ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಬಾರಿ ಸಿದ್ದಿಕಿ ಅವರಿಂದ ದೇಶಕ್ಕೆ ಮಾನಹಾನಿ ಮಾಡುವ / ಅಪಕೀರ್ತಿ ತರುವ ಆಕ್ರೋಶದ ಹೇಳಿಕೆ!
ಪಾಟಲಿಪುತ್ರ (ಬಿಹಾರ) – ಭಾರತವು ಈಗ ಮುಸಲ್ಮಾನರಿಗೆ ವಾಸಯೋಗ್ಯ ದೇಶವಾಗಿಲ್ಲ. ಹೀಗಾಗಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಮಕ್ಕಳಿಗೆ, ಅಲ್ಲಿಯೇ ನೌಕರಿ ಮಾಡಿ ಅಲ್ಲಿನ ಪೌರತ್ವ ಪಡೆಯುವಂತೆ ಹೇಳಿದ್ದೇನೆ ಎಂದು ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಮುಖಂಡ ಅಬ್ದುಲ ಬಾರಿ ಸಿದ್ದಿಕಿ ಹೇಳಿದ್ದಾರೆ. ಆದ್ದರಿಂದ ಅವರನ್ನು ಟೀಕಿಸಲಾಗುತ್ತಿದೆ.
‘भारत में मुस्लिम असुरक्षित हैं, बच्चों को वापस नहीं आने को बोल दिया है’… RJD नेता Abdul Bari Siddiqui के विवादित बोलhttps://t.co/kdcOueqQmC
— रिपब्लिक भारत (@Republic_Bharat) December 23, 2022
೧. ಅಬ್ದುಲ ಬಾರಿ ಸಿದ್ದಿಕಿ, ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಮಹನು ಸದ್ಯ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಿಂದ ತೇರ್ಗಡೆಯಾಗಿದ್ದಾಳೆ. ದೇಶದಲ್ಲಿನ ವಾತಾವರಣವನ್ನು ನೋಡಿ ನಾನು ನನ್ನ ಮಕ್ಕಳಿಗೆ ಅಲ್ಲಿಯೇ ನೌಕರಿ ಮಾಡಲು ಹೇಳಿದ್ದೇನೆ. ನಿಮಗೆ ಅಲ್ಲಿನ ಪೌರತ್ವ ಸಿಕ್ಕಿದರೆ ಅದನ್ನು ಸ್ವೀಕರಿಸಿರಿ. ಭಾರತದಲ್ಲಿನ ಸದ್ಯದ ಸ್ಥಿತಿಯನ್ನು ನೋಡಿದರೆ ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ಸಾಧ್ಯವಾಗಲಾರದು.
೨. ಬಿಹಾರದ ಭಾಜಪ ವಕ್ತಾರ ನಿಖಿಲ ಆನಂದ ಅವರು ಸಿದ್ದಿಕಿ ಅವರ ಹೇಳಿಕೆಯನ್ನು ಟೀಕಿಸುತ್ತಾ, ಸಿದ್ದಿಕಿಯಂತಹ ಜನರು ತಮ್ಮನ್ನು ತಾವು ಉದಾರವಾದಿಗಳು ಎಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ವಿಚಾರಧಾರೆಯು ಮದರಸಾಗಳಲ್ಲಿನ ಜನರಲ್ಲಿರುವಂತಹದ್ದಾಗಿದೆ. ತಮ್ಮ ದೇಶದ ವಿರುದ್ಧವೇ ವಿಷ ಕಾರುತ್ತಿದ್ದಾರೆ.
ಸಂಪಾದಕೀಯ ನಿಲುವು
|