳಿದರು.

೧. ಸಂವಿಧಾನಿಕ ನ್ಯಾಯಾಲಯವು ತೀರ್ಪು ನೀಡುವಾಗ, `ನೋಟು ಅಮಾನ್ಯೀಕರಣದ ನಿರ್ಣಯದಮೊದಲು ಕೇಂದ್ರ ಸರಕಾರ ಮತ್ತು ರಿಸರ್ವ ಬ್ಯಾಂಕ ನಡುವೆ ಚರ್ಚೆಗಳು ನಡೆದಿದ್ದವು. ಇದರಿಂದ ಈ ನಿರ್ಣಯ ಸ್ವಂತ ಇಚ್ಛೆಯಿಂದ ಆಗಿರಲಿಲ್ಲ, ಎಂದು ಸ್ಪಷ್ಟವಾಗುತ್ತದೆಯೆಂದು ಹೇಳಿದೆ.’

೨. ಕೇಂದ್ರ ಸರಕಾರವು ನೋಟು ಅಮಾನ್ಯೀಕರಣದ ನಿರ್ಣಯದ ಪರವಾಗಿ, ಇದು ಪರಿಣಾಮಕಾರಿ ನಿರ್ಣಯವು ಖೋಟಾನೋಟು, ಭಯೋತ್ಪಾದನೆಗೆ ಹಣ ಪೂರೈಕೆ, ಕಪ್ಪುಹಣ ಮತ್ತು ತೆರಿಗೆಗಳ್ಳತನಗಳಂತಹ ಸಮಸ್ಯೆಗಳನ್ನು ದೂರಗೊಳಿಸಲು ತೆಗೆದುಕೊಳ್ಳಲಾಗಿತ್ತು. ಇದು ಆರ್ಥಿಕ ನಿಯಮಗಳ ಬದಲಾವಣೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಈ ನಿರ್ಣಯ ರಿಸರ್ವ ಬ್ಯಾಂಕಿನ ಕೇಂದ್ರೀಯ ನಿರ್ದೇಶಕರ ಶಿಫಾರಸ್ಸಿನ ಅನುಗುಣವಾಗಿ ತೆಗೆದುಕೊಳ್ಳಲಾಗಿತ್ತು. ನೋಟು ಅಮಾನ್ಯೀಕರಣದಿಂದ ಖೋಟಾನೋಟುಗಳ ಸಂಖ್ಯೆಯಲ್ಲಿ ಕುಸಿತ, ಡಿಜಿಟಲ ವ್ಯವಹಾರಗಳಲ್ಲಿ ಹೆಚ್ಚಳ, ಅನಧಿಕೃತ ಉತ್ಪನ್ನಗಳನ್ನು ಗುರುತಿಸುವುದು ಮುಂತಾದ ಅನೇಕ ಪ್ರಯೋಜನಗಳಾಗಿವೆ ಎಂದು ಹೇಳಿದೆ.