ರಾತ್ರಿಯಲ್ಲಿ ತಿರುಗುವುದು ಪ್ರತಿಯೊಬ್ಬನಿಗೂ ಸುರಕ್ಷಿತ ಎನಿಸುವಂತಹ ವ್ಯವಸ್ಥೆಯನ್ನು ಸರಕಾರವು ಕಲ್ಪಿಸಬೇಕು !

ಕೇರಳ ಸರಕಾರಕ್ಕೆ ಛೀಮಾರಿ ಹಾಕಿದ ಕೇರಳ ಉಚ್ಚ ನ್ಯಾಯಾಲಯ

ವಿದ್ಯಾರ್ಥಿನಿಯರನ್ನಲ್ಲ, ಪುರುಷರನ್ನೇ ಬೀಗ ಹಾಕಿರಿಸಬೇಕು ! – ಉಚ್ಚ ನ್ಯಾಯಾಲಯದ ಅಭಿಪ್ರಾಯ

ಕೊಚ್ಚಿ (ಕೇರಳ) – ಕೋಳಿಕೊಡ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ರಾತ್ರಿ 9:30 ರ ನಂತರ ಹಾಸ್ಟೆಲ್‌ಗೆ ಹೊಗಲು ಮತ್ತು ಬರಲು ನಿರ್ಬಂಧಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಉಚ್ಚ ನ್ಯಾಯಾಲಯವು `ಒಂಭತ್ತೂವರೆಯ ನಂತರ ವಿದ್ಯಾರ್ಥಿನಿಯರಿಗೆ ಮಾತ್ರ ಏಕೆ ಸಂಚಾರನಿಷೇಧವನ್ನು ವಿಧಿಸಲಾಗಿದೆ?

ರಾಜ್ಯದ ಯಾವುದಾದರೊಂದು ಹುಡುಗರ ಹಾಸ್ಟೆಲ್‌ನಲ್ಲಿ ಇಂತಹ ನಿಷೇಧವಿದೆಯೇ? ವಾಸ್ತವದಲ್ಲಿ ಸಮಸ್ಯೆ ಸೃಷ್ಟಿಸುವ ಪುರುಷರನ್ನೇ ಬೀಗ ಹಾಕಿ ಇರಿಸಬೇಕು’, ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. `ರಾತ್ರಿಯಲ್ಲಿ ಭಯಪಡುವ ಅಗತ್ಯವಿಲ್ಲ. ಪ್ರೈಯೊಬ್ಬನಿಗೂ ರಾತ್ರಿ ವೇಳೆ ತಿರುಗಲು ಸುರಕ್ಷಿತವೆನಿಸುವಂತಹ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕು’, ಎಂದು ನ್ಯಾಯಾಲಯ ಸರಕಾರಕ್ಕೆ ಛೀಮಾರಿ ಹಾಕಿತು.

ಸಂಪಾದಕೀಯ ನಿಲುವು

ರಾಮರಾಜ್ಯದಲ್ಲಿ, ಮಹಿಳೆಯರು ಮೈಮೇಲೆ ಆಭರಣಗಳನ್ನು ಧರಿಸಿ ರಾತ್ರಿಯಲ್ಲಿ ತಿರುಗಾಡುತ್ತಿದ್ದರು; ಆದರೆ ಪ್ರಸ್ತುತ ಮಹಿಳೆಯರು ಹಗಲಿನಲ್ಲಿಯೂ ಹೀಗೆ ತಿರುಗಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಧಾರ್ಮಿಕ ಆಡಳಿತಗಾರರ ಮತ್ತು ಪ್ರಜೆಗಳ ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ!