ಬಾಡಮೆರ (ರಾಜಸ್ಥಾನ) ಇಲ್ಲಿ ಹಿಂದೂ ಧರ್ಮಗ್ರಂಥದ ಪುಟಗಳನ್ನು ಹರಿದು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ೩ ಜನರ ಬಂಧನ

ಬಾಡಮೆರ (ರಾಜಸ್ಥಾನ ) – ಇಲ್ಲಿ ಕ್ರಿಸ್ ಮಸ್ ದಿನದಂದು ಬೌದ್ಧ ಧರ್ಮದ ದೀಕ್ಷೆ ನೀಡುವ ಕೆಲವು ಜನರು ಹಿಂದೂ ಧರ್ಮಗ್ರಂಥದ ಪುಟಗಳನ್ನು ಹರಿದು ಅದನ್ನು ಸುಟ್ಟಿದರು ಹಾಗೂ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ಈ ಘಟನೆ ಬಾಸಾಸರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಗೊಂಡನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರು ಮತ್ತು ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ನಂತರ ಕ್ರಮ ಕೈಗೊಳ್ಳಲಾಯಿತು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳ ಧರ್ಮಗ್ರಂಥದ, ದೇವತೆಗಳ ಅವಮಾನ ಯಾವಾಗಲೂ ಆಗುತ್ತಿರುತ್ತದೆ ಮತ್ತು ಹಿಂದೂಗಳ ಮೇಲೆ ದಾಳಿ ನಡೆಯುತ್ತಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರಕ್ಕೆ ಮನೆಗೆ ಕಳುಹಿಸುವುದಕ್ಕೆ ಹಿಂದೂಗಳು ಸಂಘಟಿತರಾಗುವುದು ಅವಶ್ಯಕವಾಗಿದೆ !