633 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿರಿ !

ಪಾಕಿಸ್ತಾನಕ್ಕೆ ಭಾರತದ ಕರೆ

ನವ ದೆಹಲಿ – ಭಾರತವು ಪಾಕಿಸ್ತಾನಕ್ಕೆ ಅದರ ಸೆರೆಮನೆಯಲ್ಲಿ ಶಿಕ್ಷೆ ಪೂರ್ಣಗೊಳಿಸಿರುವ ಭಾರತೀಯ ಮತ್ತು ಯಾರ ನಾಗರಿಕತ್ವ ಭಾರತೀಯರೆಂದು ಖಾತ್ರಿಯಾಗಿರುವವರನ್ನು ಬಿಡುಗಡೆಗೊಳಿಸುವಂತೆ ಕರೆ ನೀಡಿದೆ. ಭಾರತವು ಒಟ್ಟು 631 ಮೀನುಗಾರರು ಮತ್ತು ಇತರೆ 2 ನಾಗರಿಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಇದಲ್ಲದೇ ಪಾಕಿಸ್ತಾನದ ವಶದಲ್ಲಿ ಭಾರತೀಯ ನಾಗರಿಕ ಎಂದು ಸಾಧ್ಯತೆಯಿರುವ 30 ಮೀನುಗಾರರು ಮತ್ತು 22 ನಾಗರಿಕರನ್ನು ತಕ್ಷಣವೇ ಭಾರತಿಯ ರಾಯಭಾರ ಕಚೇರಿಗೆ ಸಂಪರ್ಕಿಸುವ ಸೌಲಭ್ಯವನ್ನು ಒದಗಿಸುವಂತೆ ಕೂಡ ಭಾರತವು ಕೋರಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 2008 ರಲ್ಲಿ ಮಾಡಿರುವ ಕರಾರಿನಂತೆ ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಮೀನುಗಾರರು ಮತ್ತು ನಾಗರಿಕ ಕೈದಿಗಳ ಪಟ್ಟಿಯನ್ನು ಪರಸ್ಪರರಿಗೆ ಒಪ್ಪಿಸಲು ಎರಡೂ ದೇಶಗಳಲ್ಲಿ ಒಪ್ಪಂದ ಆಗಿತ್ತು. ಅದಕ್ಕನುಸಾರ ಭಾರತವು ಈ ಕರೆ ನೀಡಿದೆ.

ವಿದೇಶಾಂಗ ಸಚಿವಾಲಯ ತನ್ನ ಮನವಿಯಲ್ಲಿ ಭಾರತವು ಸಧ್ಯಕ್ಕೆ ತನ್ನ ನಿಯಂತ್ರಣದಲ್ಲಿರುವ 339 ಪಾಕಿಸ್ತಾನಿ ಕೈದಿಗಳ ಮತ್ತು 95 ಮೀನುಗಾರರ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಅದೇ ರೀತಿ ಪಾಕಿಸ್ತಾನವು ತನ್ನ ವಶದಲ್ಲಿರುವ 51 ನಾಗರಿಕ ಕೈದಿಗಳನ್ನು ಮತ್ತು 654 ಮೀನುಗಾರರ ಪಟ್ಟಿಯನ್ನು ಭಾರತಕ್ಕೆ ನೀಡಿದೆ. ಇದರಲ್ಲಿ ಬಹುಸಂಖ್ಯಾತರು ಭಾರತೀಯರಾಗಿದ್ದಾರೆ ಮತ್ತು ಕೆಲವರನ್ನು ಭಾರತೀಯರೆಂದು ನಂಬಲಾಗುತ್ತಿದೆ.