ಕನ್ಹಯಾಲಾಲ್ ಅವರ ಹತ್ಯೆಯು ಭಯೋತ್ಪಾದಕ ಘಟನೆ !

  • ಉದಯಪೂರನ ಕನ್ಹಯಾಲಾಲ್ ಇವರ ಹತ್ಯೆಯ ಆರೋಪಿಯ ಮೇಲೆ ಆರೋಪ ಪತ್ರ ದಾಖಲು

  • ಹತ್ಯೆಯಲ್ಲಿ ಪಾಕಿಸ್ತಾನದ ೨ ಜನರು ಸಹಭಾಗಿ!

ಉದಯಪೂರ್ (ರಾಜಸ್ಥಾನ): ಇಲ್ಲಿಯ ಕನ್ಹಯಾಲಾಲನನ್ನು ಹತ್ಯೆ ಮಾಡಿರುವ ರಿಯಾಜ್ ಮತ್ತು ಗೌಸ್ ಮಹಮ್ಮದ್ ಇವರಲ್ಲದೇ ಇತರೆ ೧೧ ಜನರ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ವಿಶೇಷ ಎನ್.ಐ.ಎ. ನ್ಯಾಯಾಲಯದಲ್ಲಿ ಆರೋಪ ಪತ್ರ ದಾಖಲಿಸಿದೆ. ಇದರಲ್ಲಿ ಪಾಕಿಸ್ತಾನದ ಇಬ್ಬರ ಸಮಾವೇಶವಿದೆ. ಆದರೆ ಇದರಲ್ಲಿ ಇವರಿಬ್ಬರ ಪಾತ್ರ ಏನು ಮತ್ತು ಎಷ್ಟು ಇತ್ತು ? ಎನ್ನುವುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಈ ಇಬ್ಬರು ಆರೋಪಿಗಳು ವಾಟ್ಸಪ್ ಗುಂಪಿನ ಅಡ್ಮಿನ್ (ನಿಯಂತ್ರಕರು) ಆಗಿದ್ದರು.

ಅವರು ಈ ಗುಂಪಿನಲ್ಲಿ ಪ್ರಚೋದನೆಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದರು. ಜೂನ್ ೨೮ ರಂದು ರಿಯಾಜ್ ಮತ್ತು ಗೌಸ್ ಇವರು ಕನ್ಹಯಾಲಾಲ್ ಸಾಹು ಇವರ ಅಂಗಡಿಗೆ ನುಗ್ಗಿ ಅವರ ಹತ್ಯೆ ಮಾಡಿದ್ದರು. ಈ ಆರೋಪ ಪತ್ರದಲ್ಲಿ , ಆರೋಪಿಗಳು ಸೇಡಿಗಾಗಿ ಈ ಷಡ್ಯಂತ್ರ ರೂಪಿಸಿದ್ದರು.. ಇದು ಭಯೋತ್ಪಾದಕ ಘಟನೆಯಾಗಿದೆ. ಆರೋಪಿಗಳು ಕಟ್ಟಾ ಮೂಲಭೂತವಾದಿಗಳಾಗಿದ್ದಾರೆ. ಭಾರತವಲ್ಲದೆ ಸಂಪೂರ್ಣ ಜಗತ್ತಿನಿಂದ ಬರುವ ಆಕ್ಷೇಪಾರ್ಹ ಆಡಿಯೋ ಮತ್ತು ವಿಡಿಯೋ ಸಂದೇಶ ಇವರ ಮೇಲೆ ಪ್ರಭಾವ ಬೀರಿತ್ತು. ರಿಯಾಜ್ ಮತ್ತು ಗೌಸ್ ಈ ಆರೋಪಿಗಳು ದೇಶಾದ್ಯಂತ ಈ ಭಯಾನಕ ಕೃತ್ಯಕ್ಕಾಗಿ ಚಾಕುವಿನ ವ್ಯವಸ್ಥೆ ಮಾಡಿದ್ದರು. ಕನ್ಹಯಾಲಾಲ್ ಪೈಗಂಬರರ ಬಗ್ಗೆ ಫೇಸ್ಬುಕ್ಕಿನಲ್ಲಿನ ಪೋಸ್ಟ್ ಮಾಡಿರುವ ಬಗ್ಗೆ ಆರೋಪಿಯ ಮನಸ್ಸಿನಲ್ಲಿ ಸಿಟ್ಟು ಇತ್ತು. ಮೂಲಭೂತವಾದಿಗಳಾಗಿರುವುದರಿಂದ ಸಂಪೂರ್ಣ ಭಾರತದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಆರೋಪಿಗಳು ಈ ಹತ್ಯೆಯ ವಿಡಿಯೋ ತಯಾರಿಸಿ ಅದನ್ನು ಪ್ರಸಾರಗೊಳಿಸಿದರು. ಇಸ್ಲಾಮಿನ ವಿರುದ್ಧ ಬರೆಯುವವರ ಹತ್ಯೆ ಮಾಡುವುದರಿಂದ ಭಾರತದ ಜನರಲ್ಲಿ ಭಯ ಮತ್ತು ಭೀತಿಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಅವರು ಇನ್ನೊಂದು ಬೆದರಿಕೆಯ ವಿಡಿಯೋ ಪ್ರಸಾರಗೊಳಿಸಿದ್ದರು.