ಮಾಜಿ ಕೇಂದ್ರೀಯ ಮಂತ್ರಿಗಳಾದ ಎ. ರಾಜಾರವರ ೫೫ ಕೋಟಿ ರೂಪಾಯಿಗಳ ಬೇನಾಮಿ ಭೂಮಿ ಜಪ್ತು !

ಕೊಯಂಬತೂರ (ತಮಿಳುನಾಡು) – ಜ್ಯಾರಿ ನಿರ್ದೇಶನಾಲಯವು (‘ಇಡಿ’ಯು) ಮಾಜಿ ಕೇಂದ್ರೀಯ ಮಂತ್ರಿ ಹಾಗೂ ದ್ರಮುಕದ ನೇತಾರರಾದ ಎ. ರಾಜಾರವರ ೫೫ ಕೋಟಿ ರೂಪಾಯಿ ಮೌಲ್ಯದ ೪೫ ಎಕರೆ ಭೂಮಿಯನ್ನು ಜಪ್ತು ಮಾಡಿದೆ. ಇದು ಬೇನಾಮಿ ಆಸ್ತಿಯಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಎ. ರಾಜಾರವರಿಗೆ ಜನವರಿ ೨೦, ೨೦೨೩ರಂದು ನ್ಯಾಯಾಲಯದಲ್ಲಿ ಉಪಸ್ಥಿತರಿರಬೇಕಾಗಿ ಆದೇಶಿಸಿದೆ. ೨೦೧೫ರಲ್ಲಿ ಎ. ರಾಜಾರವರ ಮೇಲೆ ಬೇನಾಮಿ ಆಸ್ತಿಯನ್ನು ಹೊಂದಿರುವ ಬಗ್ಗೆ ಅಪರಾಧವನ್ನು ದಾಖಲಿಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಭ್ರಷ್ಟಾಚಾರಿಗಳ ಸಂಪೂರ್ಣ ಸಂಪತ್ತನ್ನು ಜಪ್ತು ಮಾಡಿ ಇವರಿಗೆ ಜೀವಾವಧಿ ಶಿಕ್ಷೆ ನೀಡಿದಾಗಲೇ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದು !