ಗುಜರಾತನ ವಲಸಾಡದಲ್ಲಿ ಅಕ್ರಮ ಚರ್ಚ ಕಾಮಗಾರಿಗೆ ಗ್ರಾಮಸ್ಥರಿಂದ ವಿರೋಧ !

ಗ್ರಾಮದಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಇಲ್ಲದೆ ಇದ್ದರೂ ಚರ್ಚನ ಕಾಮಗಾರಿ

ವಲಸಾಡ (ಗುಜರಾತ) – ಗುಜರಾತನ ವಲಸಾಡ ಜಿಲ್ಲೆಯ ಕಾಪರಾಡಾ ತಾಲೂಕಿನ ಶಾಹುದಾ ಗ್ರಾಮದಲ್ಲಿ ಅಕ್ರಮ ಚರ್ಚ್ ಕಟ್ಟಲಾಗುತ್ತಿದ್ದು ಅದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ. ಕಾಪರಾಡಾ ತಾಲೂಕಿನಲ್ಲಿ ಶಾಹುದಾ ಗ್ರಾಮದಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ವ್ಯಕ್ತಿ ವಾಸವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮ ಪಂಚಾಯಿತಿಯ ಸೂಚನೆಯನ್ನು ದುರ್ಲಕ್ಷಿಸಿ ಚರ್ಚ್ ಕಟ್ಟಲಾಗುತ್ತಿದೆ. ಈ ಅಕ್ರಮ ಕಟ್ಟಡದ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ದೂರು ದಾಖಲಿಸಿದ್ದಾರೆ. (ಹಿಂದೂಗಳಿಗೆ ದೂರು ನೀಡುವ ಅನಿವಾರ್ಯತೆ ಏಕೆ ಬರುತ್ತದೆ ? ಸರಕಾರ ತಾನೇ ಕ್ರಮ ಏಕೆ ಕೈಗೊಳ್ಳುವುದಿಲ್ಲ ? – ಸಂಪಾದಕರು)

೧. ಈ ಅಕ್ರಮ ಕಟ್ಟಡದ ಹಿಂದೆ ಅರಣ್ಯ ಇಲಾಖೆಯಲ್ಲಿ ಕಾರ್ಯನಿರತವಿರುವ ಚಂದರಭಾಯಿ ಚೌಧರಿ ಇವರ ಕೈವಾಡ ಇರುವುದೆಂದು ದೂರಿನಲ್ಲಿ ಹೇಳಲಾಗಿದೆ. ಆತ ಕ್ರೈಸ್ತ ಎಂದು ಹೇಳಿಕೊಳ್ಳುತ್ತಾನೆ.

೨. ಗ್ರಾಮ ಪಂಚಾಯತಿಯ ಅನುಮತಿ ಇಲ್ಲದೆ ಇದ್ದರೂ ಕೂಡ ಚಂದರ ಭಾಯಿ ಚರ್ಚನ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರ ಹೇಳಿಕೆ ಆಗಿದೆ. `ಸರಕಾರದಿಂದ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ, ಆಗ ಅಯೋಗ್ಯ ಘಟನೆ ನಡೆಯಬಹುದೆಂದು’, ಗ್ರಾಮಸ್ಥರ ಅಭಿಪ್ರಾಯವಾಗಿದೆ.

೩. ಗ್ರಾಮದಲ್ಲಿನ ಕಡಿಮೆ ಶಿಕ್ಷಣ ಪಡೆದ ಮತ್ತು ಬಡ ಜನರಿಗೆ ಆಮಿಷವೊಡ್ಡಿ ಮತಾಂತರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಜನರು ಹಿಂದುಗಳ ದೇವತೆಗಳ ಬಗ್ಗೆ ತಪ್ಪಾಗಿ ಮತ್ತು ಅಪಮಾನಕರ ವಿಷಯಗಳು ಹೇಳಿ, ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

೪. ಸ್ಥಳೀಯ ಸೂತ್ರಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ ಶಾಹುದಾ ಗ್ರಾಮದಲ್ಲಿ ಈ ವರ್ಷ ಜುಲೈ ತಿಂಗಳಲ್ಲಿ ಸಾಮೂಹಿಕ ಮತಾಂತರ ಮಾಡಲಾಗಿತ್ತು. ೨೦ ಕುಟುಂಬಗಳಲ್ಲಿನ ೯೦ ಜನರು ಕ್ರೈಸ್ತ ಧರ್ಮ ಸ್ವೀಕರಿಸಿದ್ದರು.

೫. ಈ ಅಕ್ರಮ ಮತಾಂತರದ ವಿರುದ್ಧ ಗ್ರಾಮ ಪಂಚಾಯತಿ ವತಿಯಿಂದ ಲಿಖಿತ ದೂರು ಕೂಡ ನೀಡಲಾಗಿತ್ತು; ಆದರೆ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

೬. ಈ ಹಿಂದೆ ತಾಪಿ ಜಿಲ್ಲೆಯ ಸೊನಗಡ ಗ್ರಾಮದಲ್ಲಿ ಒಂದು ಪ್ರಾಚೀನ ಹಿಂದೂ ದೇವಸ್ಥಾನ ನೆಲೆಸಮ ಮಾಡಿ ಆ ಸ್ಥಳದಲ್ಲಿ ಚರ್ಚ್ ಕಟ್ಟಲಾಗಿತ್ತು.

ಸಂಪಾದಕೀಯ ನಿಲುವು

ಗುಜರಾತನಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇದ್ದರೂ ಕೂಡ ಅಲ್ಲಿ ಮತಾಂಧ ಕ್ರೈಸ್ತರು ಅಕ್ರಮ ಚರ್ಚ ನಿರ್ಮಿಸುವ ದರ್ಪ ತೋರುತ್ತಿದ್ದಾರೆ, ಇದು ಖೇದಕರವಾಗಿದೆ ! ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !