ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಸಾಕೇತ ಗೋಖಲೆಯವರ ಬಂಧನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಪಕೀರ್ತಿ ಮಾಡಿರುವ ಪ್ರಕರಣ

ನವದೆಹಲಿ- ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಕಟವರ್ತಿಯೆಂದು ಗುರುತಿಸಲ್ಪಡುವ ಸಾಕೇತ ಗೋಖಲೆಯವರನ್ನು ಗುಜರಾತ ಪೊಲೀಸರು ರಾಜಸ್ತಾನದ ಜಯಪುರ ವಿಮಾನ ನಿಲ್ದಾಣದಿಂದ ಬಂಧಿಸಿದರು. ಡಿಸೆಂಬರ 1, 2022 ರಂದು ಗುಜರಾತಿನ ಮೊರಬಿಯಲ್ಲಿ ಸೇತುವೆ ಕುಸಿದು ಜರುಗಿದ ದುರ್ಘಟನೆಯಲ್ಲಿ 135 ಜನರು ಮರಣಿಸಿದ್ದರು. ತದನಂತರ ಮೋದಿಯವರು ಘಟನಾಸ್ಥಳಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಗೋಖಲೆಯವರು ಒಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಪಡೆದುಕೊಂಡಿರುವ ಮಾಹಿತಿಯ ಸಂದರ್ಭವನ್ನು ನೀಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ಪ್ರವಾಸಕ್ಕೆ 30 ಕೋಟಿ ರೂಪಾಯಿಗಳ ವೆಚ್ಚವಾಗಿರುವುದಾಗಿ ಟ್ವೀಟ ಮಾಡಿದ್ದರು. ವಾಸ್ತವವಾಗಿ ಯಾರೂ ಇಂತಹ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಕೇಳಿರಲಿಲ್ಲ ಎಂದು ತಿಳಿದುಬಂದಿತು.

ಪ್ರಧಾನಮಂತ್ರಿ ಮೋದಿಯವರ ಅಪಕೀರ್ತಿ ಮಾಡಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಮೋದಿಯವರ ಸ್ವಾಗತಕ್ಕಾಗಿ 5 ಕೋಟಿ, ಕಾರ್ಯಕ್ರಮದ ಆಯೋಜನೆ, ಛಾಯಾಚಿತ್ರಗಳನ್ನು ತೆಗೆಯಲು ಐದೂವರೆ ಕೋಟಿ ವೆಚ್ಚವಾಗಿದೆ ಎಂದು ಲೆಕ್ಕವನ್ನು ಗೋಖಲೆಯವರು ತಮ್ಮ ಟ್ವೀಟನಲ್ಲಿ ಮಂಡಿಸಿದ್ದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ಯಾರೂ ಯಾರ ಮೇಲೆಯೂ ಆರೋಪ ಅಥವಾ ಟೀಕೆಯನ್ನು ಮಾಡಬಹುದು; ಆದರೆ ಯಾರೂ ಸುಳ್ಳು ಆರೋಪ ಮಾಡಿ ಯಾರದಾದರೂ ಅಪಕೀರ್ತಿ ಮಾಡುತ್ತಿದ್ದರೆ, ಅವರಿಗೆ ಶಿಕ್ಷೆಯಾಗುವ ಆವಶ್ಯಕತೆಯಿದೆ.