ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿ ಒಂದು ಕಡೆಗೆ ಸರಕಾರ ಲವ್ ಜಿಹಾದ್ ಮತ್ತು ಬಲವಂತದ ಮತಾಂತರದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುತ್ತಿರುವಾಗ ಇನ್ನೊಂದು ಕಡೆಗೆ ಈ ರೀತಿಯ ಘಟನೆಗಳು ಮಾತ್ರ ಹೆಚ್ಚುತ್ತಿದೆ. ಕಳೆದ ೨೪ ಗಂಟೆಯಲ್ಲಿ ಇಂದೂರಿನಲ್ಲಿ ೩ಲವ್ ಜಿಹಾದ್ ನ ಪ್ರಕರಣಗಳು ಬೆಳಕಿಗೆ ಬಂದಿದ್ದರೆ ಹ ಕಳೆದ ೬ ದಿನದಲ್ಲಿನ ಇದು ೫ ನೇ ಪ್ರಕರಣವಾಗಿದೆ.
೧. ಭಜರಂಗದಳದ ಕಾರ್ಯಕರ್ತರು ಸಂಯೋಗಿತಾಗಂಜ ಪೊಲೀಸ ಠಾಣೆಯ ಸರಹದ್ದಿನಲ್ಲಿನ ಟ್ರಾಫಿಕ್ ಪಾರ್ಕ್ ನಿಂದ ಒಬ್ಬ ಯುವಕನನ್ನು ಹಿಂದೂ ಹುಡುಗಿಯ ಜೊತೆ ಹಿಡಿದರು. ಅವರು ಆ ಯುವಕನ ಆಧಾರ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಆಧಾರ ಕಾರ್ಡಿನಲ್ಲಿ ಅವನ ಹೆಸರು ಅರಬಾಜ ಖಾನ್ ಎಂದು ಬರೆಯಲಾಗಿತ್ತು. ಆ ಯುವಕನ ಸತ್ಯ ಬಹಿರಂಗವಾದ ನಂತರ ಹುಡುಗಿಗೆ ಕೂಡ ಆಶ್ಚರ್ಯವಾಗಿದೆ. ಇಂದಿನವರೆಗೆ ಅವನು ಅಜ್ಜು ಎಂದು ಹಿಂದೂ ಹೆಸರು ಹೇಳಿ ಆಕೆಯನ್ನು ಭೇಟಿ ಮಾಡುತ್ತಿದ್ದನು. ಹೀಗೆ ಸಂತ್ರಸ್ತ ಹುಡುಗಿ ಕಾರ್ಯಕರ್ತರಿಗೆ ಹೇಳಿದಳು. ಭಜರಂಗದಳದ ಕಾರ್ಯಕರ್ತರು ಆ ಯುವಕನನ್ನು ಥಳಿಸಿದರು ಮತ್ತು ಪೊಲೀಸರ ವಶಕ್ಕೆ ನೀಡಿದರು. ಅರಬಾಜ್ ಖಾನ್ ಲವ್ ಜಿಹಾದ್ ನ ಆರೋಪಿ ಇರುವನೆಂದು ಬಜರಂಗದಳ ಹೇಳಿದೆ. ಅವನಿಗೆ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಗೆ ಸಿಲುಕಿಸುವ ಪ್ರಶಿಕ್ಷಣ ನೀಡಲಾಗಿದೆ.
೨. ಈ ಹಿಂದೆ ಅಖಲಾಖ್ ಅಲಿಯಾಸ್ ಅರ್ಜುನನನ್ನು ನೆಹರು ಮೈದಾನದ ಪರಿಸರದಿಂದ ಬಂದಿಸಲಾಗಿತ್ತು. ಲವ್ ಜಿಹಾದಿನ ಇನ್ನೊಂದು ಪ್ರಕರಣದಲ್ಲಿ ರಾಜೇಂದ್ರ ನಗರ ಪರಿಸರದಲ್ಲಿ ಆಫತಾಬ್ ಖಾನ್ ಇವನನ್ನು ಕೂಡ ಬಂದಧಿಸಲಾಗಿತ್ತು.
ಸಂಪಾದಕೀಯ ನಿಲುವುಲವ್ ಜಿಹಾದ್ ನ ವಿರುದ್ಧ ಕೇವಲ ಕಾನೂನು ಅಷ್ಟೇ ಅಲ್ಲ, ಮತಾಂಧ ಯುವಕರು ಹಿಂದೂ ಯುವತಿಯರ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡುವ ಧೈರ್ಯ ಮಾಡಬಾರದು ಆ ರೀತಿಯ ವಾತಾವರಣ ನಿರ್ಮಾಣ ಮಾಡುವುದು ಅವಶ್ಯಕ ! |