ನೇಪಾಳದಲ್ಲಿ ಭಾರತೀಯ ನಾಗರೀಕನನ್ನು ಗುಂಡಿಕ್ಕಿ ಹತ್ಯೆ

ಕಟ್ಮಾಂಡು (ನೇಪಾಳ) – ನೇಪಾಳದ ಮಹಾಗಢಿಮಾಯಿ ನಗರದಲ್ಲಿ ೫ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರೋಪಿಗಳು ಶಿವ ಪೂಜನ ಯಾದವ (೪೫ ವರ್ಷ) ಈ ಭಾರತೀಯ ನಾಗರೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಡಿಸೆಂಬರ್ ೨೪ ರಂದು ನಡೆದಿದೆ. ಯಾದವ ಗಾಯಗೊಂಡ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು; ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.