‘OPIndia’ ವೆಬ್ ಸೈಟ್ ನಿಂದ ವಿಶ್ಲೇಷಣೆ : ವರ್ಷವಿಡೀ ‘ಲವ್ ಜಿಹಾದ್’ನ ೧೫೩ ಘಟನೆಗಳು !

೯೯ ಪ್ರಕರಣಗಳಲ್ಲಿ ಮುಸಲ್ಮಾನ ಯುವಕರು ತಮ್ಮನ್ನು ಹಿಂದೂ ಎಂದು ಹೇಳಿಕೊಂಡರು !

ನವ ದೆಹಲಿ – ೨೦೨೨ ರಲ್ಲಿ ‘OPIndia’ ಜಾಲತಾಣವು ‘ಲವ್ ಜಿಹಾದ್’ನ ೧೫೩ ಘಟನೆಗಳ ವಾರ್ತೆಯನ್ನು ನೀಡಿತ್ತು. ಲವ್ ಜಿಹಾದ್‌ನ ಘಟನೆಗಳು ಇದಕ್ಕಿಂತಲೂ ಹೆಚ್ಚು ಇರುವ ಸಾಧ್ಯತೆ ಇದೆ; ಏಕೆಂದರೆ ಕೆಲವು ಘಟನೆಗಳು ಸಮಾಜದ ಮುಂದೆ, ಪೊಲೀಸರ ಮುಂದೆ ಬರುವುದಿಲ್ಲ. ಈ ಘಟನೆಗಳಲ್ಲಿ ಹಿಂದೂ ಹುಡುಗಿಯರು, ಯುವತಿಯರು, ಮಹಿಳೆಯರು ಹಾಗೂ ಯುವಕರು ಬಲಿಯಾಗಿದ್ದಾರೆ.

೧. ವಿವಿಧ ರಾಜ್ಯಗಳ ವಿಚಾರ ಮಾಡಿದರೆ, ಉತ್ತರಪ್ರದೇಶದಲ್ಲಿ ೬೫, ಮಧ್ಯಪ್ರದೇಶದಲ್ಲಿ ೩೭, ಜಾರಖಂಡದಲ್ಲಿ ೧೨, ಉತ್ತರಾಖಂಡ ಮತ್ತು ಗುಜರಾತದಲ್ಲಿ ೭, ದೆಹಲಿ ಮತ್ತು ಕರ್ನಾಟಕದಲ್ಲಿ ೫, ಮಹಾರಾಷ್ಟ್ರದಲ್ಲಿ ೪; ಬಿಹಾರದಲ್ಲಿ ೩, ಹರಿಯಾಣಾ, ರಾಜಸ್ಥಾನ ಹಾಗೂ ಕೇರಳದಲ್ಲಿ ೨ ಹಾಗೂ ಆಸಾಂನಲ್ಲಿ ೧ ಪ್ರಕರಣವು ಬೆಳಕಿಗೆ ಬಂದಿದೆ.

೨. ತಿಂಗಳಿಗನುಸಾರ ವಿಚಾರ ಮಾಡಿದರೆ, ಜನವರಿಯಲ್ಲಿ ೧೧, ಫೆಬ್ರವರಿಯಲ್ಲಿ ೪, ಮಾರ್ಚ್‌ನಲ್ಲಿ ೧೨, ಎಪ್ರಿಲ್‌ನಲ್ಲಿ ೮, ಮೇ ತಿಂಗಳಲ್ಲಿ ೧೦, ಜೂನ್‌ರಲ್ಲಿ ೧೧, ಜುಲೈನಲ್ಲಿ ೧೭, ಆಗಸ್ಟ ನಲ್ಲಿ ೧೧, ಸಪ್ಟೆಂಬರನಲ್ಲಿ ೧೪, ಅಕ್ಟೋಬರನಲ್ಲಿ ೭, ನವಂಬರನಲ್ಲಿ ೨೩ ಹಾಗೂ ಡಿಸೆಂಬರದಲ್ಲಿ ೨೫ ಘಟನೆಗಳು ಬೆಳಕಿಗೆ ಬಂದಿತು.

೩. ೧೫೩ ಪ್ರಕರಣಗಳ ಪೈಕಿ ೯೯ ಪ್ರಕರಣಗಳಲ್ಲಿ ಮುಸಲ್ಮಾನ ಯುವಕರು ತಮ್ಮ ಧರ್ಮವನ್ನು ಅಡಗಿಸಿ ತಾವು ಹಿಂದೂ ಎಂದು ಹೇಳಿದ್ದರು, ಅದೇ ೬ ಪ್ರಕರಣಗಳಲ್ಲಿ ಅವರು ವಿವಾಹಿತರಾಗಿದ್ದಾರೆಂಬ ಮಾಹಿತಿಯನ್ನು ಅಡಗಿಸಿಟ್ಟಿದ್ದರು. ಹಿಂದೂ ಆಗಿದ್ದೇನೆಂದು ಹೇಳುವಾಗ ಈ ಯುವಕರು ಹಿಂದೂ ಹೆಸರನ್ನು ಇಟ್ಟುಕೊಳ್ಳುವುದು, ಮಣಿಕಟ್ಟಿಗೆ ಕೆಂಪು ದಾರವನ್ನು ಕಟ್ಟಿಕೊಳ್ಳುವುದು, ಇತ್ಯಾದಿಗಳನ್ನು ಮಾಡಿದ್ದರು.

೪. ೨೧ ಪ್ರಕರಣಗಳಲ್ಲಿ ಪ್ರೇಮದ ಬಲೆಯಲ್ಲಿ ಸಿಲುಕಿದ ಹಿಂದೂ ಯುವತಿಯರೊಂದಿಗೆ ಶಾರೀರಿಕ ಸಂಬಂಧವನ್ನಿಡುವ ಛಾಯಾಚಿತ್ರಗಳು, ವಿಡಿಯೋಗಳನ್ನು ಮಾಡಿ ಈ ಮೂಲಕ ಆ ಯುವತಿಯರಿಗೆ ಬೆದರಿಸಲಾಗಿತ್ತು.

೫. ೨೨ ಪ್ರಕರಣಗಳಲ್ಲಿ ಹಿಂದೂ ಯುವತಿಯರಿಂದ ದೇವತೆಗಳ ಮೂರ್ತಿಗಳನ್ನು ಒಡೆಯಲು, ಗೋಮಾಂಸವನ್ನು ಸೇವಿಸಲು, ಬುರ್ಖಾ ಧರಿಸಲು, ಮಿತ್ರರೊಂದಿಗೆ ಶಾರೀರಿಕ ಸಂಬಂಧವನ್ನಿಡಲು ಒತ್ತಾಯಪಡಿಸಲಾಗಿತ್ತು. ೩ ಪ್ರಕರಣಗಳಲ್ಲಿ ಯುವತಿಯರ ಸಂಬಂಧಿಕರಿಗೆ ಶಿರಚ್ಛೇಧ ಮಾಡುವ ಬೆದರಿಕೆಯನ್ನು ಹಾಕಲಾಗಿತ್ತು.

೬. ೨೮ ಪ್ರಕರಣಗಳಲ್ಲಿ ಯುವತಿಯರ ವಯಸ್ಸು ೧೮ ವರ್ಷಗಳಿಗಿಂತ ಕಡಿಮೆಯಿತ್ತು. ಇದರ ಅರ್ಥ ಮುಸಲ್ಮಾನ ಯುವಕರು ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುತ್ತಿದ್ದರು.

೭. ವರ್ಷವಿಡೀ ಪ್ರಕರಣಗಳ ಅಭ್ಯಾಸ ಮಾಡಿದಾಗ ೭ ಪ್ರಕರಣಗಳಲ್ಲಿ ಮುಸಲ್ಮಾನ ಯುವಕರು ದಲಿತ ಹಿಂದೂ ಯುವತಿಯರಿಗೆ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದರು.