ಕೋಚಿ(ಕೇರಳ)- ಇಲ್ಲಿಯ ಕ್ರಿಸ್ ಮಸ್ ನಿಮಿತ್ತ ಆಯೋಜಿಸಿದ ಪ್ರಾರ್ಥನೆಯ ಸಮಯದಲ್ಲಿ `ಸೇಂಟ ಮೇರಿ ಕೆಥಡ್ರಲ್ ಬೆಸಿಲಿಕಾ’ ಈ ಚರ್ಚನಲ್ಲಿ ಕ್ರಿಶ್ಚಿಯನ್ನರ 2 ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಇಂತಹುದೇ ಘಟನೆ `ಎರ್ನಾಕುಲಂ ಕೆಥಡ್ರಲ್ ಬೆಸಿಲಿಕಾ’ ದಲ್ಲಿಯೂ ನಡೆಯಿತು.
೧. `ಸೇಂಟ ಮೇರಿ ಕೆಥಡ್ರಲ್ ಬೆಸಿಲಿಕಾ’ ಚರ್ಚನಲ್ಲಿ 24 ಡಿಸೆಂಬರ ಸಮಯದಲ್ಲಿ `ಹೋಲಿ ತಿಂಗಳು’ (ರವಿವಾರ ಮಾಡಲಾಗುವ ಏಸುವಿನ ಪ್ರಾರ್ಥನೆ) ಬೆಂಬಲಿಗರು ಚರ್ಚ್ ಗೆ ಬಂದಿದ್ದರು. ಆದರೆ ಎರಡನೇಯ ಗುಂಪು ಹೊರಗಿತ್ತು. ಆ ಸಮಯದಲ್ಲಿ ಈ ಗುಂಪುಗಳ ನಡುವೆ ಮಾರಾಮಾರಿ ನಡೆಯಿತು. ಆ ಸಮಯದಲ್ಲಿ ಏಸುವಿನ ಅರ್ಪಿಸಲು ತಂದಿದ್ದ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಈ ಸಮಯದಲ್ಲಿ ಚರ್ಚಿನಲ್ಲಿ ಧ್ವಂಸಗಳಾಗಿವೆಯೆಂದು ಹೇಳಲಾಗುತ್ತಿದೆ. ಇದರ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಘಟನಾ ಸ್ಥಳವನ್ನು ತಲುಪಿದರು.
೨. ಸಿರೊ-ಮಲಾಬಾರ ಚರ್ಚಿನಡಿಯಲ್ಲಿ ಈ ಚರ್ಚ ಕಳೆದ ಕೆಲವು ದಶಕಗಳಿಂದ `ಮಾಸ್’ನ ವಿವಿಧ ಪದ್ಧತಿಯನ್ನು ಅವಲಂಬಿಸುತ್ತಿದೆ. ಮಾಸ್ ಸಮಯದಲ್ಲಿ ಕೆಲವು ಪಾದ್ರಿಗಳು ಜನರೆಡೆಗೆ ಮುಖ ಮಾಡುತ್ತಾರೆ. ಇನ್ನೂ ಕೆಲವು ಪಾದ್ರಿಗಳು ಏಸುವಿನ ಮೂರ್ತಿಯ ದಿಕ್ಕಿನಲ್ಲಿ ಮುಖ ಮಾಡುತ್ತಾರೆ. ಕೆಲವು ಸ್ಥಳಗಳಲ್ಲಿ ಎರಡೂ ಪದ್ಧತಿಯನ್ನು ಪಾಲಿಸುತ್ತಾರೆ. ಇದರಿಂದಲೇ ಅನೇಕ ಸಲ ವಾದ ವಿವಾದಗಳು ನಡೆದು ಮಾರಾಮಾರಿಗಳಾಗುತ್ತವೆ.
ಸಂಪಾದಕೀಯ ನಿಲುವು`ಹಿಂದೂ ಧರ್ಮದಲ್ಲಿ ಜಾತಿ-ಜಾತಿಗಳಲ್ಲಿ ಭೇದಭಾವವಿದ್ದು ಅವರಲ್ಲಿ ವಾದ ವಿವಾದಗಳಾಗುತ್ತವೆ’, ಎಂದು ಸುದ್ದಿ ಪ್ರಸಾರ ಮಾಡುವ ಪ್ರಸಾರ ಮಾಧ್ಯಗಳು ಕ್ರಿಶ್ಚಿಯನ್ ರಲ್ಲಿ ಇರುವ ಗುಂಪುಗಳು ಮತ್ತು ಇದರಿಂದಾಗುವ ಮಾರಾಮಾರಿಯ ಕಡೆಗೆ ಮಾತ್ರ ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದನ್ನು ಗಮನಿಸಿರಿ. |