ಮುಸಲ್ಮಾನರು `ಮೇರಿ ಕ್ರಿಸ್ಮಸ್’ ಎಂದು ಹೇಳಿ `ಕ್ರಿಸ್ಮಸ್’ ಶುಭಾಶಯ ನೀಡಬಾರದು ! – ಇಂಡೋನೇಷಿಯಾದ ಮೌಲ್ವಿ ಮಾರೂಫ್ ಅಮೀನ್

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ಮುಖಂಡ)

ಜಕಾರ್ತ – ಮುಸಲ್ಮಾನರು `ಮೇರಿ ಕ್ರಿಸ್ಮಸ್’ ಎನ್ನುತ್ತಾ `ಕ್ರಿಸ್ ಮಸ್ ನ ಶುಭಾಶಯಗಳು ನೀಡಬಾರದೆಂದು ಇಂಡೋನೇಷಿಯಾದ ಮೌಲ್ವಿ ಮಾರುಫ ಆಮೀನ್ ಇವರು ಹೇಳಿದರು. ಒಂದು ವಾರ್ತೆಯ ಪ್ರಕಾರ ಮೌಲ್ವಿ ಮಾರುಫ್ ಅಮೀನ್ ಇವರು ಇಂಡೋನೇಷ್ಯಾದ ಇಸ್ಲಾಮಿಕ್ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಮೌಲ್ವಿ ಅಮೀನ್ ಇವರು, “ಮುಸಲ್ಮಾನರು ಅವರ ಇತರ ಬಾಂಧವರಿಗೆ `ಮೇರಿ ಕ್ರಿಸ್ಮಸ್’ ಎಂದು ಶುಭಾಶಯಗಳು ನೀಡದಂತೆ ಉತ್ತೇಜಿಸಬೇಕು. ಮುಸಲ್ಮಾನರಿಗಾಗಿ `ಕ್ರಿಸ್ಮಸ್ ಪಾರ್ಟಿ’ ಅಥವಾ ಉತ್ಸವಗಳಲ್ಲಿ ಉಪಸ್ಥಿತ ಇರುವುದು `ಹರಾಮ್’ (ಇಸ್ಲಾಂಗೆ ನಿಶಿದ್ಧ) ಆಗಿದೆ.” ಎಂದು ಹೇಳಿದರು.

ಮೌಲ್ವಿಯವರು ಕುರಾನಿನ ಆಧಾರ ನೀಡುತ್ತಾ `ಮೇರಿ ಕ್ರಿಸ್ಮಸ್’ ಎಂದರೆ `ಹರಾಮ್’ ಇರುವುದೆಂದು ಹೇಳಿದ್ದಾರೆ. ಕ್ರಿಸ್ಮಸ್ಸಿನ ಮೊದಲು `ಡಿ ಇಸ್ಲಾಮಿಕ್ ಇಂಫಾರ್ಮೇಷನ್’ ಇದರಲ್ಲಿ ಪ್ರಕಾಶಿತಗೊಂಡಿರುವ ಇನ್ನೊಂದು ವರದಿಯಲ್ಲಿ, `ಕ್ರಿಸ್ಮಸ್’ಸಹ ಯಾವುದೇ ಮುಸಲ್ಮಾನೇತರರ ಹಬ್ಬ ಆಚರಿಸುವುದು ಇಸ್ಲಾಂನಲ್ಲಿ `ಹರಾಮ್’ ಆಗಿದೆ. ಕ್ರೈಸ್ತರು ಏಸುನ(ದೇವರ ಪುತ್ರ) ಜನ್ಮದಿನ ಆಚರಿಸುತ್ತಾರೆ. ಇದು ಇಸ್ಲಾಂನ ವಿರೋಧದಲ್ಲಿದೆ. ಇದು ಇಸ್ಲಾಂನಲ್ಲಿ ಎಲ್ಲಕ್ಕಿಂತ ಹೆಚ್ಚು ದಂಡ ವಿಧಿಸುವ ಅಪರಾಧಗಳಲ್ಲಿ ಒಂದಾಗಿದೆ’, ಎಂದು ನಮೂದಿಸಲಾಗಿದೆ. `ಕ್ರಿಸ್ಮಸ್’ ಆಚರಿಸಲು ನಿಷೇಧಿಸಿರುವ ಕುರಾನಿನಲ್ಲಿನ ಕೆಲವು ಅಯತಗಳ (ವಾಕ್ಯಗಳನ್ನು)ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಧರ್ಮದವರನ್ನು ಬಿಟ್ಟು ಇತರ ಪಂಥದ ಧರ್ಮಗುರುಗಳು ಅವರವರ ಪಂಥದ ನಿಯಮಗಳನ್ನು ಪಾಲನೆ ಮಾಡಲು ಹೇಳುತ್ತಾರೆ. ಹಿಂದೂಗಳಿಗೆ ಮಾತ್ರ ಸರ್ಮಧರ್ಮಸಮಭಾವದ ಕಲಿಕೆ ನೀಡಿದ್ದರಿಂದ ಅವರು ಧರ್ಮ ಪಾಲನೆ ಮಾಡದೆ ತದ್ವಿರುದ್ಧ ಧರ್ಮ ವಿರೋಧಿ ಕೃತ್ಯಗಳನ್ನು ಮಾಡುವುದರಲ್ಲಿ ಧನ್ಯರೆಂದು ತಿಳಿದುಕೊಳ್ಳುತ್ತಾರೆ !