`ಕ್ರೈಂ ಪಾಟ್ರೋಲ್’ ಧಾರವಾಹಿಯಲ್ಲಿ ಆಫತಾಬ್ ಪುನವಾಲಾನನ್ನು ಹಿಂದೂ ಎಂದು ತೋರಿಸಿದ `ಸೋನಿ ಟಿವಿ’ಯನ್ನು ನಿಷೇಧಿಸುವಂತೆ ಹಿಂದೂಗಳಿಂದ ಆಗ್ರಹ

(ಕ್ರೈಂ ಪೆಟ್ರೋಲ್ ಇದು ಅಪರಾಧಿ ಜಗತ್ತಿನ ಸತ್ಯ ಘಟನೆ ಆಧಾರಿತ ಒಂದು ಟಿವಿ ಧಾರಾವಾಹಿ ಆಗಿದೆ.)

ಮುಂಬಯಿ – `ಸೋನಿ ಟಿವಿ’ಯಲ್ಲಿನ `ಕ್ರೈಂ ಪೆಟ್ರೋಲ್’, ಒಂದು ಭಾಗದಲ್ಲಿ ಶ್ರದ್ಧಾ ವಾಲಕರನ ಹತ್ಯೆ ಮಾಡಿ ಆಕೆಯ ೩೫ ತುಂಡಾಗಿ ಕತ್ತರಿಸಿರುವ ಅಫತಾಬ್ ಪುನಾವಾಲಾ ಇವನು ಮಾಡಿರುವ ಅಪರಾಧದ ಚಿತ್ರಿಕರಣ ಮಾಡಲಾಗಿದೆ; ಆದರೆ ಅದನ್ನು ಮಾಡುವಾಗ ಅವನನ್ನು ಹಿಂದೂ ಧರ್ಮದವನು ಹಾಗೂ ಶ್ರದ್ಧಾ ವಾಲಕರ ಈ ಪಾತ್ರದಲ್ಲಿ ಕ್ರೈಸ್ತ ಎಂದು ತೋರಿಸಲಾಗಿರುವುದರಿಂದ ಹಿಂದೂಗಳು ರೊಚ್ಚಿಗೆದ್ದು `ಸೋನಿ ಟಿವಿ’ಯನ್ನು ನಿಷೇಧಿಸಲು ಆಗ್ರಹಿಸುತ್ತಿದ್ದಾರೆ.

೧. ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣದಿಂದ ಸಂಪೂರ್ಣ ದೇಶದ ವಾತಾವರಣವೇ ಕದಡಿತ್ತು. ಶ್ರದ್ಧಾ ವಾಲಕರ ಈಕೆ ಆಫತಾಬ ಪುನವಲಾ ಇವನ ಜೊತೆ `ಲೀವ್ ಇನ್ ರಿಲೇಶನ್ ಶಿಪ್’ನಲ್ಲಿ (ವಿವಾಹ ಮಾಡಿಕೊಳ್ಳದೆ ಒಟ್ಟಿಗಿರುವುದು) ವಾಸಿಸುತ್ತಿದ್ದಳು. ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಕೆಲವು ತಿಂಗಳಿನ ನಂತರ ಈ ಪ್ರಕರಣ ಬಹಿರಂಗವಾಗಿತ್ತು.

೨. ಈ ಪ್ರಕರಣದಿಂದ `ಸೋನಿ ಟಿವಿ’ಯ `ಕ್ರೈಂ ಪೆಟ್ರೋಲ್’ ಧಾರವಾಹಿಯಲ್ಲಿ ಒಂದು ಭಾಗದ ಪ್ರಸಾರ ಮಾಡಿದೆ. ಕ್ರೈಂ ಪೆಟ್ರೋಲಿನ ಭಾಗದಲ್ಲಿ ಅಫತಾಬ ಇವನು ಹಿಂದೂ ಎಂದು ತೋರಿಸಿ ಈ ಧಾರಾವಾಹಿಯಲ್ಲಿ ಅವನ ಹೆಸರು `ಮಿಹರ್’ ಎಂದಾಗಿದೆ ಹಾಗೂ ಶ್ರದ್ಧಾಳನ್ನು ಕ್ರೈಸ್ತ ಎಂದು ತೋರಿಸಿ ಆಕೆಯನ್ನು `ಅನಾ ಫರ್ನಾಂಡಿಸ್’ ಎಂದು ತೋರಿಸಲಾಗಿದೆ.

೩. ಸೋನಿ ಟಿವಿಯ ಈ ಕೃತ್ಯದಿಂದ ಹಿಂದೂ ಯುವಕರನ್ನು ಉದ್ದೇಶಪೂರ್ವಕವಾಗಿ ಅಪಕೀರ್ತಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅನೇಕ ಜನರಿಂದ ಆರೋಪಿಸಲಾಗುತ್ತಿದೆ.

೪. ಟ್ವೀಟರ್ ನಲ್ಲಿ ಸೋನಿ ಟಿವಿಯ ಈ ಕಾರ್ಯಕ್ರಮ ನಿಷೇಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಹಾಗೂ ಸೋನಿ ಟಿವಿಯನ್ನು ನಿಷೇಧಿಸುಲು ಒತ್ತಾಯಿಸುವುದಕ್ಕಾಗಿ ಟ್ವಿಟರ್ ನಲ್ಲಿ #BoycottSonyTV ಎಂಬ `ಹ್ಯಾಷ್ ಟ್ಯಾಗ್’ ಕೂಡ ನಡೆಸಲಾಗುತ್ತಿದೆ. (ಹಿಂದೂಗಳಿಂದ ನಡೆಯುತ್ತಿರುವ ಈ ಆಗ್ರಹದಿಂದ ಹಿಂದೂ ಸಮಾಜ ಜಾಗೃತವಾಗಿರುವ ಸಂಕೇತವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ವಾಸ್ತವಾದಲ್ಲಿ ಹಿಂದೂಗಳು ಈ ರೀತಿ ಏಕೆ ಒತ್ತಾಯ ಮಾಡುವ ಸಮಯ ಬರಬಾರದು. ಸರಕಾರ ತಾನಾಗಿಯೇ ಇಂತಹ ವಾಹಿನಿಗಳ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
  • ಲವ್ ಜಿಹಾದ್ ನ ಪ್ರಕರಣಕ್ಕೆ ಬೇರೆ ತಿರುವು ನೀಡಿ ಆ ಘಟನೆಯ ತೀವ್ರತೆ ಕಡಿಮೆ ಮಾಡುವ ವಾಹಿನಿಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಈ ವಾಹಿನಿಗಳಲ್ಲಿ ಸತ್ಯ ಹೇಳುವ ಧೈರ್ಯ ಇಲ್ಲವೇ ? ಇಂತಹ ವಾಹಿನಿಗಳು ಭವಿಷ್ಯದಲ್ಲಿ ಹಿಂದೂಗಳು ಬಹಿಷ್ಕರಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ?