ಉದಯಪುರ (ರಾಜಸ್ಥಾನ) ಇಲ್ಲಿಯ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಗೋಮಾಂಸ ಇರುವ ಪಾಕಿಸ್ತಾನಿ ಟಾಫಿ ವಶ !

ಉದಯಪೂರ (ರಾಜಸ್ಥಾನ) – ಇಲ್ಲಿಯ ಒಂದು ಅಂಗಡಿಯಲ್ಲಿ ಗೋಮಾಂಸ ಬಳಸಿ ತಯಾರಿಸಲಾದ ಟಾಫಿ ಮಾರಾಟ ಮಾಡಲಾಗುತ್ತಿರುವ ಮಾಹಿತಿ ದೊರೆತ ನಂತರ ಆರೋಗ್ಯ ಇಲಾಖೆ ಈ ಅಂಗಡಿಯಿಂದ ಎಲ್ಲಾ ಟಾಫಿ ವಶಪಡಿಸಿಕೊಂಡಿದ್ದಾರೆ. ಈ ಟಾಫಿ ಪಾಕಿಸ್ತಾನದಿಂದ ತರಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಟಾಪಿಯ ಮೇಲೆ `ಮೇಡ್ ಇನ್ ಪಾಕಿಸ್ತಾನ’ ಎಂದೂ ಬರೆಯಲಾಗಿದೆ. ಅದರ ಮೇಲೆ ಉರ್ದು ಭಾಷೆಯಲ್ಲಿ ಬಲೂಚಿಸ್ತಾನದ ವಿಳಾಸ ನೀಡಲಾಗಿದೆ. ಈ ಟಾಫಿ ಮಾಂಸಾಹಾರಿ ಇರುವುದೆಂದು ಹೇಳುವುದಕ್ಕೆ ಕೆಂಪು ಚುಕ್ಕೆ ಇದೆ. ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ಅಂಗಡಿಯವನು, ಈ ಟಾಫಿ ಮುಂಬಯಿಯಿಂದ ತರೆಸುತ್ತಿದ್ದನು. ಇದೇ ಅಂಗಡಿಯಿಂದ ಬೇರೆ ಅಂಗಡಿಗಳಿಗೂ ವಿತರಣೆ ಮಾಡಲಾಗುತ್ತಿದೆ. `ಚಿಲಿ-ಮಿಲಿ’ ಹೆಸರಿನಿಂದ ಇದು ಮಾರಲಾಗುತ್ತದೆ. ಒಂದು ಪ್ಯಾಕೆಟ್ ನ ಬೆಲೆ ೨೦ ರೂಪಾಯಿ ಎಂದು ಹೇಳಿದ.