ಕರ್ನಾಟಕದಲ್ಲಿ ದಲಿತರನ್ನು ಮೋಸಗೊಳಿಸಿ ಮತಾಂತರಿಸುತ್ತಿದ್ದ ಪಾದ್ರಿ ಹಾಗೂ ಆತನ ಪತ್ನಿಯ ಬಂಧನ !

  • ಹಿಂದೂ ದೇವತೆಯ ಮೂರ್ತಿಗಳನ್ನು ಎಸೆಯಲಾಯಿತು !

  • ಪಾದ್ರಿಯ ಮಗನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಬೆಂಗಳೂರು – ಬಳ್ಳಾರಿ ಪ್ರದೇಶದಲ್ಲಿ ದಲಿತರನ್ನು ಮೋಸದಿಂದ ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಆರೋಪಿ ಪಾದ್ರಿ ಸ್ಯಾಮ್ಯುವಲ್ ಮತ್ತು ಅವನ ಪತ್ನಿಯನ್ನು ಕೊಪ್ಪಳದಿಂದ ಬಂಧಿಸಲಾಗಿದೆ . ಇದಲ್ಲದೆ ಈ ಪಾದ್ರಿಯ ೧೭ ವರ್ಷದ ಮಗನ ಮೇಲೆ ಹಿಂದೂಳಿದ ಸಮಾಜದಲ್ಲಿನ ಅಪ್ರಾಪ್ತ ಹುಡುಗಿಗೆ ವಿವಾಹದ ಆಮಿಷ ಒಡ್ಡಿ ಬಲಾತ್ಕರಿಸಿದ ಆರೋಪವಿದೆ. ಈ ಪ್ರಕರಣದಲ್ಲಿ ಪೊಲೀಸರು ಅವನನ್ನು ಕೂಡ ಬಂಧಿಸಿ ಬಳ್ಳಾರಿಯ ರಿಮಾಂಡ್ ಹೋಮಿಗೆ ಕಳುಹಿಸಿದ್ದಾರೆ. ಒಂದು ಸಮಾಚಾರದ ಪ್ರಕಾರ, ಪಾದ್ರಿ ಸ್ಯಾಮ್ಯುವಲ್ ಇವನು ಜನರಿಗೆ ಮೋಸ ಮಾಡಿ ಅವರಿಗೆ ಪ್ರಲೋಭನೆ ತೋರಿಸಿ ಅವರನ್ನು ಮತಾಂತರಿಸುತ್ತ್ತಿದ್ದನು. ಪರಿಸರದಲ್ಲಿನ ದಲಿತ ಸಮಾಜದಲ್ಲಿನ ಒಬ್ಬ ಸದಸ್ಯನು ಈ ಪಾದ್ರಿಯ ವಿರುದ್ಧ ದೂರು ದಾಖಲಿಸಿದನು. ಈ ಪಾದ್ರಿಯು ಪರಿಸರದಲ್ಲಿನ ದಲಿತರನ್ನು ಪ್ರಾರ್ಥನಾಗೃಹಕ್ಕೆ ಬಂದು ಬಾಪ್ತಿಸ್ಮ (ಮತಾಂತರ ಕಾರ್ಯಕ್ರಮದ ಒಂದು ಪ್ರಕಾರ ) ಸ್ವೀಕರಿಸಲು ಪ್ರವೃತ್ತಗೊಳಿಸಿರುವ ಆರೋಪವನ್ನು ಈ ದೂರಿನಲ್ಲಿ ಮಾಡಲಾಗಿದೆ. ಪ್ರಸ್ತುತ ಪಾದ್ರಿಯ ಪತ್ನಿಯ ಮೇಲೆ ದಲಿತ ಮಕ್ಕಳನ್ನು ಚರ್ಚ್‌ಗೆ ಕರೆದುಕೊಂಡು ಹೋಗಿ ಮತ್ತು ಅವರನ್ನು ಚರ್ಚ್‌ನ ಕೆಲಸದಲ್ಲಿ ತೊಡಗಿಸಿದ ಆರೋಪವಿದೆ .

ಹಿಂದೂ ದೇವತೆಗಳ ಪೂಜೆ ಮಾಡಿದರೆ, ನಿಮಗೆ ದುಷ್ಟ ಶಕ್ತಿಗಳು ತೊಂದರೆ ನೀಡುತ್ತವೆ !(ಅಂತೆ) – ಪಾದ್ರಿಯ ಹಿಂದೂಗಳನ್ನು ಹೆದರಿಸುವ ರೀತಿ

ದಲಿತರ ಹೇಳಿಕೆಯ ಪ್ರಕಾರ, ಅವರು ಹಿಂದೂ ದೇವತೆಗಳ ಪೂಜೆ ಮಾಡದೇ ಇರಲು ಎಚ್ಚರಿಕೆ ನೀಡಿದ್ದನು. ಮತಾಂತರದ ನಂತರ ದಲಿತರ ಮನೆಯಿಂದ ಹಿಂದೂ ದೇವತೆಗಳ ಪ್ರತಿಮೆಗಳು ಮೂರ್ತಿಗಳು ನಾಲೆಗೆ ಎಸೆದಿರುವ ಆರೋಪವಿದೆ. ದಲಿತರಿಗೆ, ನೀವು ಹಿಂದೂ ದೇವತೆಗಳ ಪೂಜೆ ಮಾಡಿದರೆ ಆಗ ಅವರಿಗೆ ದುಷ್ಟ ಶಕ್ತಿಗಳು ತೊಂದರೆ ನೀಡುವರು ಎಂದು ಹೇಳಲಾಗಿತ್ತು. (ಹಿಂದೂ ದೇವರನ್ನು ಅಪಮಾನಿಸುವವರನ್ನು ಸರಕಾರವು ತತ್ಕಾಲ ಕಾರ್ಯಾಗೃಹದಲ್ಲಿ ಅಟ್ಟಬೇಕು ! ಈಗ ಮೂಢನಂಬಿಕೆ ನಿರ್ಮೂಲನೆಯವರು ಮೌನವಾಗಿರುವುದೇಕೆ ? – ಸಂಪಾದಕರು)

 

ಸಂಪಾದಕೀಯ ನಿಲುವು

  • ಕ್ರೈಸ್ತರ ಈ ಮತಾಂಧತೆಯ ಬಗ್ಗೆ ಪ್ರಗತಿಪರರು, ಕಮ್ಯುನಿಸ್ಟರು, ಬುದ್ಧಿವಾದಿಗಳು, ಮತಾಂಧರು ಮುಂತಾದವರು ಒಂದು ಶಬ್ದ ಕೂಡ ಮಾತನಾಡುವುದಿಲ್ಲ ಇದನ್ನು ಅರಿತುಕೊಳ್ಳಿ !
  • ಹಿಂದೂಗಳನ್ನು ಮತಾಂತರಿಸುವವರನ್ನು ಆಜೀವನ ಕಾರಾಗೃಹದ ಶಿಕ್ಷೆ ನೀಡಲು ಸರಕಾರ ತತ್ಕಾಲ ಕಾನೂನು ರೂಪಿಸಬೇಕು.