ಉಜ್ಜಯಿನಿಯಲ್ಲಿ ಮಹಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಗಿದೆ !

  • ಗೃಹ ಸಚಿವರಿಂದ ವಿಚಾರಣೆಯ ಆದೇಶ

  • ಹಿಂದೂಗಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು !

  • ಹಿಂದೂ ಸಂಘಟನೆಗಳ ವಿರೋಧದ ಬಳಿಕ ಸ್ಪರ್ಧೆ ಸ್ಥಗಿತಗೊಳಿಸಲಾಯಿತು !

ಉಜ್ಜಯಿನಿ (ಮಧ್ಯಪ್ರದೇಶ) – ಇಲ್ಲಿಯ ಪೈಗಾಮ ಏ ಇನ್ಸಾನಿಯತ್ ಸೊಸೈಟಿಯಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿರುವ ಸ್ಪರ್ಧಿಗಳಿಗೆ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಆದರೆ ಇದರಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳು ಮುಸಲ್ಮಾನೇತರ ಎಂದರೆ ಹಿಂದೂಗಳು ಇದ್ದರು. ಸ್ಪರ್ಧಾಳುಗಳು ಹೆಸರು ನೊಂದಾಯಿಸಿದ ಬಳಿಕ ಅವರಿಗೆ ಪೈಗಂಬರರ ಒಂದು ಪುಸ್ತಕ ನೀಡಲಾಗುತ್ತಿತ್ತು. ಇದರಿಂದ ಹಿಂದೂ ಸಂಘಟನೆಗಳು ಈ ಸ್ಪರ್ಧೆಯನ್ನು ವಿರೋಧಿಸಿದರು. . ಈ ರೀತಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವುದು , ಹಿಂದೂಗಳನ್ನು ಮತಾಂತರಿಸುವ ಪ್ರಯತ್ನವಾಗಿದೆ, ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ. ಅವರು ರಾಜ್ಯದ ಗೃಹ ಸಚಿವರಾದ ನರೋತ್ತಮ ಮಿಶ್ರ ಇವರಿಗೆ ದೂರು ನೀಡಿದ್ದಾರೆ. ಗೃಹ ಸಚಿವರು ಇದರೆಡೆಗೆ ಗಮನ ಹರಿಸಿ ಪ್ರಕರಣದ ವಿಚಾರಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಸ್ಪರ್ಧೆಗೆ ವಿರೋಧ ವ್ಯಕ್ತವಾದ ಬಳಿಕ ಆಯೋಜಕರು ಸ್ಪರ್ಧೆಯನ್ನು ರದ್ದುಗೊಳಿಸಿದ್ದಾರೆ.

೧. ಭಜರಂಗದಳದ ಸ್ಥಳೀಯ ನಾಯಕ ಪಿಂಟು ಕೌಶಲ್ ಇವರು, ಈ ಸ್ಪರ್ಧೆಯಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸಬೇಕೆಂದು ೨೧ ಸಾವಿರ ೫೦೦ ರೂಪಾಯಿ ನಗದು ಬಹುಮಾನ ನೀಡುವವರಿದ್ದರು. ಹಾಗೂ ಎಲ್ಲಾ ಭಾಗವಹಿಸಿ ದ್ದ ಎಲ್ಲ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಬಹುಮಾನ ನೀಡುವವರಿದ್ದರು, ಎಂದು ಹೇಳಿದರು. (ಹಿಂದೂ ಸಂಘಟನೆ ಮತ್ತು ಸಂಸ್ಥೆ ಹಿಂದೂಗಳಿಗಾಗಿ, ಹಿಂದೂಗಳ ದೇವತೆಯ ಬಗ್ಗೆ ಈ ರೀತಿಯ ಪ್ರಬಂಧ ಸ್ಪರ್ಧೆ ಏಕೆ ಆಯೋಜಿಸುವುದಿಲ್ಲ ? – ಸಂಪಾದಕರು)

೨. ಆಯೋಜಕ ಸೈಯದ್ ನಾಸಿರ ಮಾತನಾಡಿ ಪ್ರತಿಯೊಂದು ಜಾತಿ ಮತ್ತು ಧರ್ಮದವರಿಗೆ ಮಹಮ್ಮದ್ ಪೈಗಂಬರನ ಬಗ್ಗೆ ಮಾಹಿತಿ ತಿಳಿಯುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೆ ಇದರ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಅದನ್ನು ರದ್ದು ಪಡಿಸಲಾಗಿದೆ ಎಂದು ಹೇಳಿದರು. (ಯಾರಿಗೆ ಪೈಗಂಬರನ ಬಗ್ಗೆ ಮಾಹಿತಿ ಪಡೆಯುವುದಿದೆಯೋ, ಅವರು ಸ್ವತಂತ್ರವಾಗಿ ಪಡೆದುಕೊಳ್ಳುತ್ತಾರೆ ಅದಕ್ಕಾಗಿ ಈ ರೀತಿಯ ಸ್ಪರ್ಧೆ ಏರ್ಪಡಿಸುವ ಅವಶ್ಯಕತೆ ಏನಿದೆ? -ಸಂಪಾದಕರು)

ಸಂಪಾದಕೀಯ ನಿಲುವು

  • ಮಹಮ್ಮದ್ ಪೈಗಂಬರ್ ಬಗ್ಗೆ ನಿಬಂಧ ಬರೆಯುವುದಿದೆಯೆಂದು, ಇದು ತಿಳಿದ ಬಳಿಕವೂ ಹಿಂದೂಗಳು ಇದರಲ್ಲಿ ಭಾಗವಹಿಸಿದ್ದರು ? ಹಿಂದೂಗಳಿಗೆ ಧರ್ಮ ಶಿಕ್ಷಣ ಇಲ್ಲದೆ ಇರುವುದರಿಂದ ಕೇವಲ ಬಹುಮಾನ ಪಡೆಯಲು ಮತ್ತು ಸರ್ವ ಧರ್ಮಸಮಭಾವ ಕಾಪಾಡುವುದಕ್ಕಾಗಿ ಈ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎನ್ನುವುದನ್ನು ಗಮನಿಸಬೇಕು!
  • ಹಿಂದೂಗಳು ಹಿಂದೂ ದೇವತೆಗಳ ಬಗ್ಗೆ ಈ ರೀತಿಯ ಸ್ಪರ್ಧೆ ಆಯೋಜಿಸಿದರೆ , ಅನ್ಯಧರ್ಮೀಯರು ಎಂದಾದರು ಇದರಲ್ಲಿ ಸಹಭಾಗಿ ಆಗುತ್ತಾರೆಯೆ ?