ಬಿಹಾರದಲ್ಲಿ ಮುಸಲ್ಮಾನ ಯುವಕರಿಂದ ‘ಪಾಕಿಸ್ತಾನ ಜಿಂದಾಬಾದ’ನ ಘೋಷಣೆಗಳು

ಪೊಲೀಸರು ಐವರು ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆದಿದ್ದಾರೆ !

‘ಪಾಕಿಸ್ತಾನ ಜಿಂದಾಬಾದ’ ಘೋಷಣೆಗಳನ್ನು ನೀಡುತ್ತಿರುವ ಮುಸಲ್ಮಾನ ಯುವಕರು

ಭೋಜಪಲಪುರ (ಬಿಹಾರ) – ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ. ಇದರಲ್ಲಿ ಕೆಲವು ಮುಸಲ್ಮಾನ ಯುವಕರು ಬ್ಯಾಡಮಿಂಟನ್‌ ಪಂದ್ಯವನ್ನು ಗೆದ್ದ ನಂತರ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ಕೂಗುತ್ತಿರುವುದು ಕಾಣಿಸುತ್ತಿದೆ. ಈ ಸಮಯದಲ್ಲಿ ಪೊಲೀಸರು ಘೋಷಣೆ ಕೂಗಿರುವ ೫ ಮುಸಲ್ಮಾನ ಯುವಕರನ್ನು ತಕ್ಷಣ ಬಂಧಿಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ಯುವಕರ ವಿರುದ್ಧ ದೂರನ್ನು ನೋಂದಾಯಿಸಿದ್ದಾರೆ. (ಬಜರಂಗದಳಕ್ಕೆ ದೂರನ್ನು ಏಕೆ ನೋಂದಾಯಿಸಬೇಕಾಯಿತು ? ಪೊಲೀಸರು ಸ್ವತಃ ಏಕೆ ನೋಂದಾಯಿಸಲಿಲ್ಲ ? – ಸಂಪಾದಕರು)

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ ಪ್ರಮುಖರು ಘಟನಾಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನಾಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ನೇಮಿಸಲಾಗಿದ್ದು ಯುವಕರ ಕುಟುಂಬದವರ ಹಾಗೂ ಸ್ನೇಹಿತರ ವಿಚಾರಣೆ ನಡೆಸಲಾಗುತ್ತಿದೆ.