ಭಾರತವನ್ನು ಸಂವಿಧಾನದ ಮೂಲಕ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕ ! – ಸದ್ಗುರು ಡಾ. ಚಾರುದತ್ತ ಪಿಂಗಳೆ

ಜೈಪುರದಲ `ಜ್ಞಾನಮ್’ ಸಮಾರಂಭದಲ್ಲಿ `ಜಯತು ಜಯತು ಹಿಂದೂ ರಾಷ್ಟ್ರಮ್’ ಚರ್ಚಾ ಕೂಟ !

ಜೈಪುರ್ (ರಾಜಸ್ಥಾನ) – ಭಾರತ ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ; ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅದಕ್ಕೆ `ಹಿಂದೂ ರಾಷ್ಟ್ರ’ವೆಂದು ಸ್ಥಾನಮಾನ ಎಲ್ಲಿದೆ ? ಯಾರಾದರೂ ಡಾಕ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣವಾದ ನಂತರ ಅವನು ಸ್ವಾಭಾವಿಕವಾಗಿ ವೈದ್ಯರಾಗಿರುತ್ತಾರೆ; ಆದರೆ ಅವನಿಗೆ ಅನುಮತಿ ಪತ್ರ ಪಡೆಯದೆ `ಡಾಕ್ಟರ್’ ಎಂದು ಕೆಲಸ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಸಂವಿಧಾನದ ಮೂಲಕ ಭಾರತಕ್ಕೆ ಹಿಂದೂ ರಾಷ್ಟ್ರವೆಂದು ಘೋಷಿಸದೆ ಭಾರತಕ್ಕೆ ಹಿಂದೂ ರಾಷ್ಟ್ರ ಎನ್ನಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಜನ ಜಾಗೃತಿ, ಜನನಿಧಿಗಳ ಪ್ರಬೋಧನೆ ಮತ್ತು ನ್ಯಾಯಾಲಯದಲ್ಲಿ ಕಾನೂನು ರೀತಿಯಲ್ಲಿ ಹೋರಾಟ, ಈ ರೀತಿ ಎಲ್ಲಾ ಮಾರ್ಗದಿಂದ ಹೋರಾಟ ಮಾಡಿ ಭಾರತಕ್ಕೆ ಸಂವಿಧಾನದ ಮೂಲಕ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾಕ್ಟರ್ ಚಾರದತ್ತ ಪಿಂಗಳೇ ಇವರು ಪ್ರತಿಪಾದಿಸಿದರು. ಅವರು ಇಲ್ಲಿ ಆಯೋಜಿಸಿದ್ದ `ಜ್ಞಾನಮ್’ ಸಮಾರಂಭದಲ್ಲಿ `ಜಯತು ಜಯತು ಹಿಂದೂ ರಾಷ್ಟ್ರಮ್’ ಈ ಚರ್ಚಾಕೂಟದಲ್ಲಿ ಮುಖ್ಯವಾಗ್ತಾರರಾಗಿ ಮಾತನಾಡುತ್ತಿದ್ದರು. ಚರ್ಚಾಕೂಟದ ಸಂಚಾಲನೆಯನ್ನು ಪತ್ರಕರ್ತ ಮತ್ತು ಹಿಂದೂ ಜನ ಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಮಾಡಿದರು.

ಹಿಂದೂ ರಾಷ್ಟ್ರಕಾಗಿ ಪ್ರತಿಯೊಬ್ಬರೂ ರಾಮವಾದಿ ಆಗಬೇಕು ! – ಮಾಜಿ ಶಾಸಕ ಜ್ಞಾನದೇವ ಆಹುಜಾ

ಈ ಸಮಯದಲ್ಲಿ ಪ್ರಖರ ಹಿಂದುತ್ವನಿಷ್ಠ ಮತ್ತು ರಾಜಸ್ಥಾನದ ಮಾಜಿ ಶಾಸಕರಾದ ಶ್ರೀ. ಜ್ಞಾನದೇವ ಆಹುಜಾ ಇವರು, ಹಿಂದೂ ರಾಷ್ಟ್ರ ಎಂದರೆ ರಾಮರಾಜ್ಯ. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರೀಕನು ತನ್ನನ್ನು `ರಾಮವಾದಿ’ ಮಾಡಬೇಕಾಗುವುದು. ರಾಮವಾದ ಎಂದರೆ ಭಾರತೀಯ ಸಂಸ್ಕೃತಿಯ ಪರಂಪರೆಯಾಗಿದೆ ಎಂದು ಅವರು ಹೇಳಿದರು.

ಭಾರತೀಯ ಸಂವಿಧಾನದಿಂದ ಹಿಂದೂಗಳಿಗೆ ಧರ್ಮ ಶಿಕ್ಷಣ ಸಿಗುವುದರ ಮೇಲೆ ನಿಷೇಧ ! – ಚೇತನ ರಾಜಹಂಸ

ಜಾತ್ಯತೀತ ವ್ಯವಸ್ಥೆಯಲ್ಲಿನ ಕೊರತೆಗಳು ಹೇಳುವಾಗ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು, ಭಾರತೀಯ ಸಂವಿಧಾನದ ಕಲಂ ೨೮ ರ ಮೂಲಕ ಹಿಂದೂಗಳಿಗೆ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಧರ್ಮ ಶಿಕ್ಷಣ ನೀಡಲು ನಿಷೇಧಿಸಲಾಗಿದೆ ಹಾಗೂ ಕಲಂ ೩೦ ರಲ್ಲಿ ಅಲ್ಪಸಂಖ್ಯಾತರಿಗೆ ಸಂವಿಧಾನಿಕ ಸಂರಕ್ಷಣೆ ನೀಡಿ ಧರ್ಮ ಶಿಕ್ಷಣ ನೀಡುವುದಕ್ಕಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವುದಕ್ಕಾಗಿ ಅನುಮತಿ ನೀಡಲಾಗಿದೆ. ಆದ್ದರಿಂದ ಶಿಕ್ಷಣ ಪೂರ್ಣ ಆಗಿರುವ ಹಿಂದೂ ನಾಸ್ತಿಕನಾಗುತ್ತಾನೆ ಹಾಗೂ ಅಲ್ಪಸಂಖ್ಯಾತ ವ್ಯಕ್ತಿ ಶ್ರದ್ಧೆಯುಳ್ಳ ಮುಸಲ್ಮಾನ ಅಥವಾ ಕ್ರೈಸ್ತನಾಗುತ್ತಾನೆ. ಅದಕ್ಕಾಗಿ ಭಾರತೀಯ ಸಂವಿಧಾನದಲ್ಲಿ ಸುಧಾರಣೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

`ಜ್ಞಾನಮ್’ ಸಮಾರಂಭದಲ್ಲಿ ಹಿಂದಿ ಭಾಷೆಯಲ್ಲಿನ `ಸನಾತನ ಪಂಚಾಂಗ’ ಬಿಡುಗಡೆ !

ಸನಾತನ ಪಂಚಾಂಗ ಮತ್ತು ಅಪ್ ಬಿಡುಗಡೆ ಮಾಡುತ್ತಿರುವಾಗ ಎಡಗಡೆಯಿಂದ ಶ್ರೀ. ಚೇತನ ರಾಜಹಂಸ, ಪ್ರವಚನಕಾರ ಸಾದ್ವಿ ಪ್ರಜ್ಞಾ ಭಾರತಿ, ಜ್ಞಾನದೇವ ಆಹುಜಾ, ಮಹಂತ ದೀಪಕ ವಲ್ಲಭ ಗೋಸ್ವಾಮಿ, ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಶ್ರೀ. ಆನಂದ ಜಾಖೋಟಿಯಾ

ಜಯಪುರ (ರಾಜಸ್ಥಾನ) – ಧರ್ಮಜಾಗೃತಿಯ ಉದ್ದೇಶದಿಂದ ಬಿಡುಗಡೆ ಮಾಡಲಾದ `ಸನಾತನ ಪಂಚಾಂಗ’ದ ಹಿಂದಿ ಭಾಷೆಯಲ್ಲಿನ ಆವೃತ್ತಿ ಹಾಗೂ ಹಿಂದಿ ಆವೃತ್ತಿಯ `ಆಂಡ್ರಾಯ್ಡ್ ಆಪ್’ ಮತ್ತು `ಆಪಲ್ ಆಪ್’ನ್ನು ಜಯಪುರಿನಲ್ಲಿ ಆಯೋಜಿಸಲಾಗಿದ್ದ ಸುಪ್ರಸಿದ್ಧ `ಜ್ಞಾನಮ್’ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಪ್ರಖರ ಹಿಂದುತ್ವನಿಷ್ಠ ಹಾಗೂ ಮಾಜಿ ಶಾಸಕರಾದ ಶ್ರೀ. ಜ್ಞಾನದೇವ ಆಹೂಜಾ ಇವರ ಹಸ್ತದಿಂದ ಹಿಂದಿ ಭಾಷೆಯಲ್ಲಿನ ಸನಾತನ ಪಂಚಾಂಗ, `ಜ್ಞಾನಮ ಫೌಂಡೇಶನ್’ನ ಅಧ್ಯಕ್ಷ ಮಹಂತ ದೀಪಕ ವಲ್ಲಭ ಗೋಸ್ವಾಮಿ ಇವರ ಹಸ್ತದಿಂದ ಹಿಂದಿ ಸನಾತನ ಪಂಚಾಂಗದ `ಆಂಡ್ರಾಯ್ಡ್ ಆಪ್’ ಹಾಗೂ ದೆಹಲಿಯಲ್ಲಿನ ಸುಪ್ರಸಿದ್ಧ ಪ್ರವಚನಕಾರ ಸಾಧ್ವಿ ಪ್ರಜ್ಞಾ ಭಾರತಿ ಇವರ ಹಸ್ತದಿಂದ ಹಿಂದಿ ಸನಾತನ ಪಂಚಾಂಗದ `ಆಪಲ್ ಆಪ್’ ಬಿಡುಗಡೆ ಮಾಡಲಾಯಿತು. ಈ ಸಮಯದಲ್ಲಿ ವೇದಿಕೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರದ ಸದ್ಗುರು ಡಾಕ್ಟರ್ ಚಾರುದತ್ತ ಪಿಂಗಳೆ ಮತ್ತು ಸಮಿತಿಯ ರಾಜಸ್ಥಾನದ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಸಹ ಉಪಸ್ಥಿತರಿದ್ದರು. ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಸನಾತನ ಸಂಸ್ಥೆಯ ರಾಷ್ಟ್ರೀಯ ವತ್ತಾರರಾದ ಶ್ರೀ. ಚೇತನ್ ರಾಜಹಂಸ ಇವರು ಮಾಡಿದರು. ಆ ಸಮಯದಲ್ಲಿ ಅವರು ಉಪಸ್ಥಿತರಿಗೆ `ಸನಾತನ ಪಂಚಾಂಗ’ದ ಉದ್ದೇಶ ಹೇಳಿದರು. ಉಪಸ್ಥಿತರಲ್ಲಿ ಅನೇಕರು ಕಾರ್ಯಕ್ರಮದ ಸ್ಥಳದಲ್ಲಿಯೇ ತಮ್ಮ ತಮ್ಮ ಸಂಚಾರ ವಾಣಿಯಲ್ಲಿ ಹಿಂದಿ ಪಂಚಾಂಗ `ಡೌನ್ಲೋಡ್’ ಮಾಡಿದರು.