ಮಂಗಳೂರು ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ಬುರ್ಖಾ ಹಾಕಿ ನೃತ್ಯ !

೪ ವಿದ್ಯಾರ್ಥಿಗಳ ಅಮಾನತು !

ಮಂಗಳೂರು (ಕರ್ನಾಟಕ) – ಇಲ್ಲಿನ ಸೇಂಟ ಜೋಸೆಫ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿಗಳು ಬುರ್ಖಾ ಹಾಕಿ ನೃತ್ಯ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾದ ನಂತರ ಮಹಾವಿದ್ಯಾಲಯವು ೪ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಈ ಸಂದರ್ಭದಲ್ಲಿ ಮಹಾವಿದ್ಯಾಲಯವು ಪ್ರಸಿದ್ಧಿಗಾಗಿ ನೀಡಿದ ಪತ್ರಕದಲ್ಲಿ ‘ವಿದ್ಯಾರ್ಥಿಗಳ ಈ ನೃತ್ಯವು ಆಯೋಜಿತ ಕಾರ್ಯಕ್ರಮದ ಭಾಗವಾಗಿರಲಿಲ್ಲ. ಆದುದರಿಂದ ನೃತ್ಯ ಮಾಡಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಸಮಾಜದಲ್ಲಿನ ಐಕ್ಯತೆಯನ್ನು ಹಾಳುಮಾಡುವ ಯಾವುದೇ ಕೃತಿಯನ್ನು ಮಹಾವಿದ್ಯಾಲಯವು ಬೆಂಬಲಿಸುವುದಿಲ್ಲ’ ಎಂದು ಹೇಳಿದೆ.