ಕ್ರಿಕೆಟ ಆಟಗಾರ ವೃಷಭ ಪಂತ ಇವರಿಂದ ಶಾಸ್ತ್ರೀಯ ಸಂಗೀತದ ಅವಮಾನ

ಶಾಸ್ತ್ರೀಯ ಗಾಯಕರು ಮತ್ತು ವಾದಕರಿಂದ ಟೀಕೆಗಳು

(ಎಡದಿಂದ) ಸಿತಾರ ವಾದಕ ಪೂರಬಾಯನ ಚಟರ್ಜಿ, ಭಾರತೀಯ ಕ್ರಿಕೆಟ್ ಸಂಘದ ಕ್ಷೇತ್ರ ರಕ್ಷಕ ವೃಷಭ ಪಂತ, ಪ್ರಸಿದ್ಧ ಗಾಯಕಿ ಕೌಶಿಕಿ ಚಕ್ರವರ್ತಿ

ನವದೆಹಲಿ – ಭಾರತೀಯ ಕ್ರಿಕೆಟ್ ಸಂಘದ ಕ್ಷೇತ್ರ ರಕ್ಷಕ ವೃಷಭ ಪಂತ ಇವರು ಡ್ರೀಮ್ ೧೧ ಈ ಜಾಹೀರಾತಿನ ಮೂಲಕ ಶಾಸ್ತ್ರೀಯ ಸಂಗೀತವನ್ನು ಅಪಹಾಸ್ಯ ಮಾಡಿರುವುದರಿಂದ ಅವರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ . ಈ ಜಾಹೀರಾತಿನಲ್ಲಿ ವೃಷಭ ಪಂತ ಇವರು ಶಾಸ್ತ್ರೀಯ ಗಾಯಕ ಎಂದು ತೋರಿಸಲಾಗಿದೆ. ಎಲ್ಲಾ ವಾದಕರು ಕುಳಿತಿರುವುದು ಕಾಣುತ್ತಿದ್ದು ವೃಷಭ ಪಂತ ಹಾಡಲು ಬರುತ್ತಾರೆ. ಆ ಸಮಯದಲ್ಲಿ ಅವರು ವಿಚಿತ್ರವಾದ ಧ್ವನಿಯಲ್ಲಿ ಹಾಡುತ್ತಾ ಕ್ಷೇತ್ರ ರಕ್ಷಣೆ ಮಾಡುವ ಹಾಗೆ ಕೈಯನ್ನು ಆಡಿಸುತ್ತಿರುವುದು ಕಾಣಿಸುತ್ತದೆ. ಆ ಸಮಯದಲ್ಲಿ ವೃಷಭ ಇವರು ದೇವರಿಗೆ ಆಭಾರ ವ್ಯಕ್ತಪಡಿಸಿ ನಾನು ನನ್ನ ಕನಸು ನೋಡಿದೆ. ನಾನು ಕ್ರಿಕೆಟ್ ಆಟಗಾರನಾದೆ ಇದು ಒಳ್ಳೆಯದಾಯಿತು ಎಂದು, ಶಾಸ್ತ್ರಿಯ ಗಾಯನವನ್ನು ಕೀಳಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

೧. ಈ ಜಾಹೀರಾತಿನ ಬಗ್ಗೆ ಪ್ರಸಿದ್ಧ ಗಾಯಕಿ ಕೌಶಿಕಿ ಚಕ್ರವರ್ತಿ ಇವರು ಟ್ವೀಟ್ ಮೂಲಕ ವೃಷಭ ಪಂತ ಇವರಿಗೆ, ಈ ಜಾಹೀರಾತಿನ ಬಗ್ಗೆ ಅಸಹ್ಯವಾಗಿ ಹೇಳಲು ನನ್ನ ಹತ್ತಿರ ಪದಗಳಿಲ್ಲ. ನಮ್ಮ ಪರಂಪರೆಯ ಬಗ್ಗೆ ಅಗೌರವ ತೋರಿಸಿರುವುದರಿಂದ ನೀವು ಮೂರ್ಖರಾಗಿದ್ದೀರಿ. ಇದು ಪಂಡಿತ್ ರವಿಶಂಕರ, ಉಸ್ತಾದ್ ಜಾಕಿರ ಹುಸೇನ್, ಪಂಡಿತ ಭೀಮ ಸೇನ ಜೋಶಿ ಮುಂತಾದವರ ಸಂಗೀತ ಇರುವುದು. ನನಗೆ ಖಾತ್ರಿ ಇದೆ ನೀವು ಈ ರೀತಿ ಮಾಡಿ ನಿಮ್ಮ ಭವಿಷ್ಯ ಗಳಿಸಬಹುದು ಆದರೆ ಅದು ಅಯೋಗ್ಯವಾಗಿದೆ ? ನಾನು ಭಾರತೀಯ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡುತ್ತೇನೆ. ನಾನು ಕ್ರಿಕೆಟ್ ನೋಡುವುದಿಲ್ಲ, ಆದರೆ ಎಂದು ಕೂಡ ನಿಮ್ಮ ಆಟವನ್ನು ಅವಮಾನಿಸಿಲ್ಲ. ನಿಮಗೆ ಯಾವುದಾದರೂ ವಿಷಯ ತಿಳಿದುಕೊಳ್ಳುವ ಪ್ರಶಿಕ್ಷಣ ಇಲ್ಲದೆ ಇದ್ದರೆ, ಆಗ ಕನಿಷ್ಠ ಅದರ ಬಗ್ಗೆ ಗೌರವ ತೋರಿಸುವಷ್ಟಾದರೂ ತಿಳುವಳಿಕೆ ಇರುವವರಾಗಿರಿ ಎಂದು ಹೇಳಿದ್ದಾರೆ.

೨. ಸಿತಾರ ವಾದಕ ಪೂರಬಾಯನ ಚಟರ್ಜಿ ಇವರು ಅವರ ಅಭಿಪ್ರಾಯ ವಿಡಿಯೋದ ಮೂಲಕ ಟ್ರೀಟ್ ಮಾಡಿದ್ದಾರೆ. ಅದರಲ್ಲಿ ಅವರು, ಇದು ಮೊದಲೇನು ಅಲ್ಲ , ಇದಕ್ಕಾಗಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತೀಯ ಸಂಗೀತದ ಅವಮಾನ ಮಾಡುವವರ ವಿರುದ್ಧ ದೂರು ದಾಖಲಿಸಿ ಅವರಿಗೆ ಶಿಕ್ಷೆ ನೀಡಬೇಕು , ಇದರಿಂದ ಬೇರೆ ಯಾರೇ ಕೂಡ ಈ ರೀತಿ ಅವಮಾನ ಮಾಡಲು ಧೈರ್ಯ ಮಾಡುವುದಿಲ್ಲ !