`ಯೇಸು ಕ್ರಿಸ್ತನ ಆಶೀರ್ವಾದ ಮತ್ತು ಕರುಣೆಯಿಂದ ನಾವು ಕೊರೋನಾವನ್ನು ಸೋಲಿಸಲು ಸಾಧ್ಯವಾಯಿತು !’ (ಅಂತೆ)

ತೆಲಂಗಾಣ ರಾಜ್ಯದಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ ಇವರ ಹೇಳಿಕೆ !

ತೆಲಂಗಾಣ ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ್

ಭಾಗ್ಯನಗರ (ತೆಲಂಗಾಣ) – ನಾವು ಕೊರೋನಾವನ್ನು ಸ್ವಂತ ಪ್ರಯತ್ನದಿಂದ ಅಲ್ಲ, ಯೇಸು ಕ್ರಿಸ್ತನ ಆಶೀರ್ವಾದ ಮತ್ತು ಕರುಣೆಯಿಂದ ಸೋಲಿಸಿದ್ದೇವೆ. ಪ್ರಭು ಯೇಸುವಿನಿಂದಲೇ ಭಾರತವು ಎಷ್ಟೊಂದು ಪ್ರಗತಿ ಮಾಡಿದೆ, ಎಂದು ತೆಲಂಗಾಣ ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ್ ಇವರು ಹೊಸವರ್ಷದ ಪ್ರಯುಕ್ತ ಕೋಠಾಗುಡೇಮನ ಒಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.

ಜಿ. ಶ್ರೀನಿವಾಸ ರಾವ ಇವರ ಹೇಳಿಕೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ ಅವರು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು. ರಾವ ಅವರು, ನನ್ನ ಪ್ರತಿಮೆ ಹಾಳು ಮಾಡುವುದಕ್ಕಾಗಿ ಕೆಲವು ಜನರು ನನ್ನ ಭಾಷಣವನ್ನು ತಪ್ಪಾದ ರೀತಿಯಲ್ಲಿ ಪ್ರಸಾರ ಮಾಡಿದ್ದಾರೆ. ನಾನು ಜನರಿಗೆ ನನ್ನ ಭಾಷಣದ ಪೂರ್ಣ ವಿಡಿಯೋ ನೋಡಲು ವಿನಂತಿಸುತ್ತೇನೆ. ನಾನು, ಸರಕಾರದ ಪ್ರಯತ್ನ, ಆರೋಗ್ಯ ಕಾರ್ಮಿಕರ, ಎಲ್ಲಾ ಧರ್ಮದರ ಪ್ರಾರ್ಥನೆ ಇದರಿಂದ ನಾವು ಕೊರೋನಾ ಸೋಲಿಸಲು ಸಾಧ್ಯವಾಯಿತು ಇಷ್ಟೇ ಹೇಳಿದ್ದೇನೆ ಎಂದು ಹೇಳಿದರು.

ಭಾರತದಲ್ಲಿನ ಪ್ರತಿಯೊಂದು ಧರ್ಮದ ವ್ಯಕ್ತಿಗಳಿಗೆ ಅವರ ಶ್ರದ್ಧಾಸ್ಥಾನಗಳಿಂದ ಅವರಿಗೆ ಕೊರೋನವನ್ನು ಸೋಲಿಸಲು ಸಾಧ್ಯವಾಯಿತು ಎಂದು ಅನಿಸಬಹುದು; ಆದರೆ ರಾವ್ ಇವರಂತೆ ಇತರ ಧರ್ಮದರು ಎಂದಾದರೂ `ಪ್ರಭು ಶ್ರೀ ರಾಮನಿಂದ ನಾವು ಕೊರೋನಾ ಸೋಲಿಸಲು ಸಾಧ್ಯವಾಯಿತು’, ಎಂದು ಹೇಳುವರೇ ?- ಸಂಪಾದಕರು