ಸೂರತ್ (ಗುಜರಾತ) ಇಲ್ಲಿ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸುವ ವ್ಯಕ್ತಿಯ ಬಂಧನ

ನವದೆಹಲಿ -ಗುಜರಾತ ಪೋಲಿಸರು ಸೂರತನಲ್ಲಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಆಯ್.ಎಸ್.ಆಯ್. ಗಾಗಿ ಗೂಢಾಚಾರಿಕೆ ನಡೆಸುತ್ತಿದ್ದ ದೀಪಕ ಕಿಶೋರ ಭಾಯಿ ಸಾಳುಂಖೆ ಹೆಸರಿನ ೩೩ ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಭಾರತೀಯ ಸೇನೆಯ ಪುಣೆಯ ದಕ್ಷಿಣ ಕಮಾಂಡದವರಿಂದ ದೊರೆತಿರುವ ಗೌಪ್ಯ ಮಾಹಿತಿಯ ಆಧಾರದಲ್ಲಿ ಅವನನ್ನು ಬಂಧಿಸಲಾಗಿದೆ. ದೀಪಕ ಸುರತ ನಲ್ಲಿ ಭುವನೇಶ್ವರಿ ಪ್ರದೇಶದಲ್ಲಿ ವಾಸಿಸುತ್ತಿದ್ದನು ಮತ್ತು ಅವನು ಬಟ್ಟೆಯ ಅಂಗಡಿ ಇದೆ ಅವನು ಪಾಕಿಸ್ತಾನದಲ್ಲಿರುವ ಆಯ್.ಎಸ್.ಆಯ್. ಪ್ರಮುಖ ಹಾಮಿದ್ ಮತ್ತು ಕಾಶಿಫ ಇವರ ಸಂಪರ್ಕದಲ್ಲಿ ಇದ್ದನು. ಅವನು . ಅವರಿಗೆ ಗೌಪ್ಯ ಮಾಹಿತಿಯನ್ನು ಪೂರೈಸುತ್ತಿದ್ದನು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು !