ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಇಲಾಖೆಯಿಂದ ನೋಯ್ಡಾ (ಉತ್ತರ ಪ್ರದೇಶ)ದ ಕಫ ಸಿರಪ್ ಕಂಪನಿಯ ಮೇಲೆ ದಾಳಿ

ಭಾರತೀಯ ಕಂಪನಿಯಿಂದ ನಿರ್ಮಿಸಿದ ಕಫ್ ಸಿರಪ್ ತೆಗೆದುಕೊಂಡಿದ್ದರಿಂದ ೧೮ ಹುಡುಗರು ಸಾವನ್ನಪ್ಪಿರುವ ಪ್ರಕರಣ

ನವ ದೆಹಲಿ – ಉಜಬೇಕಿಸ್ಥಾನದಲ್ಲಿ ಭಾರತೀಯ ಕಂಪನಿಯ ಕಫ್ ಸಿರಪ್ ತೆಗೆದುಕೊಂಡುರಿವುದರಿಂದ ೧೮ ಹುಡುಗರ ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಸರಕಾರ ದಾವೆ ಮಾಡಿತ್ತು. ಅದರ ನಂತರ ಕೇಂದ್ರ ಸರಕಾರದ ವಿವಿಧ ಸಂಸ್ಥೆ ಮತ್ತು ಉತ್ತರ ಪ್ರದೇಶದ ಆಹಾರ ಮತ್ತು ಔಷಧ ಇಲಾಖೆ ಇವರ ಒಂದು ತಂಡವು ನೋಯ್ಡಾದಲ್ಲಿನ ಕಂಪನಿಯ ಕಚೇರಿಯ ಮೇಲೆ ದಾಳಿ ನಡೆಸಿತು. ಉತ್ತರಪ್ರದೇಶ ಸರಕಾರದ ಓರ್ವ ಅಧಿಕಾರಿಯು, `ಮರಿಯನ್ ಬಯೋಟೆಕ್’ ಕಂಪನಿ ಭಾರತದಲ್ಲಿ ಕೆಮ್ಮಿನ ಔಷಧಿ `ಡಾಕ್-೧ ಮ್ಯಾಕ್ಸ್’ ಮಾರುವುದಿಲ್ಲ. ಅದು ಕೇವಲ ಉಜಬೇಕಿಸ್ಥಾನಕ್ಕೆ ರಫ್ತು ಮಾಡುತ್ತದೆ ಎಂದು ಹೇಳಿದರು.