ದೆಹಲಿಯ ಮದರಸಾದ ಮೌಲ್ವಿಯಿಂದ 12 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)

ನವ ದೆಹಲಿ – ಮೊಹಮ್ಮದ ಜಾವೇದ ಎಂಬ ಮೌಲ್ವಿಯು ಮದರಸಾದಲ್ಲಿ ಓದುತ್ತಿದ್ದ 12 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದನು. ಮೌಲ್ವಿಯು ಸಂಬಂಧಪಟ್ಟ ವಿದ್ಯಾರ್ಥಿಯನ್ನು ಪ್ರಜ್ಞೆ ತಪ್ಪಿಸಿ ಈ ಹೇಯ ಕೃತ್ಯವನ್ನು ಎಸಗುತ್ತಿದ್ದನು. ಈ ಮೌಲ್ವಿಯ ವಿರುದ್ಧ `ಪೋಕ್ಸೊ’ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಮೌಲ್ವಿಯು ತಲೆಮರೆಸಿಕೊಂಡಿದ್ದಾನೆ.

೧. ಬಾಲಕನು ಮದರಸಾದಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಳಿಕ ಬಾಲಕನ ಮನೆಯವರಿಗೆ ಈ ಘಟನೆಯು ತಿಳಿಯಿತು. ಮೌಲಾನಾನು ಬಾಲಕನನ್ನು ಬೆದರಿಸಿ ಹಲವು ಬಾರಿ ಆತನ ಮೇಲೆ ದೌರ್ಜನ್ಯ ಎಸಗಿದ್ದನು.

೨.  ರಾಜಧಾನಿ ದೆಹಲಿಯಿಂದ ಇಂತಹ ವಾರ್ತೆ ಬರುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ದೆಹಲಿಯ ಕರಾವಲನಗರದಲ್ಲಿರುವ ಮದೀನಾ ಮಸೀದಿಯ ಮೌಲಾನಾ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನು.

೩. ಇಂತಹದ್ದೇ ಒಂದು ಪ್ರಕರಣವು ಡಿಸೆಂಬರ್ 12 ರಂದು ಜಾರಖಂಡದಲ್ಲಿ ಬೆಳಕಿಗೆ ಬಂದಿತ್ತು. ಅಲ್ಲಿನ ಮದರಸಾದ ಇಮಾಮನು (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವ ಪ್ರಮುಖ) 8 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿದ್ದನು.

ಸಂಪಾದಕೀಯ ನಿಲುವು

ಹಿಂದೂಗಳ ಸಂತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾನಹಾನಿ ಮಾಡುವ ಪ್ರಸಾರ ಮಾಧ್ಯಮಗಳು ಇಂತಹ ಪ್ರಕರಣಗಳಲ್ಲಿ ಮಾತ್ರ ಮೌನ ತಾಳುತ್ತವೆ !