ಜಿಹಾದಿ ಝಾಕೀರ ನಾಯಿಕನನ್ನು ಸಮರ್ಥಿಸುವ ಫೇಸಬುಕ ಗುಂಪಿನಲ್ಲಿರುವ ಉತ್ತರಪ್ರದೇಶದ ಮುಸಲ್ಮಾನ ಪೊಲೀಸ

ಮಾಹಿತಿ ಬಹಿರಂಗವಾದ ಬಳಿಕ ತನ್ನ ಫೇಸಬುಕ ಖಾತೆಯನ್ನು ಸ್ಥಗಿತಗೊಳಿಸಿದ ಪೊಲೀಸ ಸಿಪಾಯಿ.

ಮುಶೀರ್ ಖಾನ್

ಲಲಿತಪುರ (ಉತ್ತರಪ್ರದೇಶ)– ಇಲ್ಲಿನ ಪೊಲೀಸ ಸಿಪಾಯಿ ಮುಶೀರ ಖಾನ ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಝಾಕೀರ ನಾಯಿಕನನ್ನು ಸಮರ್ಥಿಸಿದ್ದಾನೆ. ಖಾನನ ಫೇಸಬುಕ್ ಖಾತೆಯಲ್ಲಿ ಅವನು ಈ ಸಂದರ್ಭದಲ್ಲಿ ಶೇರ ಮಾಡಿರುವ ಪೋಸ್ಟ ಕಾಣಿಸುತ್ತಿದೆ. ಇದರಲ್ಲಿ ಮತಾಂತರದ ಉಲ್ಲೇಖವಿದೆ. ಮುಶೀರ ಖಾನ ಮಾಡಿರುವ ಈ ಕೃತ್ಯ ಬಹಿರಂಗವಾದ ಬಳಿಕ ಅವನು ತನ್ನ ಫೇಸಬುಕ ಖಾತೆಯನ್ನು ಸ್ಥಗಿತಗೊಳಿಸಿದ್ದಾನೆ.

ಸೀತಾಪುರದ ಒಂದು ಮಂದಿರದ ಮಹಂತ ಬಜರಂಗ ಮುನಿ ಉದಾಸೀನ ಇವರು ಮುಶೀರ ಖಾನ ಇವನ ಫೇಸಬುಕ ಖಾತೆಯಲ್ಲಿದ್ದ ಈ ಪೋಸ್ಟನ ಚಿತ್ರವನ್ನು ಪ್ರಸಾರ ಮಾಡಿದ್ದಾರೆ. ಮುಶೀರ ಖಾನ ಯಾವ ಫೇಸಬುಕ್ ಖಾತೆಯೊಂದಿಗೆ ಸಂಪರ್ಕದಲ್ಲಿದ್ದಾನೆಯೋ, ಅದರ ಹೆಸರು ‘ಡಾ. ಝಾಕೀರ ನಾಯಿಕರನ್ನು ಸಮರ್ಥಿಸುವ ಗುಂಪು’ ಇದಾಗಿದೆ. ಈ ಗುಂಪಿನಲ್ಲಿ ೪ ಲಕ್ಷ ೧೫ ಸಾವಿರ ಜನರು ಜೋಡಣೆಗೊಂಡಿದ್ದಾರೆ. ಇದರಲ್ಲಿ ಮುಶೀರ ಖಾನನೂ ಒಬ್ಬನಾಗಿದ್ದಾನೆ. ಮಹಂತ ಬಜರಂಗ ಮುನಿ ಉದಾಸೀನ ಇವರು ಈ ವಿಷಯವನ್ನು ಟ್ವೀಟ ಮಾಡಿ ಮುಶೀರ ಖಾನ ಭಯೋತ್ಪಾದಕರ ಸಂಪರ್ಕದಲ್ಲಿರುವ ಸಾಧ್ಯತೆಯಿದೆಯೆಂದು ತಿಳಿಸಿದ್ದಾರೆ. ಅವರು ರಾಷ್ಟ್ರೀಯ ತನಿಖಾ ದಳದಿಂದ ಖಾನನ ವಿಚಾರಣೆ ನಡೆಸುವಂತೆ ಕೋರಿದ್ದಾರೆ.

ಸಂಪಾದಕೀಯ ನಿಲುವು

ಪೊಲೀಸ ದಳದಲ್ಲಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?’, ಎನ್ನುವುದು ಪೊಲೀಸರಿಗೆ ತಿಳಿಯದೇ ಇದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಎಂದಾದರೂ ಚೆನ್ನಾಗಿ ಇರಬಹುದೇ? ಇಂತಹ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಅವರನ್ನು ಕಾರಾಗೃಹಕ್ಕೆ ದಬ್ಬಬೇಕು.