ಕೇಂದ್ರದಲ್ಲಿನ ಹಿಂದಿನ ಸರಕಾರಗಳು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವುದರಿಂದ ಭಾರತದಲ್ಲಿ ಜಿಹಾದ್ ಪ್ರಸಾರವಾಗಿದೆ !

ಸತ್ಯಶೋಧಕ ಸಮಿತಿಯ ವರದಿಯ ನಿಷ್ಕರ್ಷ

ನವದೆಹಲಿ – ಭಾರತದ ಹಿಂದಿನ ಸರಕಾರವು ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ನರಸಂಹಾರ ಸಂಪೂರ್ಣವಾಗಿ ನಿರಾಕರಿಸಿತು. ಜಾತ್ಯತೀತತೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದೂ ಸಮಾಜವನ್ನು ಬಲಿಪಶುವನ್ನಾಗಿ ಮಾಡಲಾಯಿತು, ಎಂದು ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ ಸಮೀಕ್ಷೆ ನಡೆಸಲು ಸ್ಥಾಪಿಸಲಾದ ಸತ್ಯಶೋಧಕ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಕಲಂ ೩೭೦ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿನ ಹಿಂದೂ ಅಲ್ಪಸಂಖ್ಯಾತರ ಜೀವನದ ಮೇಲೆ ಮತ್ತು ೨೦೨೦ ರ ಪ್ರಾರಂಭದಿಂದ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿ ನಡೆದಿರುವ ಹತ್ಯೆಗಳ ಸಮೀಕ್ಷೆಯ ಆಧಾರದಲ್ಲಿದೆ. ಕೆಲವು ಮುಂಚೂಣಿಯ ಕಾಶ್ಮೀರ ಹಿಂದೂ ಸಂಘಟನೆಗಳಿಂದ ರಾಹುಲ್ ಕೌಲ್, ಅಮಿತ್ ರೈನ ಮತ್ತು ವಿಠ್ಠಲ ಚೌದರಿ ಈ ೩ ಸದಸ್ಯರ ಸತ್ಯಶೋಧಕ ಸಮಿತಿಯ ಸ್ಥಾಪನೆ ಮಾಡಿದರು.

೧. ಕಾಶ್ಮೀರವನ್ನು ಇಸ್ಲಾಮಿಸ್ಥಾನ ಮಾಡಲು ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಕಣಿವೆಯಲ್ಲಿನ ನಾಯಕರು ಮತ್ತು ರಾಜಕೀಯ ಪಕ್ಷ ಇವರಿಗೆ ರಾಜ್ಯದಿಂದ ಸಂರಕ್ಷಣೆ ಪೂರೈಸಲಾಗುತ್ತದೆ. ಮೆಹಬೂಬ ಮುಫ್ತಿ, ಪಾರುಕ ಅಬ್ದುಲ್ಲಾ , ಓಮರ್ ಅಬ್ದುಲ್ಲ, ಸಜ್ಜಾದ ಲೋನ್ , ಅಲ್ಲಾಫ ಬುಖಾರಿ ಮತ್ತು ಇತರ ಅನೇಕ ರಾಜಕೀಯ ನಾಯಕರಿಗೆ ಸುರಕ್ಷೆ ಪೂರೈಸಲಾಗುತ್ತಿದೆ.

೨. ಹಿಂದೂಗಳ ಹತ್ಯೆ ಮಾಡುವವರಿಗೆ ಶಿಕ್ಷೆ ನೀಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಇವರ ಬೇಜವಾಬ್ದಾರಿತನದಿಂದ ಕಣಿವೆಯಲ್ಲಿನ ಜಿಹಾದಿಗಳಿಗೆ ಸೊಪ್ಪು ಹಾಕಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.

೩. ಈ ವರದಿಯಲ್ಲಿ, ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರ ನಿರಾಕರಿಸುವುದು ಕೇವಲ ಕಾಶ್ಮೀರದಲ್ಲಿನ ಹಿಂದೂಗಳಿಗಾಗಿ ವಿನಾಶಕಾರಿ ಆಗಲಿಲ್ಲ, ಉಳಿದಿರುವ ಭಾರತದಲ್ಲಿ ಕೂಡ ಜಿಹಾದದ ಪ್ರಸಾರ ನಡೆಯಿತು. ಭಾರತದ ಮೂಲೆ ಮೂಲೆಯಲ್ಲಿ ಕಟ್ಟರವಾದಿ ವಿಚಾರಧಾರೆ ವಿಸ್ತರಿಸಿತು. ಭಾರತದ ಅನೇಕ ಸ್ಥಳಗಳಲ್ಲಿ ಜಿಹಾದಿ ದಾಳಿಗಳು ನಡೆಯುತ್ತಿದೆ.