ನೀವು ದ್ವಿಚಕ್ರ ವಾಹನದಿಂದ ’ಬಜರಂಗ ಬಲಿ’ ಎಂಬ ಪದವನ್ನು ತೆಗೆಯದೇ ಇದ್ದರೇ, ಕೊಲ್ಲುವೆವು !

ಚಿತ್ತೋರ್‌ಗಢ (ರಾಜಸ್ಥಾನ)ದಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಬೆದರಿಕೆ !

ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಠಾಣೆಗಳ ಹೊರಗೆ ಹಿಂದೂ ಸಂಘಟನೆಗಳ ಪ್ರತಿಭಟನೆ !

ಚಿತ್ತೋರ್ ಗಢ್ (ರಾಜಸ್ಥಾನ) – ಇಲ್ಲಿ ಮುಕೇಶ ಭೊಯಿ ಈ ಹಿಂದೂ ಯುವಕನನ್ನು ಕೆಲವು ಮತಾಂಧರು ಆತನ ದ್ವಿಚಕ್ರ ವಾಹನದಲ್ಲಿ ಬರೆದಿದ್ದ ’ಬಜರಂಗ ಬಲಿ’ ಎಂಬ ಪದವನ್ನು ಅಳಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು. ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಅವರು ಹಿಂತಿರುಗಿದರು. ಪೊಲೀಸರು ಈಗ ಮತಾಂಧರನ್ನು ಹುಡುಕುತ್ತಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ, ಅಲ್ಲಿನ ಹಿಂದೂಗಳ ಮೇಲಿನ ಅತ್ಯಾಚಾರದ ಬಗ್ಗೆ ಇದರ ಹೊರತಾಗಿ ಬೇರೆ ಯಾವ ಸ್ಥಿತಿ ಇರಬಹುದು ? ಕಾಂಗ್ರೆಸ್ ಆಡಳಿತವೆಂದರೆ ಪಾಕಿಸ್ತಾನದ ಆಡಳಿತ !- ಸಂಪಾದಕರು