ರಾಮ ಸೇತುವಿನಂತೆ ಇರುವ ರಚನೆ ಈ ಹಿಂದೆ ಅಸ್ತಿತ್ವದಲ್ಲಿ ಇರುವ ಸಂಕೇತ !

ಸಂಸತ್ತಿನಲ್ಲಿ ಕೇಂದ್ರ ಸರಕಾರದ ಹೇಳಿಕೆ !

ಕೇಂದ್ರ ಸಚಿವ ಜಿತೇಂದ್ರ ಸಿಂಹ

ನವದೆಹಲಿ – ಯಾವ ಸ್ಥಳದಲ್ಲಿ (ಭಾರತ ಮತ್ತು ಶ್ರೀಲಂಕಾದ ನಡುವೆ ಇರುವ ಸಮುದ್ರದಲ್ಲಿ ) ಪೌರಾಣಿಕ ರಾಮಸೇತುವೆ ಇರುವುದರ ಬಗ್ಗೆ ನಂಬಲಾಗುತ್ತದೆ. ಆ ಸ್ಥಳದಲ್ಲಿ ಉಪಗ್ರಹದ ಮೂಲಕ ಛಾಯಾ ಚಿತ್ರಗಳನ್ನು ತೆಗೆಯಲಾಗಿದೆ. ಸರಳ ಪದಗಳಲ್ಲಿ ಹೇಳುವುದಾದರೆ, ನೈಜ ರೂಪ ಅಲ್ಲಿ ಇದೆ ಇದು ಹೇಳುವುದು ಕಷ್ಟ ಸಾಧ್ಯ. ಆದಾಗ್ಯೂ ಕೆಲವು ಸಂಕೇತಗಳಿದ್ದು ಅವು ಇಂತಹ , ರೀತಿಯ ರಚನೆ ಅಲ್ಲಿ ಅಸ್ತಿತ್ವದಲ್ಲಿ ಇರಬಹುದು, ಎಂದು ಸೂಚಿಸುತ್ತಿದೆ. ಎನ್ನುವ ಅಭಿಪ್ರಾಯವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಹ ಇವರು ರಾಜ್ಯಸಭೆಯಲ್ಲಿ ಭಾಜಪ ಸಂಸದ ಕಾರ್ತಿಕೇಯ ಶರ್ಮ ಇವರು ರಾಮ ಸೇತುವೆ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.

ತಂತ್ರಜ್ಞಾನದ ಮೂಲಕ ಕೆಲವು ಪ್ರಮಾಣದಲ್ಲಿ ನಾವು ಸೇತುವೆಯ (ರಾಮ ಸೇತುವೆ) ತುಂಡುಗಳು ಮತ್ತು ಒಂದು ರೀತಿಯ ಸುಣ್ಣದ ರಾಶಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದು ಸೇತುವೆಯ ಭಾಗವಾಗಿದೆ ಯೇ ಅಥವಾ ಅದರ ಅವಶೇಷ ಎಂದು ನಾವು ಹೇಳಲು ಸಾಧ್ಯವಿಲ್ಲ. ಸಂಶೋಧನೆಯಲ್ಲಿ ನಮಗೆ ಕೆಲವು ಮಿತಿಗಳಿರುತ್ತವೆ. ಕಾರಣ ಅದರ ಇತಿಹಾಸ ೧೮ ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ನಾವು ಇತಿಹಾಸಕ್ಕೆ ಹೋದರೆ ಆಗ ಈ ಸೇತುವೆ ಸುಮಾರು ೫೬ ಕಿಲೋಮೀಟರಷ್ಟು ಉದ್ದವಾಗಿತ್ತು, ಎಂದು ಜಿತೇಂದ್ರ ಸಿಂಹ ಇವರು ಹೇಳಿದರು.

ಕಾಂಗ್ರೆಸ್ ರಾಮ ಸೇತುವೆ ಶ್ರೀ ರಾಮನು ಕಟ್ಟಿರುವುದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಿರಾಕರಿಸಿತ್ತು !

೨೦೦೫ ರಲ್ಲಿ ಆಗಿನ ಕಾಂಗ್ರೆಸ್ ಸರಕಾರವು ‘ಸೇತು ಸಮುದ್ರಂ’ ಹೆಸರಿನ ಒಂದು ದೊಡ್ಡ ಕಾಲುವೆಯ ಕಟ್ಟಡದ ಘೋಷಣೆ ಮಾಡಿತ್ತು. ಇದರಲ್ಲಿ ರಾಮ ಸೇತುವೆಯ ಕೆಲವು ಭಾಗದಿಂದ ಮರಳು ತೆಗೆದು ಅದನ್ನು ನಷ್ಟಗೊಳಿಸಿದೆಯೆಂದು ಚರ್ಚೆಗಳು ನಡೆದಿತ್ತು . ಒಟ್ಟಾರೆ ನೌಕೆಗಳು ನೀರಿಗೆ ಇಳಿಯಲು ಸಾಧ್ಯವಾಗುತ್ತದೆ, ಈ ಕಟ್ಟಡ ದಿಂದ ರಾಮೇಶ್ವರಮ್ ದೇಶದಲ್ಲಿನ ಎಲ್ಲಕ್ಕಿಂತ ದೊಡ್ಡ ಬಂದರು ನಿರ್ಮಿಸುವುದು ಕೂಡ ಸಮಾವೇಶವಿತ್ತು. ಇದರಿಂದ ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನೇರ ಸಮುದ್ರ ಮಾರ್ಗ ನಿರ್ಮಾಣವಾಗಿದ್ದರೆ ಈ ವ್ಯವಹಾರದಲ್ಲಿ ೫೦ ಸಾವಿರ ಕೋಟಿ ರೂಪಾಯ ಲಾಭ ಆಗುವುದೆಂದು ಅಂದಾಜು ಮಾಡಲಾಗಿತ್ತು. ಇದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾದ ಬಳಿಕ ಸರಕಾರವು ನ್ಯಾಯಾಲಯದಲ್ಲಿ ಶ್ರೀರಾಮ ಕಾಲ್ಪನಿಕ ಇರುವುದರಿಂದ ರಾಮಸೇತುವೆ ಅವನು ಕಟ್ಟಲಿಲ್ಲ ಎಂದು ವಾದಿಸಿತ್ತು. ಅದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾದ ನಂತರ ಸರಕಾರ ಈ ದಾವೆಯನ್ನು ಹಿಂಪಡೆಯಿತು ಮತ್ತು ನಂತರ ಈ ಯೋಜನೆಯನ್ನು ರದ್ದುಪಡಿಸಲಾಗಿತ್ತು. ಹಾಗೂ ಈ ಸೇತುವೆ ಕೆಳಗಿನ ಟೆಕ್ಟೋನಿಕ್ ಪ್ಲೇಟ್ಸ್ ಗಳ ದುರ್ಬಲತೆಯಿಂದ ಅದರಲ್ಲಿ ಬದಲಾವಣೆ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಆಪತ್ತು ಬರಬಹುದೆಂದು ವಿಜ್ಞಾನಿಗಳ ಅಭಿಪ್ರಾಯವಾಗಿತ್ತು. ಇಲ್ಲಿ ೩೬ ಸಾವಿರ ರೀತಿಯ ದುರ್ಲಭ ಸಮುದ್ರ ಜೀವಿಗಳು ಮತ್ತು ವನಸ್ಪತಿಗಳು ಇರುವುದು ಎಂದು ಪರ್ಯಾವರಣ ತಜ್ಞರ ಹೇಳಿಕೆ ಆಗಿದೆ. ಈ ಸೇತುವೆ ನಷ್ಟಗೊಳಿಸಿದರೆ ದುರ್ಲಭ ಪ್ರಾಣಿಗಳ ಸಂಕುಲ ನಾಶವಾಗುತ್ತದೆ ಮತ್ತು ಮಳೆಗಾಲದ ನಿಸರ್ಗ ಚಕ್ರದ ಮೇಲೆ ಪರಿಣಾಮ ಬೀರುವುದು.

ರಾಮ ಸೇತುವೆಯ ಮಾಹಿತಿ

ಭಾರತದ ರಾಮೇಶ್ವರಮ ಮತ್ತು ಶ್ರೀಲಂಕಾದ ಮನ್ನಾರ ದ್ವೀಪದ ಮಧ್ಯದಲ್ಲಿ ತಿಳಿಯಾದ ಸುಣ್ಣದ ಕಲ್ಲಿನ ಸರಪಳಿ ಇದೆ. ಅದನ್ನು ಭಾರತದಲ್ಲಿ ರಾಮ ಸೇತುವೆ ಮತ್ತು ಜಗತ್ತಿನಾದ್ಯಂತ ಆಡಮ್ಸ್ ಬ್ರೀಜ್ ಎನ್ನಲಾಗುತ್ತದೆ. ಅದರ ಉದ್ದ ೪೮ ಕಿಲೋಮೀಟರ್ ಇರುವುದು. ಈ ಸೇತುವೆ ಮನ್ನಾರಿನ ಆಖಾತ ಮತ್ತು ಪಾಲ್ಕ ಜಲಸಂಧಿ ಒಂದಕ್ಕೊಂದು ಬೇರ್ಪಡಿಸುತ್ತದೆ. ಈ ಭಾಗದಲ್ಲಿನ ಸಮುದ್ರದ ಆಳ ಬಹಳ ಕಡಿಮೆ ಇರುವುದು. ಆದ್ದರಿಂದ ಈ ಸ್ಥಳದಲ್ಲಿ ದೊಡ್ಡ ನೌಕೆಗಳು ನಡೆಸಲು ಅಡಚಣೆ ಬರುತ್ತದೆ.೧೫ ನೇ ಶತಮಾನದವರೆಗೆ ಇದರ ಮೇಲಿಂದ ರಾಮೇಶ್ವರಮ ಇಂದ ಮನ್ನಾರ ದ್ವೀಪದವರೆಗೆ ನಡೆದು ಹೋಗಬಹುದಾಗಿತ್ತು ; ಆದರೆ ಬಿರುಗಾಳಿಯಿಂದ ಇಲ್ಲಿಯ ಸಮುದ್ರ ಆಳವಾಯಿತು ಮತ್ತು ಸೇತುವೆ ಸಮುದ್ರದಲ್ಲಿ ಮುಳಗಿತು.೧೯೯೩ ರಲ್ಲಿ ಅಮೇರಿಕಾದ ಅಂತರಿಕ್ಷ ಸಂಶೋಧನೆ ಸಂಸ್ಥೆ ನಾಸಾ ರಾಮಸೇತುವೆಯ ಛಾಯಾಚಿತ್ರಗಳನ್ನು ಉಪಗ್ರಹದ ಮೂಲಕ ತೆಗೆದ ನಂತರ ಪ್ರಸಾರ ಮಾಡಲಾಯಿತು. ಅದರಲ್ಲಿ ಇದನ್ನು ಮಾನವ ನಿರ್ಮಿತ ಸೇತುವೆ ಎಂದು ವರ್ಣನೆ ಮಾಡಲಾಗಿದೆ .

ಮೋದಿ ಸರಕಾರ , ರಾಮ ಸೇತುವೆಗೆ ಯಾವುದೇ ಸಾಕ್ಷಿ ಇಲ್ಲ ! ಎಂದು ಹೇಳುತ್ತದೆಯೆಂದು ಕಾಂಗ್ರೆಸ್ಸಿನ ಟೀಕೆ

ಕಾಂಗ್ರೆಸ್ ಮುಖಂಡ ಪವನ ಖೇಡ ಇವರು ಕೇಂದ್ರ ಸರಕಾರದ ರಾಮ ಸೇತುವಿನ ಬಗೆಗಿನ ಈ ಹೇಳಿಕೆಯನ್ನು ಟೀಕಿಸಿದ್ದಾರೆ. ಖೇಡ ಟ್ವೀಟ್ ನಲ್ಲಿ ಎಲ್ಲಾ ಭಕ್ತ ಜನರು ಕಿವಿಗೊಟ್ಟು ಕೇಳಿರಿ ಮತ್ತು ಕಣ್ಣು ತೆರೆದು ನೋಡಿರಿ. ಮೋದಿ ಸರಕಾರ ಸಂಸತ್ತಿನಲ್ಲಿ ರಾಮಸೇತುವೆ ಇರುವುದರ ಬಗ್ಗೆ ಯಾವುದೇ ಸಾಕ್ಷಿ ಪುರಾವೆಗಳು ಇಲ್ಲ ಎಂದು ಹೇಳುತ್ತಿದೆ.