ಮುಂಬಯಿಯ ಮೇಲೆ ಉಗ್ರವಾದಿ ದಾಳಿ ನಡೆದ 13 ವರ್ಷಗಳ ಬಳಿಕವೂ ದೇಶಗಳಲ್ಲಿರುವ ಬಂದರಿನ ಸುರಕ್ಷತೆಯಲ್ಲಿ ನಿಷ್ಕಾಳಜಿ ! – ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು(ಕಾಗ್)ನಿಂದ ಛೀಮಾರಿ

ನವದೆಹಲಿ- ಮುಂಬಯಿ ಮೇಲೆ ನವೆಂಬರ 26, 2008 ರಂದು ನಡೆದ ಉಗ್ರವಾದಿಗಳ ಆಕ್ರಮಣದ ಬಳಿಕ ಭಾರತೀಯ ಗಡಿಯ ಸುರಕ್ಷತೆಯ ಸಂದರ್ಭದಲ್ಲಿ ಕೇಂದ್ರೀಯ ಮಂತ್ರಿಮಂಡಳ ಸಮಿತಿಯು ಕೆಲವು ನಿರ್ದೇಶನಗಳನ್ನು ನೀಡಿತ್ತು. ಅದಕ್ಕನುಗುಣವಾಗಿ ಅದನ್ನು ಪೂರ್ಣಗೊಳಿಸಲು 13 ರಿಂದ 61 ಮಾಹೆಗಳ ವಿಳಂಬವಾಗಿದೆ. ಇಷ್ಟೇ ಅಲ್ಲ, ಜೂನ 2021 ರ ವರೆಗೆ ಕೆಲವು ಸೇತುವೆಗಳಿಗಾಗಿ ಆವಶ್ಯಕ ಸುರಕ್ಷೆ ಸೌಲಭ್ಯಗಳನ್ನು ಪೂರೈಸಲಾಗಿರಲಿಲ್ಲ. ಅವುಗಳನ್ನು ಪೂರೈಸಲು ಫೆಬ್ರುವರಿ 2009 ರಲ್ಲಿಯೂ ಅಂದರೆ 13 ವರ್ಷಗಳ ಹಿಂದೆಯೇ ಅನುಮತಿ ನೀಡಲಾಗಿತ್ತು ಎಂದೂ ಷರಾವನ್ನು ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು (ಕಗ್) ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಲಾಗಿದೆ.

`ಕಗ್’ ವರದಿಯಲ್ಲಿ ಹೇಳಿರುವುದೇನೆಂದರೆ,

೧. ಮುಂಬಯಿ ಮೇಲೆ ನಡೆದ ಆಕ್ರಮಣದ ಬಳಿಕ `ಸಾಗರ ಕಾವಲು ಪಡೆ’ಗಾಗಿ `ಫಾಸ್ಟ ಇಂಟರಸೆಪ್ಟರ ಕ್ರಾಫ್ಟ್ಸ’ (ವೇಗದ ಹಡಗು) ಪೂರೈಸಲು 13 ರಿಂದ 61 ಮಾಹೆಗಳ ವಿಳಂಬವಾಗಿದೆ. ಯಾವ ಸೇತುವೆಗಳ ಮೇಲೆ ಹಡಗು ನಿಲ್ಲಿಸಲಾಗಿತ್ತೋ, ಅಲ್ಲಿ ಅವುಗಳ ಉಪಯೋಗವನ್ನು ಅತ್ಯಂತ ಅಲ್ಪ ಪ್ರಮಾಣದಲ್ಲಿ ಮಾಡಲಾಯಿತು. ಅನೇಕ ಸ್ಥಳಗಳಲ್ಲಿ ನೌಕರರನ್ನು ನಿಯುಕ್ತಿಗೊಳಿಸಲಾಗಿಲ್ಲ.
೨. ನೌಕಾದಳದಿಂದ `ಬೂಸ್ಟ ಗ್ಯಾಸ ಟರ್ಬಾಯಿನ್’ ಅಗತ್ಯಕ್ಕಿಂತ ಅಧಿಕ ಇಡಲಾಗಿತ್ತು. ಈ ಟರ್ಬಾಯಿನ್ ಖರೀದಿಯ ಸಮಯದಲ್ಲಿ ಸಾಮಗ್ರಿ ದಾಸ್ತಾನು ಪರಿಶೀಲಿಸಲಾಗಿರಲಿಲ್ಲ. ಇದರಿಂದ ಅದನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಲಾಗಿತ್ತು. ಇದರಿಂದ 213 ಕೋಟಿ 93 ಲಕ್ಷ ರೂಪಾಯಿಗಳನ್ನು ಅಧಿಕ ವೆಚ್ಚ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಈ ರೀತಿ ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕ್ರಮ ಜರುಗಿಸುವ ಸಾಧ್ಯತೆಯಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟವಾಗಿದೆ.