ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವ ೬ ಪ್ರಾಧ್ಯಾಪಕರು ೫ ದಿನಕ್ಕಾಗಿ ಅಮಾನತು !

ಇಂದೋರ್ (ಮಧ್ಯಪ್ರದೇಶ) ಇಲ್ಲಿಯ ಸರಕಾರಿ ಕಾನೂನು ಮಹಾವಿದ್ಯಾಲಯದಲ್ಲಿನ ಘಟನೆ !

ಇಂದೋರ್ (ಮಧ್ಯಪ್ರದೇಶ) – ಇಲ್ಲಿಯ ಸರಕಾರಿ ಕಾನೂನು ಮಹಾವಿದ್ಯಾಲಯದಲ್ಲಿನ ೬ ಪ್ರಾಧ್ಯಾಪಕರನ್ನು ೫ ದಿನಗಳಿಗಾಗಿ ಅಮಾನತುಗೊಳಿಸಲಾಗಿದೆ. ಈ ಪ್ರಾಧ್ಯಾಪಕರಿಂದ ಮೂಲಭೂತವಾದದ ವಿಚಾರಧಾರೆ, ಲವ್ ಜಿಹಾದ್ ಮತ್ತು ಮಾಂಸಾಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಆರೋಪಿಸಲಾಗಿದೆ. ಮಿರ್ಜಾ ಮೋಜಿಜ ಬೇಗ್, ಫಿರೋಜ್ ಅಹಮ್ಮದ್ ಮಿರ್, ಸುಹೇಲ್ ಅಹಮ್ಮದ್ ವಾಣಿ, ಪೂರ್ಣಿಮಾ ಬೆಸೇ, ಮಿಲಿಂದ ಕುಮಾರ್ ಗೌತಮ, ಮತ್ತು ಅಮೆಕ ಖೋಖರ್ ಈ ಐದು ಮಂದಿ ಅಮಾನತುಗೊಳಿಸಲಾದ ಪ್ರಾಧ್ಯಾಪಕರ ಹೆಸರುಗಳಾಗಿವೆ.

೧. ಮಹಾವಿದ್ಯಾಲಯದಲ್ಲಿನ ಪ್ರಾಧ್ಯಾಪಕರು ಮತ್ತು ಪ್ರಾಚಾರ್ಯ ಶುಕ್ರವಾರದಂದು ನಮಾಜ ಪಠಣಕ್ಕಾಗಿ ಹೊರಗೆ ಹೋಗುವುದರಿಂದ ಶುಕ್ರವಾರದಂದು ಮಹಾವಿದ್ಯಾಲಯದಲ್ಲಿ ಪಾಠ ಮಾಡಲಾಗುತ್ತಿರಲಿಲ್ಲ ಎಂಬ ಆರೋಪ ಕೂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಮಾಡಲಾಗಿದೆ.

೨. ಮಹಾವಿದ್ಯಾಲಯದ ಪ್ರಾಚಾರ್ಯ ರೆಹಮಾನ್ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು  ಮಾಡುತ್ತಿರುವ ಆರೋಪಗಳೆಲ್ಲವೂ ಅಯೋಗ್ಯವಾಗಿವೆ. ಮಹಾವಿದ್ಯಾಲಯದಲ್ಲಿ ಈ ರೀತಿ ಯ ಯಾವುದೇ ವಾತಾವರಣವಿಲ್ಲ, ಆದರೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಮಾಡಲಾದ ಆರೋಪ ಗಂಭೀರವಾಗಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವ ನಿರ್ಣಯವನ್ನು ನಾವು ತೆಗೆದುಕೊಂಡಿದ್ದೇವೆ. ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ವಜಾ ಮಾಡುವುದು ಅವಶ್ಯಕವಾಗಿದೆ. ಇದರ ವಿರುದ್ಧ ದೂರು ನೀಡಲಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದಲ್ಲಿ ಮಹಾವಿದ್ಯಾಲಯವು ಇದನ್ನು ಗಮನಿಸಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !