ಜಮ್ಮು ಕಾಶ್ಮೀರದಲ್ಲಿ ಲಷ್ಕರೆ ಏ ತೋಯ್ಬಾದ ೩ ಉಗ್ರರು ಹತ

ಶ್ರೀನಗರ – ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ. ಅವರಲ್ಲಿ ಇಬ್ಬರ ಗುರುತು ಸಿಕ್ಕಿದೆ ಹಾಗೂ ಮೂರನೆಯವನನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಲತಿಫ ಲೋನ್ ಈತ ಶೋಪೀಯಾದ ನಿವಾಸಿ ಆಗಿದ್ದು ಪುರಾಣ ಕೃಷ್ಣ ಭಟ್ ಈ ಕಾಶ್ಮೀರಿ ಹಿಂದೂವಿನ ಹತ್ಯೆಯಲ್ಲಿ ಸಹಭಾಗಿಯಾಗಿದ್ದನು. ಘಟನಾ ಸ್ಥಳದಿಂದ ಒಂದು ಏಕೆ ೪೭ ರೈಫಲ್ ಮತ್ತು ಎರಡು ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ.