ಮುಸಲ್ಮಾನ ಹುಡುಗಿಯನ್ನು ಮದುವೆಯಾದ ಹಿಂದೂ ಹುಡುಗನ ತಾಯಿಯನ್ನು ಹುಡುಗಿಯ ಸಹೋದರರು ಕೊಂದರು

ದೆಹಲಿ : ಮುಸಲ್ಮಾನ ಯುವತಿಯನ್ನು ಮದುವೆಯಾದ ಹಿಂದೂ ಯುವಕನ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಮಹಿಳೆಯ ಹೆಸರು ಗೀತಾ ಶರ್ಮಾ. ಆಕೆಗೆ 55 ವರ್ಷ ವಯಸ್ಸಾಗಿತ್ತು. ಈ ಪ್ರಕರಣದಲ್ಲಿ ಯುವತಿಯ ಸಹೋದರ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ, ನಾವೇದ, ಸಲ್ಮಾನ ಮತ್ತು ಅಮನ.

ಒಂದು ವರ್ಷದ ಹಿಂದೆ ಗೀತಾ ಶರ್ಮಾ ಅವರ ಮಗ ದೀಪಕನು ಮುಸಲ್ಮಾನ ಹುಡುಗಿ ಸಿತಾರಾ ಅವಳನ್ನು ಮದುವೆ ಮಾಡಿಕೊಂಡಿದ್ದನು. ಇದು ಇಬ್ಬರ ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವು ದಿನಗಳ ನಂತರ ಇಬ್ಬರೂ ಈ ಮದುವೆಗೆ ಒಪ್ಪಿದರು. ಆ ನಂತರ ಸಿತಾರ ತವರಿಗೆ ಹೋಗತೊಡಗಿದಳು. ಸಿತಾರಾ ತವರಿಂದ ಕೆಲವು ಆಭರಣಗಳನ್ನು/ಒಡವೆಗಳನ್ನು ತೆಗೆದುಕೊಂಡು ಹೋಗಿದ್ದ ಕಾರಣ ಅವಳ ಸಹೋದರರು ಕೋಪಗೊಂಡಿದ್ದರು. ಅವರು ಅಲ್ಲಿಂದ ದೀಪಕ ಮನೆಗೆ ಹೋದರು. ಆ ವೇಳೆ ದೀಪಕ ಮನೆಯಲ್ಲಿ ಇಲ್ಲದ ಕಾರಣ ಅವನ ತಾಯಿಯ ಮೇಲೆ ಗುಂಡು ಹಾರಿಸಿದರು.

ಸಂಪಾದಕೀಯ ನಿಲುವು

ಹಿಂದೂ ಯುವತಿಯರನ್ನು ಲವ ಜಿಹಾದ ಮೂಲಕ ವಂಚಿಸಿ, ಅವರನ್ನು ಮದುವೆಯಾದ ನಂತರ ಅವರಿಗೆ ಕಿರುಕುಳ ನೀಡುವ ಮುಸಲ್ಮಾನ ಯುವಕರೊಂದಿಗೆ ಹಿಂದೂಗಳು ಎಂದಿಗೂ ಈ ರೀತಿ ವರ್ತಿಸುವುದಿಲ್ಲ; ಆದರೆ ಹಿಂದೂ ಯುವಕನು ಮುಸಮಾನ ಯುವತಿಯನ್ನು ಮದುವೆಯಾದಾಗ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ಗಮನಿಸಿ !