೪ ವಿದೇಶಿ ನಾಗರಿಕರು ಪೊಲೀಸರ ವಶಕ್ಕೆ !
ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಕ್ರೈಸ್ತರಿಂದ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕಾಗಿ ಒಂದು ಕಡೆ ಬ್ರಾಝಿಲ್ ನಿಂದ ೪ ಜನರನ್ನು ಕರೆಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ೪ ವಿದೇಶಿ ನಾಗರೀಕರ ಜೊತೆಗೆ ೧೦ ಜನರನ್ನು ವಶಕ್ಕೆ ಪಡೆದಿದ್ದಾರೆ.
अस्थाना का बनाया 3 साल पुराना चर्च, ब्राजील से आए 4 ‘ईसाई दूत’: कहीं धर्मांतरण का यह खेल आपके गाँव में भी तो नहीं चल रहा, UP के सीतापुर में 1 ही दिन में मिले 2 केस#UttarPradesh https://t.co/Ad9OnTm6LA
— ऑपइंडिया (@OpIndia_in) December 20, 2022
೧. ಸಕರನ ಪ್ರದೇಶದಲ್ಲಿ ಬಜರಂಗದಳದ ಸುರಕ್ಷಾ ಪ್ರಮುಖ ಆಶುತೋಷ ವರ್ಮಾ ಇವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಸೈದಾಪುರ ಗ್ರಾಮದಲ್ಲಿ ಶ್ರವಣಕುಮಾರ ಗೌತಮ್ ಇವರ ಮನೆಯಲ್ಲಿ ಹಿಂದೂಗಳನ್ನು ಮತಾಂತರಗೊಳಿಸುತ್ತಿರುವ ಮಾಹಿತಿ ದೊರೆತಿತ್ತು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದರು. ನಮ್ಮ ಕಾರ್ಯಕರ್ತರು ಅಲ್ಲಿ ತಲುಪಿದ ನಂತರ ಜನರನ್ನು ಮತಾಂತರಗೊಳಿಸಲಾಗುತ್ತಿರುವುದು ಕಂಡು ಬಂದಿದೆ. ಪೊಲೀಸರಿಗೆ ಇದರ ಮಾಹಿತಿ ನೀಡಿದ ನಂತರ ಪೊಲೀಸರು ಕ್ರಮ ಕೈಗೊಳ್ಳುತ್ತಾ ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
೨. ಇನ್ನೊಂದು ಪ್ರಕರಣ ಶಹಬಾಜಪುರ್ ಇಲ್ಲಿಯದಾಗಿದೆ. ಇಲ್ಲಿ ಜೌನಪುರದಲ್ಲಿ ವಾಸವಿರುವ ಡೇವಿಡ್ ಇವನು ೩ ವರ್ಷದ ಹಿಂದೆ ಭೂಮಿ ಖರೀದಿಸಿ ಅಲ್ಲಿ ಚರ್ಚ್ ಕಟ್ಟಿಸಿದನು. ಅಲ್ಲಿ ಹೊರಗಿನ ಜನ ಬರುತ್ತಿದ್ದರು. ಅಲ್ಲಿ ಕೆಲವು ಜನರನ್ನು ಕರೆಸಿ, ಅವರನ್ನು ಮತಾಂತರ ಗೊಳಿಸಲಾಗುತ್ತಿದೆ ಎಂದು ನೈಮಿಷ ಇವರು ದೂರು ನೀಡಿದ್ದರು. ಈ ಚರ್ಚನಲ್ಲಿ ಬ್ರಾಝಿಲ್ ಒಬ್ಬ ಮಹಿಳೆ ಮತ್ತು ೩ ಪುರುಷರು ಬಂದಿದ್ದರು. ಇದರಲ್ಲಿ ಒಬ್ಬ ಪಾದ್ರಿ ಆಗಿದ್ದನು. ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ ! |