ಡೆಹರಾಡುನ (ಉತ್ತರಖಂಡ) ಇಲ್ಲಿ ಹಿಂದೂ ಯುವಕನೊಂದಿಗೆ ವಿವಾಹವಾಗಲು ಮುಸಲ್ಮಾನ ಯುವತಿಗೆ ಕುಟುಂಬದವರಿಂದ ವಿರೋಧ !

ಡೆಹರಾಡುನ (ಉತ್ತರಾಖಂಡ) – ಇಲ್ಲಿ ಹಿಂದೂ ಯುವಕನೊಂದಿಗೆ ವಿವಾಹ ಮಾಡಿಕೊಳ್ಳಲು ಪ್ರಯತ್ನ ಮಾಡುವ ಮುಸಲ್ಮಾನ ಯುವತಿಯ ಕುಟುಂಬದವರಿಂದಲೇ ಆಕೆಯ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದರು. ಈ ಯುವತಿ ದಂಡ ನ್ಯಾಯಾಧಿಕಾರಿ ನ್ಯಾಯಾಲಯದಲ್ಲಿ, ‘ನಾನು ನನ್ನ ಸ್ವಂತ ಇಚ್ಛೆಯಿಂದ ವಿವಾಹ ಮಾಡುತ್ತಿರುವುದು’, ಎಂದು ಹೇಳಿದಳು. ಈ ಸಮಯದಲ್ಲಿ ಎರಡು ಪಕ್ಷದ ಜನರು ಹಾಗೂ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ನ್ಯಾಯಾಲಯದ ಹೊರಗೆ ಸೇರಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದ್ದರಿಂದ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

೧. ಮುಸಲ್ಮಾನ ಯುವತಿಯ ನವೆಂಬರ್ ೧೮ ರಿಂದ ಹಿಂದೂ ಪ್ರಿಯತಮೆಯ ಮನೆಗೆ ಹೋಗಿ ಅಲ್ಲೇ ವಾಸಿಸಲು ಆರಂಭಿಸಿದಳು. ಯುವತಿಯ ಕುಟುಂಬದವರು ಆಕೆ ನಾಪತ್ತೆ ಆಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಆಕೆಯನ್ನು ಪ್ರಿಯತಮೆಯ ಮನೆಯಲ್ಲಿ ಪತ್ತೆ ಮಾಡಿದರು. ಆಗ ಆಕೆ ‘ನಾನು ಸ್ವತಃ ಇಲ್ಲಿ ಬಂದು ವಾಸಿಸುತ್ತಿದ್ದೇನೆ’, ಎಂದು ಹೇಳಿದಳು.

೨. ಈ ಸಮಯದಲ್ಲಿ ಈ ಇಬ್ಬರು ಒಂದು ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡಿದ್ದರು. ಅದಕ್ಕೆ ಕಾನೂನಿನ ಮಾನ್ಯತೆ ಪಡೆಯುವುದಕ್ಕಾಗಿ ಅವರು ನ್ಯಾಯದಂಡಾಧಿಕಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಿಂದ ನ್ಯಾಯಾಲಯವು ಅವರನ್ನು ಕರೆಸಿದರು. ಆಗ ಯುವತಿಯ ಕುಟುಂಬದವರು ಅಲ್ಲಿ ಬಂದಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಡಿಸೆಂಬರ್ ೩೦ ರಂದು ನ್ಯಾಯಾಲಯ ಮುಂದಿನ ವಿಚಾರಣೆ ನಡೆಸುವುದು. ನ್ಯಾಯಾಲಯವು ಪೊಲೀಸರಿಗೆ ಇವರಿಬ್ಬರಿಗೂ ಸಂರಕ್ಷಣೆ ನೀಡುವಂತೆ ಆದೇಶ ನೀಡಿದೆ.

ಸಂಪಾದಕೀಯ ನಿಲುವು

ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಫುಸಲಾಯಿಸಿ ಓಡಿಸಿಕೊಂಡು ಹೋದ ನಂತರ ಮತ್ತು ಹಿಂದೂಗಳು ಅದಕ್ಕೆ ವಿರೋಧಿಸಿದ ನಂತರ ಹಿಂದೂಗಳಿಗೆ ‘ಸರ್ವಧರ್ಮ ಸಮಭಾವ’ದ ಉಪದೇಶ ನೀಡುವ ಜಾತ್ಯತೀತರು ಇಂತಹ ಸಮಯದಲ್ಲಿ ಎಲ್ಲಿರುತ್ತಾರೆ ?