ಮುಸ್ಲಿಂ ದೇಶಗಳ ಸಂಘಟನೆಯ ಕಾರ್ಯದರ್ಶಿಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರವಾಸ

ಭಾರತವು ಮುಸ್ಲಿಂ ದೇಶಗಳ ಸಂಘಟನೆಯನ್ನು ಟೀಕಿಸಿದೆ

ನವದೆಹಲಿ– ಮುಸ್ಲಿಂ ದೇಶಗಳ ಸಂಘಟನೆಯಾಗಿರುವ `ಆರ್ಗನೈಝೇಶನ ಆಫ್ ಇಸ್ಲಾಮಿಕ ಕೋ-ಆಪರೇಶನ’(`ಓ ಆಯ್ ಸಿ) ಅನ್ನು ಭಾರತ ಮತ್ತೊಮ್ಮೆ ಟೀಕಿಸಿದೆ. ಕಾಶ್ಮೀರ ವಿಷಯದಲ್ಲಿ ನಿರಂತರವಾಗಿ ಬೇರೆ ಬೇರೆ ವ್ಯಾಸಪೀಠದಿಂದ ಭಾಷಣಗಳನ್ನು ಮಾಡಿದ ಬಳಿಕ ಈಗ ಈ ಸಂಘಟನೆಯ ಕಾರ್ಯದರ್ಶಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದಾರೆ. `ಓಆಯ್.ಸಿ’ ಯ ಈ ಕೃತ್ಯವನ್ನು ಭಾರತದ ವಿದೇಶಾಂಗ ಸಚಿವಾಲಯವು ವಿರೋಧ ವ್ಯಕ್ತಪಡಿಸಿದೆ.

೧. ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರವಿಂದಮ್ ಬಾಗಚಿಯವರು ಪ್ರಸಾರ ಮಾಡಿರುವ ಪ್ರಕಟಣೆಯಲ್ಲಿ, ನಾವು `ಓಆಯ್.ಸಿ’ ಯ ಕಾರ್ಯದರ್ಶಿಯವರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭೇಟಿಯನ್ನು ಮತ್ತು ಈ ಭೇಟಿಯ ಸಮಯ ಜಮ್ಮೂ ಮತ್ತು ಕಾಶ್ಮೀರ ವಿಷಯದಲ್ಲಿ ಮಾಡಿರುವ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. `ಓ ಆಯ್ ಸಿ’ ಯ ಜಮ್ಮೂ-ಕಾಶ್ಮೀರದೊಂದಿಗೆ ಯಾವುದೇ ಸಂಬಂಧವಿಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವನ್ನು ಸಹಿಸಿಕೊಳ್ಳಲಾಗುವುದಿಲ್ಲ. `ಓ ಆಯ್.ಸಿ’ ಈಗಾಗಲೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. `ಓ ಆಯ್. ಸಿ’ಯ ಕಾರ್ಯದರ್ಶಿಯವರು ದುರ್ದೈವದಿಂದ ಪಾಕಿಸ್ತಾನದ ವಕ್ತಾರರಾಗಿದ್ದಾರೆ. ಎಂದು ತಿಳಿಸಿದೆ.

೨. ಮುಸ್ಲಿಂ ದೇಶಗಳ ಸಂಘಟನೆಯ ಕಾರ್ಯದರ್ಶಿ, ಹಿಸೇನ ಬ್ರಾಹಿಮ್ ತಾಹಾ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ` ಕಾಶ್ಮೀರ ವಿವಾದಕ್ಕೆ `ಓ. ಆಯ್.ಸಿ’ಯ ಕಾರ್ಯಸೂಚಿಯಲ್ಲಿ ಸರ್ವೋಚ್ಚ ಪ್ರಾಮುಖ್ಯತೆಯಿದೆ. ಮುಸ್ಲಿಂ ದೇಶಗಳ ಸಂಘಟನೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಕಾಶ್ಮೀರ ವಿವಾದವನ್ನು ಬಿಡಿಸಲು ಸಂವಾದದ ಮಾರ್ಗವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

೩. ಬ್ರಾಹಿಮ್ ತಾಹಾ ಮುಂದುವರಿಸುತ್ತಾ, “ಕಾಶ್ಮೀರ ವಿವಾದವು ಒಂದು ರಾಜನೈತಿಕ ಅಂಶವಾಗಿದೆ. ಇದನ್ನು ನಡುರಸ್ತೆಯಲ್ಲಿ ನಿಂತು ಚರ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ನಮಗೆ ಈ ವಿಷಯದ ಮೇಲೆ ಇತರೆ ದೇಶಗಳು, ಸಂಘಟನೆಗಳ ಬೆಂಬಲದ ಆವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಜಯತು ಜಯತು ಹಿಂದೂರಾಷ್ಟ್ರಮ್

ಸಂಪಾದಕೀಯ ನಿಲುವು

ಮುಸ್ಲಿಂ ದೇಶಗಳಿಗೆ ಈಗ ಸಧ್ಯ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದನ್ನು ದೂರಗೊಳಿಸುವುದನ್ನು ಬಿಟ್ಟು ಕಾಶ್ಮೀರ ಸಮಸ್ಯೆಯಲ್ಲಿ ಮೂಗು ತೂರಿಸುವ ಮುಸ್ಲಿಂ ದೇಶಗಳಿಗೆ ತಿಳಿಯುವಂತಹ ಭಾಷೆಯಲ್ಲಿ ಭಾರತವು ಉತ್ತರಿಸುವುದು ಆವಶ್ಯಕ