ವಿವಾದದಿಂದ 35 ಚರ್ಚ್ ಗಳು ಮುಚ್ಚಿದವು
ತಿರುವನಂತಪುರಂ (ಕೇರಳ) – ಕೇರಳದಲ್ಲಿ ರೋಮನ ಕ್ಯಾಥೋಲಿಕ ಚರ್ಚ್‌ನಲ್ಲಿ ಭಾನುವಾರದ ಒಂದು ಆಚರಣೆಯ ಬಗ್ಗೆ ಕ್ರೈಸ್ತ ಸಂಘಟನೆಗಳ ನಡುವೆ ವಿವಾದ ಎದ್ದ ನಂತರ ರಾಜ್ಯದಲ್ಲಿನ 35 ಚರ್ಚ್‌ಗಳನ್ನು ಮುಚ್ಚಲಾಗಿದೆ. ಈ ಚರ್ಚ್ ಗಳ ಹೊರಗೆ ಪೊಲೀಸರನ್ನು ನೇಮಿಸಲಾಗಿದೆ. ಪೊಲೀಸರ ಪ್ರಕಾರ ಶಾಂತಿ ಮರುಸ್ಥಾಪನೆಯಾದ ನಂತರ ಚರ್ಚ್‌ಗಳನ್ನು ಪ್ರಾರ್ಥನೆಗಾಗಿ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.
೧. ಕ್ರೈಸ್ತರ ಪ್ರಕಾರ, ಈಶ್ವರನು 6 ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದರು ಮತ್ತು 7 ನೇ ದಿನದಂದು ವಿಶ್ರಾಂತಿ ಪಡೆದರು. ಇದರಿಂದಾಗಿಯೇ ಕ್ರೈಸ್ತರು ಭಾನುವಾರದಂದು ಯೇಸುಕ್ರಿಸ್ತನನ್ನು ಪೂಜಿಸುತ್ತಾರೆ. ಈ ಪೂಜೆಯನ್ನು ‘ಹೋಲಿ ಮಾಸ್’ ಎಂದು ಕರೆಯಲಾಗುತ್ತದೆ.
೨. ಈ ಪ್ರಾರ್ಥನೆಯ ಸಮಯದಲ್ಲಿ, ಪಾದ್ರಿ ಮತ್ತು ಭಕ್ತರು ಪೂರ್ವ ದಿಕ್ಕಿಗೆ ಮುಖ ಮಾಡಬೇಕೆಂಬ ಸೂಚನೆಯನ್ನು ರೋಮನ ಕ್ಯಾಥೋಲಿಕ ಚರ್ಚ್‌ನ ಸ್ಥಳೀಯ ಶಾಖೆ ‘ಸೈರೊ ಮಲಬಾರ’ ನೀಡಿತು; ಆದರೆ ಕೇರಳದ ಆಧುನಿಕ ಕ್ಯಾಥೋಲಿಕ ಕ್ರೈಸ್ತರ ಪ್ರಕಾರ, ಈ ಸಂಗತಿಯು ಎಲ್ಲಿಯೂ ಬರೆದಿಲ್ಲ. ಇದರಿಂದಾಗಿ ಅನುಯಾಯಿಗಳು ಪಾದ್ರಿಗಳನ್ನು ನೋಡಲು ಮತ್ತು ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗುತ್ತಿಲ್ಲ.
೩. ಕ್ರೈಸ್ತ ಸಮುದಾಯದ ತಜ್ಞರ ಪ್ರಕಾರ, ಪ್ರಾರ್ಥನೆಯ ಸಮಯದಲ್ಲಿ ಅರ್ಧದಷ್ಟು ಸಮಯ ಪಾದ್ರಿಗಳು ಅನುಯಾಯಿಗಳ ಕಡೆ ನೋಡಬೇಕೆಂದು ನಿಯಮ ಹೇಳುತ್ತದೆ. ಉಳಿದ ಸಮಯದಲ್ಲಿ ಪೂರ್ವದ ಕಡೆಗೆ ನೋಡಬೇಕು; ಆದರೆ ಆಧುನಿಕ ಕ್ರೈಸ್ತರು ಇದನ್ನು ಸ್ವೀಕರಿಸಲು ನಿರಾಕರಿಸಿದರು. ಅವರ ಪ್ರಕಾರ 50 ವರ್ಷಗಳ ಪದ್ಧತಿ ಮುಂದುವರಿಯಬೇಕು.
ಅಲ್ಮಾಯಾ ಮುನ್ನೆಟ್ಟಂ ಸಂಘಟನೆಯ ಪ್ರಕಾರ, ‘ನಾವು ಪೋಪ ಫ್ರಾನ್ಸಿಸ್ ಅವರಿಂದ ಅನುಮತಿ ಪಡೆದರೆ ನಮ್ಮ ಚರ್ಚ್‌ನಲ್ಲಿ ಜನರೆಡೆ ಮುಖ ಮಾಡಿಕೊಂಡು ಪ್ರಾರ್ಥನೆ ನಡೆಯುವುದು; ಆದರೆ ಈಗ ಹೊಸ ಆದೇಶವನ್ನು ಒಪ್ಪಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ.’ ‘ಆದೇಶವನ್ನು ಹಿಂಪಡೆಯದಿದ್ದರೆ ರೋಮನ ಕ್ಯಾಥೋಲಿಕ ಚರ್ಚ್ ಗಂಭೀರ ಪರಿಣಾಮಗಳನ್ನು ಭೋಗಿಸಬೇಕಾಗುವುದು’ ಎಂದು ಸಂಘಟನೆ ಎಚ್ಚರಿಸಿದೆ.
ಸಂಪಾದಕೀಯ ನಿಲುವುಯಾವಾಗಲೂ ಹಿಂದೂ ಧರ್ಮದಲ್ಲಿನ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳ ಬಗ್ಗೆ ಹಿಂದೂಗಳಲ್ಲಿ ವಿವಾದಗಳು ಉಂಟಾದಾಗ, ಟೀಕೆ ಮಾಡುವ ಪ್ರಗತಿ(ಅಧೋ)ಪರರು ಮತ್ತು ಜಾತ್ಯತೀತವಾದಿಗಳು, ಕ್ರೈಸ್ತರಲ್ಲಿನ ಈ ವಿವಾದದಿಂದಾಗಿ 35 ಚರ್ಚ್‌ಗಳನ್ನು ಮುಚ್ಚಲಾಗುರಿವಾಗ ಮಾತ್ರ ಮೌನವಾಗಿದ್ದಾರೆ ! |